Thursday, November 21, 2024
Google search engine
Homeಮುಖಪುಟಈಡಿಗ ಸಮುದಾಯ ಕೈಎತ್ತಿ ಕೊಡುವ ಜನಾಂಗ-ಸಚಿವ ವಿ.ಸೋಮಣ್ಣ

ಈಡಿಗ ಸಮುದಾಯ ಕೈಎತ್ತಿ ಕೊಡುವ ಜನಾಂಗ-ಸಚಿವ ವಿ.ಸೋಮಣ್ಣ

sಮಾಜದ ಅಸಮಾನತೆ ದೂರಾಗಬೇಕು, ಮನುಷ್ಯರೆಲ್ಲರೂ ಒಂದೇ ಎಂಬ ಭಾವನೆ ಮೂಡಬೇಕು ಎಂಬ ಸಂದೇಶ ಸಾರಿದ ಮಹರ್ಷಿ ನಾರಾಯಣ ಗುರುಗಳು ಧ್ವನಿ ಇಲ್ಲದ ಸಮಾಜದ ಧ್ವನಿಯಾಗಿ ಮೂಡಿಸಿದರು. ಅವರ ತತ್ವ, ಆದರ್ಶಗಳನ್ನು ಅನುಸರಿಸಿಕೊಂಡು ಆದರ್ಶ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು ಎಂದುರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ತುಮಕೂರಿನ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತೋತ್ಸವ ಸಮಾರಂಭದಲ್ಲಿ ಮಾತನಾಡಿದ ಸಚಿವರು, ನಾರಾಯಣ ಗುರು, ಬುದ್ಧ, ಬಸವಣ್ಣ, ಅಂಬೇಡ್ಕರ್ ಅಂತಹವರು ಮಾನವ ಕಲ್ಯಾಣಕ್ಕಾಗಿ ದೇವರ ಮತ್ತೊಂದು ರೂಪದಲ್ಲಿ ಅವತರಿಸಿ ಬಂದ್ದಿದ್ದಾರೆ ಎಂದರು.

ಸ್ವಾಭಿಮಾನಕ್ಕೆ ಹೆಸರಾದ ಈಡಿಗ ಸಮಾಜದವರು ಯಾರಿಗೂ ಕೈ ಚಾಚುವುದಿಲ್ಲ, ತಮ್ಮ ದುಡಿಮೆಯಲ್ಲಿ ಕೈ ನೀಡಿ ಕೊಡುವ ಸಮಾಜ. ಎಲ್ಲಾ ಸಮಾಜಗಳೂ ದೇಶದ ಬೆಳವಣಿಗೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿವೆ, ಆರ್ಯ ಈಡಿಗ ಸಮಾಜದ ಕೊಡುಗೆಯೂ ದೊಡ್ಡದಿದೆ. ಪ್ರಧಾನಿ ಮೋದಿಯವರ ದೂರದೃಷ್ಟಿಯ ಚಿಂತನೆಗಳು ದೇಶದ ಪ್ರಗತಿಗೆ ಪೂರಕವಾಗಿವೆ ಎಂದು ಹೇಳಿದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಕರಾಳ ಜಾತಿ ವ್ಯವಸ್ಥೆಯ ಕಾಲದಲ್ಲಿ ನಾರಾಯಣ ಗುರುಗಳು ಎಲ್ಲಾ ಜಾತಿಯವರು ಸಮಾನರು ಎಂಬ ಸಂದೇಶ ಸಾರಿದ್ದರು. ಆಗಿನ ಕಠಿಣ ಕಟ್ಟುಪಾಡುಗಳ ವಿರುದ್ಧ ಜನಜಾಗೃತಿ ಮೂಡಿಸಿ ಸ್ವಾಭಿಮಾನಿ ಸಮಾಜ ನಿರ್ಮಾಣಕ್ಕೆ ನಾಂದಿಯಾಗಿದ್ದರು. ಇವರು ಒಂದು ಜಾತಿಗೆ ಸೀಮಿತವಲ್ಲ, ಎಲ್ಲಾ ಸಮಾಜದ ಗೌರವಕ್ಕೆ ಪಾತ್ರರು. ಈಗಲೂ ಅಂತಹ ಕರಾಳ ಆಚರಣೆಗಳು ಕೆಲವು ಕಡೆ ಮುಂದುವರೆದಿವೆ, ಇವು ಬದಲಾಗಬೇಕು ಎಂದರು.

ತೀರ್ಥಹಳ್ಳಿಯ ನಿಟ್ಟೂರು ಮಠದ ಪೀಠಾಧ್ಯಕ್ಷ ರೇಣುಕಾನಂದ ಸ್ವಾಮೀಜಿ, ಆರ್ಯ ಈಡಿಗ ಸಂಘದ ಎಂ.ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘದ ಸಂಸ್ಥಾಪಕ ಅಜಯ್‌ಕುಮಾರ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ಗೌಡ, ಜೆ.ಪಿ.ಎನ್.ಪಿ ಪ್ರತಿಷ್ಠಾನದ ಅಧ್ಯಕ್ಷ ಜೆ.ಪಿ.ಸುಧಾಕರ್, ನಾರಾಯಣಗುರು ಜಯಂತೋತ್ಸವ ಸಮಿತಿ ಅಧ್ಯಕ್ಷ ಮಲ್ಲಸಂದ್ರ ಶಿವಣ್ಣ, ಸಂಘದ ಉಪಾಧ್ಯಕ್ಷ ಆರ್.ನಾರಾಯಣಸ್ವಾಮಿ, ಖಜಾಂಚಿ ಹೆಚ್.ಎಂ.ಕುಮಾರ್, ಜಂಟಿ ಕಾರ್ಯದರ್ಶಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular