Thursday, November 21, 2024
Google search engine
Homeಜಿಲ್ಲೆಕಾರ್ಪೊರೇಟ್ ಕಂಪನಿಗಳ ಹುನ್ನಾರದಿಂದ ಕನ್ನಡಕ್ಕೆ ಅಪಾಯ

ಕಾರ್ಪೊರೇಟ್ ಕಂಪನಿಗಳ ಹುನ್ನಾರದಿಂದ ಕನ್ನಡಕ್ಕೆ ಅಪಾಯ

ವಿದ್ಯೆಗೆ ಬೆಲೆ ಕಟ್ಟಿರುವ, ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಿರುವ ಬಹುರಾಷ್ಟ್ರೀಯ ಕಂಪನಿಗಳ ಹುನ್ನಾರದಿಂದ ಕನ್ನಡಕ್ಕೆ ಅಪಾಯವಿದೆ ಎಂದು ಚಿಂತಕ ಪ್ರೊ. ಕೆ.ವೈ.ನಾರಾಯಣಸ್ವಾಮಿ ಆತಂಕ ವ್ಯಕ್ತಪಡಿಸಿದರು.

ತುಮಕೂರಿನ ವಿವಿ ಕಲಾ ಕಾಲೇಜು ಶನಿವಾರ ಆಯೋಜಿಸಿದ್ದ 69ನೆಯ ಕರ್ನಾಟಕ ರಾಜ್ಯೋತ್ಸವ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ವರನ್ನೂ ಒಗ್ಗೂಡಿಸುವ ರಾಜ್ಯೋತ್ಸವ ನಿತ್ಯೋತ್ಸವ ಆಗಬೇಕು. ಕೊಡಗು, ಕಲ್ಯಾಣಕರ್ನಾಟಕ, ಕರಾವಳಿ ಪ್ರದೇಶ ಸ್ವತಂತ್ರ ರಾಜ್ಯ ಕೇಳುತ್ತಿವೆ. ಇವೆಲ್ಲ ಪ್ರದೇಶಗಳು ಒಗ್ಗಟಾಗಿ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಬೇಕು. ಕನ್ನಡ ಭಾಷೆ ಎಂಬುದು ಬದುಕುವುದನ್ನು ಕಲಿಸುವ ಜೀವನದೃಷ್ಟಿ ಎಂದು ತಿಳಿಸಿದರು.

ಕನ್ನಡದಲ್ಲಿ ತಂತ್ರಜ್ಞಾನ ಉಪಯೋಗಿಸಿ, ಅದನ್ನು ಬಳಸುವಂತೆ ಮಾಡುವ ಜವಾಬ್ದಾರಿ ನಮ್ಮದಾಗಬೇಕು. ಕರ್ನಾಟಕ ನಾಡಿನ ಶ್ರೇಷ್ಠ ಮಹನೀಯರ ಪರಿಚಯವನ್ನು ಇತರೆ ರಾಜ್ಯದವರಿಗೆ ಮಾಡಿಕೊಡಬೇಕು. ಅವರೂ ಕನ್ನಡದಲ್ಲಿಯೇ ವ್ಯವಹರಿಸುವಂತಾಗಬೇಕು ಎಂದರು.

ಕುಲಸಚಿವೆ ನಾಹಿದಾ ಜಮ್‌ಜಮ್ ಮಾತನಾಡಿ, ಜಾತಿ, ಧರ್ಮ ಎಲ್ಲವನ್ನೂ ಒಗ್ಗೂಡಿಸುವುದು ಕನ್ನಡ. ಕನ್ನಡವೆಂದರೆ ಉತ್ಕೃಷ್ಟ ಭಾವನೆ. ಇತರೆ ರಾಜ್ಯಗಳಿಗೆ ಭೇಟಿ ಕೊಟ್ಟಾಗ ಅಲ್ಲಿನ ಭಾಷೆ ಕಲಿಯುತ್ತೇವೆ. ಹೊರ ರಾಜ್ಯಗಳಿಂದ ನಮ್ಮಲ್ಲಿಗೆ ಬಂದು ಕನ್ನಡ ಕಲಿಯಲು ಹಿಂಜರಿಯುವ ಮಂದಿಗೆ ಪ್ರೀತಿಯಿಂದ ಕನ್ನಡ ಹೇಳಿಕೊಡಬೇಕಿದೆ ಎಂದು ಹೇಳಿದರು.

ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ಮಾತನಾಡಿ, ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಖಾಸಗಿ ಶಾಲೆಗಳು ಬಡ ರೈತರನ್ನು, ಕಾರ್ಮಿಕರನ್ನು ಸುಲಿಗೆ ಮಾಡುತ್ತಿವೆ. ಕನ್ನಡ ಶಾಲೆಗಳು ಉಳಿದರೆ ಕನ್ನಡ ಭಾಷೆ ಶಾಶ್ವತವಾಗಿ ಬೆಳಗಲಿದೆ ಎಂದರು.

ವಿವಿ ಸಾವಯವ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಡಿ. ಸುರೇಶ್, ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಜಿ. ನಾಗರಾಜ್ ಅವರನ್ನು ಗೌರವಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular