ಸುಪ್ರಿಂಕೋರ್ಟಿನ ಆದೇಶದಂತೆ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸಲು ಹಿಂದೇಟು ಹಾಕುತ್ತಿರುವ ರಾಜ್ಯ ಸರಕಾರದ ವಿರುದ್ದ ಅಕ್ಟೋಬರ್ 28ರಂದು ತುಮಕೂರು ಜಿಲ್ಲೆಯ ಮಾದಿಗ ಸಮುದಾಯದ ವತಿಯಿಂದ ತಮಟೆ ಚಳವಳಿ ನಡೆಸಲು ಮಾದಿಗ ಮುಖಂಡರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಹಿರಿಯರಾದ ನರಸೀಯಪ್ಪ, ವೈಎಚ್ ಹುಚ್ಚಯ್ಯ, ಉದ್ಯಮಿ ಡಿ.ಟಿ.ವೆಂಕಟೇಶ್, ಕೆoಚಮಾರಯ್ಯ, ಡಾ.ವೈ.ಟಿ.ಬಾಲಕೃಷ್ಣಪ್ಪ, ಡಾ.ಬಸವರಾಜು, ಸೂರ್ಯ ಆಸ್ಪತ್ರೆ ಡಾ ಲಕ್ಷ್ಮಿಕಾಂತ್, ಪಾವಗಡ ಶ್ರೀರಾಮ್ ಸೇರಿದಂತೆ ಹಲವು ಮುಖಂಡರ ನೇತೃತ್ವದ ಒಳಮೀಸಲಾತಿ ಹೋರಾಟದ ಕುರಿತ ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದ ಬಹುತೇಕರು, ಒಳಮೀಸಲಾತಿ ಹೋರಾಟವನ್ನು ಜಿಲ್ಲೆಯಲ್ಲಿ ಮೊದಲಿನಿಂದಲೂ ಮಾದಿಗ ಸಮುದಾಯ ನಡೆಸಿಕೊಂಡು ಬರುತ್ತಿದ್ದು, ಯಾವ ಸಂದರ್ಭದಲ್ಲಿಯೂ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಬಲಗೈ ಸಮುದಾಯ ಈ ಹೋರಾಟಕ್ಕೆ ಬೆಂಬಲವಾಗಿ ನಿಂತಿಲ್ಲ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು.
ಈಗಾಗಲೇ ಮೀಸಲಾತಿಯ ಬಹುಪಾಲು ಪಡೆದಿದ್ದಾರೆ. ಅತ್ಯಂತ ಹೀನಾಯ ಸ್ಥಿತಿಯಲ್ಲಿರುವುದು ಮಾದಿಗ ಸಮುದಾಯ. ಹಾಗಾಗಿ ಮುಂಬರುವ ಎಲ್ಲಾ ಹೋರಾಟಗಳನ್ನು ಮಾದಿಗ ಸಮುದಾಯ, ಮಾದಿಗ ಸಮುದಾಯದ ಎಲ್ಲಾ ಉಪ ಪಂಗಡಗಳನ್ನು ಒಳಗೊಂಡAತೆ ಒಂದು ಐಕ್ಯ ವೇದಿಕೆಯ ಹೆಸರಿನಲ್ಲಿ ಮಾಡಲು ಸಭೆಯಲ್ಲಿ ಒಕ್ಕೊರಲಿನ ಒತ್ತಾಯ ವ್ಯಕ್ತವಾಯಿತು.