ಬಹುರೂಪಿ ಬೆಂಗಳೂರು ಹಾಗೂ ಡಾ. ಎಂ.ಎಂ.ಕಲಬುರಗಿ ರಾಷ್ಟ್ರೀಯ ಪ್ರತಿಷ್ಠಾನ ಧಾರವಾಡ ವತಿಯಿಂದ ನ.9ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ ಸಭಾಂಗಣದಲ್ಲಿ ಮಲಯಾಳಂನ ಖ್ಯಾತ ಲೇಖಕಿ ಕೆ.ಆರ್.ಮೀರಾ ಬರೆದಿರುವ ಭಗವಂತನ ಸಾವು ಕೃತಿಯ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಬಹುರೂಪಿ ಸಂಸ್ಥಾಪಕಿ ವಿ.ಎನ್.ಶ್ರೀಜಾ ತಿಳಿಸಿದ್ದಾರೆ.
ಕೆ.ಆರ್.ಮೀರಾ ಬರೆದಿರುವ ವಿಶಿಷ್ಟ ಕೃತಿಯನ್ನು ವಿಕ್ರಂ ಕಾಂತಿಕೆರೆ ಭಗವಂತನ ಸಾವು ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಈ ಕೃತಿಯನ್ನು ಸಂವೇದನಾಶೀಲ ನಟ ಪ್ರಕಾಶ್ ರೈ ಬಿಡುಗಡೆಗೊಳಿಸುವರು.
ಕಾರ್ಯಕ್ರಮದಲ್ಲಿ ಲೇಖಕಿ ಕೆ.ಆರ್.ಮೀರಾ, ವಿಕ್ರಂ ಕಾಂತಿಕೆರೆ, ಡಾ. ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಸದಸ್ಯ, ಎಂ.ಎಂ.ಕಲಬುರ್ಗಿಯವರ ಪುತ್ರ ಶ್ರೀವಿಜಯ ಕಲಬುರ್ಗಿ, ಚಿಂತಕ ಸಿದ್ದನಗೌಡ ಪಾಟೀಲ, ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರಣ್ಣ ರಾಜೂರ ಭಾಗವಹಿಸುವರು ಎಂದು ಶ್ರೀಜಾ ಹೇಳಿದ್ದಾರೆ.