Tuesday, January 28, 2025
Google search engine
Homeಮುಖಪುಟಲೋಕಾಯತರನ್ನು ಕೊಂದ ವೈದಿಕರೇ ಬಸವಣ್ಣನನ್ನು ಕೊಂದದ್ದು-ಸಾಹಿತಿ ರಂಜಾನ್ ದರ್ಗಾ

ಲೋಕಾಯತರನ್ನು ಕೊಂದ ವೈದಿಕರೇ ಬಸವಣ್ಣನನ್ನು ಕೊಂದದ್ದು-ಸಾಹಿತಿ ರಂಜಾನ್ ದರ್ಗಾ

ನಮ್ಮದೇ ಶ್ರೇಷ್ಠ ಎಂಬ ವಾದದ ಮೂಲಕ ಇತರೆಯವರನ್ನು ಹೊರಹಾಕುವ ಮನುವಾದದ ವಿರುದ್ದ ಅತ್ಯಂತ ಸಂಘಟಿತವಾಗಿ ನಡೆದ ಹೋರಾಟವೇ ಎಲ್ಲರನ್ನು ಒಳಗೊಳ್ಳುವ ಶರಣ ಚಳವಳಿ, ಅದು ಕಲ್ಯಾಣದ ಕ್ರಾಂತಿಯಲ್ಲ, ಪರಿವರ್ತನೆಯ ಚಳವಳಿ ಎಂದು ಹಿರಿಯ ಸಾಹಿತಿ ಮತ್ತು ಬಸವತತ್ವದ ಪ್ರತಿಪಾದಕ ರಂಜಾನ್ ದರ್ಗಾ ಅಭಿಪ್ರಾಯಪಟ್ಟರು.

ತುಮಕೂರಿನ ಕನ್ನಡ ಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತುಮಕೂರು ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣ: ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಬಸವ ಸಂಸ್ಕೃತಿ ಅಥವಾ ಶರಣ ಚಳವಳಿ ಎಂಬುದು ವೈದಿಕರ ವಿರುದ್ದ ಅವೈದಿಕರು, ವರ್ಣ ಬೇಧ, ವರ್ಗ ಬೇಧ, ಲಿಂಗಬೇಧವನ್ನು ದಿಕ್ಕರಿಸಿ ನಡೆಸಿದ ಸಂಘಟಿತ ಹೋರಾಟವಾಗಿದೆ. ಹಾಗಾಗಿಯೇ ಲೋಕಾಯುತರನ್ನ, ಚಾರ್ವಕರನ್ನು ಕೊಂದ ವೈದಿಕರೇ ಬಸವಣ್ಣ ಮತ್ತು ಆತನ ಅನುಯಾಯಿಗಳನ್ನು ಕಲ್ಯಾಣ ಕ್ರಾಂತಿಯ ಹೆಸರಿನಲ್ಲಿ ನಡೆಸಿದ ನರಮೇಧ. ಬಸವಣ್ಣ ಹಾಗೂ ಅವರ ಅನುಯಾಯಿಗಳನ್ನು ಕೊಲ್ಲುವ ಜೊತೆಗೆ, ಶರಣ ಸಾಹಿತ್ಯವನ್ನು ಸುಟ್ಟರು. ಇಂದು ನಾವು ಓದುತ್ತಿರುವುದು ತಿರುಚಲ್ಪಟ್ಟ ಶರಣ ಸಾಹಿತ್ಯ. ನಮಗೆ ಲಭ್ಯವಿರುವುದು ಶೇ10ರಷ್ಟು ಶರಣ ಸಾಹಿತ್ಯ ಮಾತ್ರ ಎಂದು ರಂಜಾನ್ ದರ್ಗಾ ನುಡಿದರು.

ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, 12ಶತಮಾನದ ಬಸವಣ್ಣನವರನ್ನು 21ನೇ ಶತಮಾನದ ಯುವಜನತೆಗೆ ಪರಿಚಯಿಸುತ್ತಿರುವುದು ಅವರು ಇಂದಿಗೂ ಪ್ರಸ್ತುತ ಎಂಬುದನ್ನು ತೋರಿಸುತ್ತದೆ. ಕರ್ನಾಟಕ ಇಡೀ ಪ್ರಪಂಚಕ್ಕೆ ಅನೇಕ ಮಾದರಿ ನಾಯಕರನ್ನು ಕೊಡುಗೆಯಾಗಿ ನೀಡಿದೆ ಎಂದರು.

ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ, ಬಸವಣ್ಣ ಪ್ರತಿಪಾದಿಸಿದ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು, ನಾವೆಲ್ಲರೂ ಸಾಂಸ್ಕೃತಿಕ ನಾಯಕರಾಗಬೇಕು. ಬಸವಣ್ಣನನ್ನು ಒಂದು ಧರ್ಮದ ಚೌಕಟ್ಟಿಗೆ ಒಳಪಡಿಸಿದ್ದು ದೊಡ್ಡ ಅನಾಹುತ. ಎನಗಿಂತ ಕಿರಿಯರಿಲ್ಲ. ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಬಸವಣ್ಣನ ರೀತಿ ನಾವೆಲ್ಲರೂ ಬಾಳಬೇಕಿದೆ ಎಂದು ತಿಳಿಸಿದರು.

ವಿದ್ಯಾವಾಹಿನಿಯ ಪ್ರದೀಪಕುಮಾರ್, ವೀರಶೈವ ಲಿಂಗಾಯಿತ ಮಹಾಸಭಾದ ಡಾ.ಪರಮೇಶ್, ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿದರು. ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಲ್.ಎನ್.ಮುಕುಂದರಾಜ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಸಂಶೋಧಕ ಡಾ.ಬಿ.ನಂಜುಂಡಸ್ವಾಮಿ, ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು, ಡಾ.ಡಿ.ಎನ್.ಯೋಗೀಶ್ವರಪ್ಪ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular