Thursday, September 19, 2024
Google search engine
Homeಮುಖಪುಟಮುಂದಿನ 25 ವರ್ಷಗಳಲ್ಲಿ ಅಮೃತಕಾಲ-ಪಿಎಂ

ಮುಂದಿನ 25 ವರ್ಷಗಳಲ್ಲಿ ಅಮೃತಕಾಲ-ಪಿಎಂ

ದೇಶದ ಎಲ್ಲಾ ವಲಯ ಮತ್ತು ವರ್ಗವನ್ನು ಲೆಕ್ಕಿಸದೆ ವಿಶ್ವದರ್ಜೆಯ ಆಧುನಿಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಮತ್ತು ಮುಂದಿನ 25 ವರ್ಷಗಳಲ್ಲಿ ಗುಣಾತ್ಮಕ ಸೌಲಭ್ಯ ನೀಡುವುದು ಸರ್ಕಾದ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ದೆಹಲಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚಣರಣೆ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮ್ಮ ಗುರಿ ತಲುಪಲು ಯಾರಿಗೂ ಕಾಯಬೇಕಾಗಿಲ್ಲ. ಮುಂದಿನ 25 ವರ್ಷಗಳಲ್ಲಿ ಅಮೃತ ಕಾಲ ಬರಲಿದೆ. ಇದಕ್ಕಾಗಿ ಈ ಸಮಾಜವನ್ನು ನಮಗೆ ನಾವೇ ಜಗತ್ತನ್ನು ಬದಲಾಯಿಸಬೇಕಿದೆ ಎಂದು ಸಲಹೆ ನೀಡಿದರು.

ಸರ್ಕಾರ ಜನರು ಮತ್ತು ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್ ಮಂತ್ರದಡಿ ಸರ್ಕಾರ ದೇಶದ ಜನರ ಜೀವನ ಕ್ರಮದಲ್ಲಿ ಪ್ರವೇಶ ಮಾಡುವುದಿಲ್ಲ. ಅಭಿವೃದ್ದಿಯನ್ನು ಬಿಟ್ಟು ಅನವಶ್ಯಕವಾಗಿ ಯಾರ ಜೀವನದಲ್ಲಿಯೂ ಸರ್ಕಾರ ಪ್ರವೇಶಿಸುವುದಿಲ್ಲ ಎಂದು ಪೆಗಾಸಸ್ ಸ್ಪೈವೇರ್ ಕುರಿತು ಸ್ಪಷ್ಟೀಕರಣ ನೀಡಿದರು.

ನಾವು ವಿಶ್ವದರ್ಜೆಯ ಗುಣಾತ್ಮಕ ತಯಾರಿಕೆಗೆ ಕೆಲಸ ಮಾಡಬೇಕು. ಹೊಸ ಆವಿಷ್ಕಾರಗಳು ನಡೆಯಬೇಕು. ನವಯುಗದ ತಂತ್ರಜ್ಞಾನ ಅಭಿವೃದ್ಧಿಗೆ ಕೆಲಸ ಮಾಡಬೇಕು. ಪ್ರತಿಯೊಂದು ಉತ್ಪಾದನೆಯೂ ಬ್ರಾಡ್ ಅಂಬಾಸಿಡೆರ್ ಆಗಬೇಕು. ವಿಶ್ವದರ್ಜೆಯ ಮಾರುಕಟ್ಟೆಯನ್ನು ಹಿಡಿಯಲು ಮುಂದಾಗಬೇಕು ಎಂದು ಪ್ರಧಾನಿ ಹೇಳಿದರು.

ಸರ್ಕಾರ ನಿಮ್ಮ ಪ್ರತಿ ಮಾರ್ಗದಲ್ಲಿಯೂ, ಕೆಲಸದಲ್ಲಿಯೂ ಜೊತೆಯಲ್ಲಿರಲಿದೆ. ಪ್ರತಿಯೊಂದು ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹೊಸ ಪ್ರಸ್ತಾವನೆಗಳೊಂದಿಗೆ ನಾವು ಸಾಗಬೇಕು ಎಂದು ತಿಳಿಸಿದರು.

ದೇಶದ ಪೂರ್ವ ಭಾರತ, ಈಶಾನ್ಯ, ಜಮ್ಮು ಮತ್ತು ಕಾಶ್ಮೀರ, ಲಡಕ್ ಮೊದಲಾದ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯ ಹೆಚ್ಚಿಸಬೇಕಿದೆ. ಅಭಿವೃದ್ಧಿಯನ್ನು ಒಳಗೊಳ್ಳುವ ಮೂಲಕ ದೇಶವನ್ನು ಕಟ್ಟಬೇಕಿದೆ. ದೇಶದ ಕರಾವಳಿ ತೀರ, ಬುಡಕಟ್ಟು, ಆದಿವಾಸಿ ವಲಯಗಳ ಅಭಿವೃದ್ದಿಯೂ ಆಗಬೇಕು ಎಂದು ಒತ್ತಿಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular