Tuesday, December 3, 2024
Google search engine
Homeಜಿಲ್ಲೆಮುನಿರತ್ನ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

ಮುನಿರತ್ನ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರಿಗೆ ಜೀವ ಬೆದರಿಕೆ ಹಾಕಿರುವ ಬಿಜೆಪಿ ನಾಯಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿರುವ ಹಾಗೂ ದಲಿತರ ಜಾತಿ ನಿಂದನೆ ಮಾಡಿರುವ ಮುನಿರತ್ನ ಅವರನ್ನು ಬಂಧಿಸುವಂತೆ ಒತ್ತಾಯಿಸಿ ತುಮಕೂರಿನಲ್ಲಿ ಕಾಂಗ್ರೆಸ್ ಮಹಿಳಾ ಘಟಕ, ಎಸ್ಸಿ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಮಹಿಳಾ ಠಾಣೆ ಮತ್ತು ನಗರ ಪೊಲೀಸ್‌ಠಾಣೆಗೆ ದೂರು ನೀಡಲಾಯಿತು.

ಲೋಕಸಭೆಯ ವಿರೋಧಪಕ್ಷದ ನಾಯಕರಾಗಿರುವ ರಾಹುಲ್‌ ಗಾಂಧಿಯವರ ಕುರಿತು ಬಿಜೆಪಿ ನಾಯಕ ತಂದರ್‌ಸಿಂಗ್ ಮಾರ್ವಾ ಅವರು ನೀನು ಸರಿಯಾಗಿ ವರ್ತಿಸದಿದ್ದರೆ ನಿನ್ನ ಅಜ್ಜಿಗಾದ ಗತಿಯೇ ನಿನಗೂ ಆಗಲಿದೆ ಎಂದು ನೀಡಿರುವ ಹೇಳಿಕೆ ಹಾಗೂ ಮಹಾರಾಷ್ಟ್ರ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ರಾಹುಲ್‌ಗಾಂಧಿ ಅವರ ನಾಲಿಗೆ ಕತ್ತಿರಿಸುವ ವ್ಯಕ್ತಿಗೆ 11 ಲಕ್ಷ ರೂ ಬಹುಮಾನ ನೀಡುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ. ರೈಲ್ವೆ ರಾಜ್ಯ ಮಂತ್ರಿ ರವನೀತ ಬಿಟ್ಟು ಮತ್ತು ಉತ್ತರ ಪ್ರದೇಶದ ಮಂತ್ರಿ ರಘುರಾಜ್ ಸಿಂಗ್ ರಾಹುಲ್‌ಗಾಂಧಿ ಅವರನ್ನು ನಂ ಒನ್ ಭಯೋತ್ಪಾದಕ ಎಂದು ನೀಡಿರುವ ಹೇಳಿಕೆಗಳು ಸಮಾಜದಲ್ಲಿ ನೆಮ್ಮದಿ ಮತ್ತು ಶಾಂತಿಯನ್ನು ಕದಡುವ ಉದ್ದೇಶದಿಂದ ನೀಡಿದ ಹೇಳಿಕೆಗಳಾಗಿವೆ ಎಂದು ಆರೋಪಿಸಿದರು.

ರಾಹುಲ್‌ಗಾಂಧಿ ಅವರು ಅಧಿವೇಶನದಲ್ಲಿ ಮತ್ತು ಅವರ ಸಂದರ್ಶನಗಳಲ್ಲಿ ಬಿಜೆಪಿ ಮಹಿಳೆಯರು, ದಲಿತರು, ಆದಿವಾಸಿಗಳು,ಬಡಜನರ ಬಗ್ಗೆ ಇರುವ ನಿರ್ಲಕ್ಷವನ್ನು ಪ್ರಶ್ನೆ ಮಾಡಿ, ದಾಖಲೆಗಳ ಸಮೇತ ಬಯಲು ಮಾಡುತ್ತಿರುವುದರಿಂದ ಸತ್ಯವನ್ನು ಒಪ್ಪಿಕೊಳ್ಳಲಾಗದೆ ಈ ರೀತಿಯ ಹೇಳಿಕೆಗಳನ್ನು ನೀಡುತ್ತಾರೆ. ಅಲ್ಲದೆ ಹರಿಯಾಣ ಮತ್ತು ಜಮ್ಮು, ಕಾಶ್ಮೀರದ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರನ್ನು ಪ್ರಚೋದನೆಗೊಳಿಸವ ತಂತ್ರಗಾರಿಕೆಯಾಗಿದೆ. ಆದ್ದರಿಂದ ಭಾರತೀಯ ನ್ಯಾಯ ಸಂಹಿತೆ-2023ರ ಸೆಕ್ಷನ್ 351, 352, 353, 61 ಹಾಗೂ ಸಂಬಂಧಿಸಿದ ಇನ್ನಿತರ ಕಾನೂನುಗಳ ಅಡಿಯಲ್ಲಿ ಎಫ್.ಐ.ಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ ವೇಳೆ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕ ಹಾಗೂ ಪರಿಶಿಷ್ಟ ಜಾತಿ ವಿಭಾಗದ ಮುಖಂಡರು ಮುನಿರತ್ನನಾಯ್ಡು ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಮುಖಂಡ ಮುರಳೀಧರ ಹಾಲಪ್ಪ, ಮಾಜಿ ಶಾಸಕ ಗಂಗಹನುಮಯ್ಯ, ಇಕ್ಬಾಲ್ ಅಹಮದ್, ರಾಮಕೃಷ್ಣ, ಪ್ರಸನ್ನಕುಮಾರ್, ಶಿವಕುಮಾರ್.ಟಿ, ನರಸೀಯಪ್ಪ, ಶಿವಾಜಿ, ಷಣ್ಮುಖಪ್ಪ, ನಾಗಮಣಿ, ವಿಜಿಯಮ್ಮ, ಮರಿಚನ್ನಮ್ಮ, ಯಶೋಧ, ಹೊನೇಶ, ಗೋಪಿ ಸೇರಿದಂತೆ ಹಲವರು ಮನವಿ ಸಲ್ಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular