Saturday, December 7, 2024
Google search engine
Homeಮುಖಪುಟಅಚ್ಚ ಹಸಿರ ಕೆಳಗೆ

ಅಚ್ಚ ಹಸಿರ ಕೆಳಗೆ

ಅಚ್ಚ ಹಸಿರ ಕೆಳಗೆ ಕುಲದ ಹೆಸರು||
ತುಂಬಿವೆ ಜಿಗಣೆಗಳು ಪಿತಪಿತ ಹೂತಿಸುವ ಕಾಲಾಳು ಕೊತಕೊತ
ಮೇಲೆ ಹಗೆಯ ಹೊಗೆ|| ಹಿಂಸೆಯ ಬಿಸಿಲು
ಜೀವವರಸುವ ಜಡಗಳು ನಾವು

ತುಳಿದ ಹೆಜ್ಜೆಗಳ ಇಟ್ಟಿಗೆಗಳು
ಜಾತಿಗೀತಿಯ ಊಳು, ತೀರಿಸುವ ತೀರುಗಳು
ಕಡದಗಳೆ|| ಅಡಕತ್ತರಿಗಳ ಹೊದಿಕೆ ಬಿಗಿದ ಉರುಳ
ಸೂರಿನಲಿ, ಬಸಿದ ರಕ್ತಮಾಂಸವ ಕಿತ್ತಿಸಿಕೊಂಡ ಕೆತ್ತನೆಗಳು ನಾವು||

ಇರುಳು ಬಂಡಿಯ ಜಾಡು, ಮರುಳ ಮಾಡುವುದ ನೋಡು||
ಮಾಲೆಗೊಂಡ ನೋವಿನ ಪಾಡು
ಬೆಳಕಿಲ್ಲ, ಕರುಣಿಕನಿಲ್ಲ
ಕಣ್ಣು ಧರಿಸಲು ಬಿಡದವರ ನೆಟ್ಟಿವೆ ಕುರುಡರು ನಾವು||
ಭಂಡವಿಲ್ಲದ ಬಡತನಾಗ್ನಿಯಲಿ||
ಸದಾ ನೊಂದ ವಿಲವಿಲನೆಯು ನಮ್ಮೀಬಾಳು
ನೆಲಹಾಸುಗೆಯ ಹೊರಳು ಬೆನ್ನೆಲುವಿನ ಗೋಳು
ಏಳಲಾರದ ಅಳಲು ಬೀಳಲುಗಳು ನಾವು||

ಹೆಕ್ಕಿ ಧಮಕಿ ಹಾಕಿದರೂ ಕೈಗೆ ಸಿಗದ ನೋಂಪಿನ ಮೊಗದ ಸಾಲು||
ಕಪ್ಪು ವ್ಯೂಹವ ಭೇದಿಸಿದರೂ
‘ಕೃಪೆ ಬಾರದ ಭಾರಗಳಲಿ
ಹೊರ ಬರಲಾರದ ಸಾವುಗಳು ನಾವು’ ||

]ಉಳ್ಳವರಬ್ಬರದ ಧೂಳುಬಿರುಗಾಳಿಯಲಿ||
ತೂರಿತೂರುತ ಬೆಂಡಾದ ದೇಹ
ಬದುಕ ಬರಡಾಗಿಸೋ ಚಿರಸ್ಥಾಯಿಯೊಳಗೆ
ಒರತೆ ಒಸಗೆ ಬೇಡುವ ದೇಹಿ ನಿರೀಕ್ಷಿತರು ನಾವು||

ಎಚ್.ಡಿ.ಲೋಕೇಶ್, ಉಪನ್ಯಾಸಕರು, ತುಮಕೂರು

(ತುಮಕೂರು ದಸರಾ ಕವಿಗೋಷ್ಠಿಯಲ್ಲಿ ವಾಚನ ಮಾಡಿದ ಕವನ)

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular