Thursday, November 21, 2024
Google search engine
Homeಮುಖಪುಟವಿದ್ಯುತ್ ಸ್ಪರ್ಶಿಸಿ ಓರ್ವ ವಿದ್ಯಾರ್ಥಿ ಸಾವು- ಧ್ವಜಸ್ತಂಭ ನಿಲ್ಲಿಸುವ ವೇಳೆ ತುಮಕೂರಿನಲ್ಲಿ ಘಟನೆ

ವಿದ್ಯುತ್ ಸ್ಪರ್ಶಿಸಿ ಓರ್ವ ವಿದ್ಯಾರ್ಥಿ ಸಾವು- ಧ್ವಜಸ್ತಂಭ ನಿಲ್ಲಿಸುವ ವೇಳೆ ತುಮಕೂರಿನಲ್ಲಿ ಘಟನೆ

ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದಂದು ಧ್ವಜಸ್ತಂಭ ನಿಲ್ಲಿಸುವ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಗಂಭೀರ ಸ್ಥಿತಿಯಲ್ಲಿದ್ದ ಮೂವರು ವಿದ್ಯಾರ್ಥಿಗಳಲ್ಲಿ ಓರ್ವ ಸಾವನ್ನಪ್ಪಿರುವ ಅಹಿತಕರ ಘಟನೆ ತುಮಕೂರು ತಾಲ್ಲೂಕಿನ ಕರಿಕೆರೆ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಚಂದನ್ (16) ಎಂದು ಗುರುತಿಸಲಾಗಿದೆ.

ತುಮಕೂರು ತಾಲೂಕು ಕರಿಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಆಗಸ್ಟ್ 15ರ ಬೆಳಗ್ಗೆ ಮೂವರು ವಿದ್ಯಾರ್ಥಿಗಳು ಧ್ವಜಸ್ತಂಭ ನಿಲ್ಲಿಸುತ್ತಿದ್ದರು. ಧ್ವಜಸ್ತಂಭವನ್ನು ಮೇಲಿತ್ತಿದಾಗ ಪಕ್ಕದಲ್ಲೇ ಹಾದುಹೋಗಿದ್ದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಗೆ ತಗುಲಿದೆ. ಪರಿಣಾಮ ಮೂವರು ವಿದ್ಯಾರ್ಥಿಗಳು ಪ್ರಜ್ಞೆ ತಪ್ಪಿಬಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸ್ವಾತಂತ್ರ್ಯ ದಿನದ ಅಮೃತಮಹೋತ್ಸವದಂದೇ ಈ ದುರ್ಘಟನೆ ಸಂಭವಿಸಿದವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಪ್ರಜ್ಞೆ ತಪ್ಪಿಬಿದ್ದ ವಿದ್ಯಾರ್ಥಿಗಳನ್ನು ನೋಡಿದ ಇತರೆ ವಿದ್ಯಾರ್ಥಿಗಳು ಕೂಗಿಕೊಂಡಿದ್ದಾರೆ. ಕೂಡಲೇ ಗಂಭೀರ ಸ್ಥಿತಿಯಲ್ಲಿದ್ದ ಶಶಾಂಕ್, ಪವನ್ ಮತ್ತು ಚಂದನ್ ಅವರನ್ನು ಶ್ರೀದೇವಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆಸ್ಪತ್ರೆಯ ಮಾರ್ಗ ಮಧ್ಯದಲ್ಲಿಯೇ ಚಂದನ್ ಅಸುನೀಗಿದ ಎಂದು ತಿಳಿದುಬಂದಿದೆ.

ಸ್ವಾತಂತ್ರ್ಯ ದಿನದ ಅಮೃತಮಹೋತ್ಸವ ವರ್ಷದ ದಿನದಂದೇ ಈ ದುರ್ಘಟನೆ ನಡೆದಿದೆ. ಇಬ್ಬರು ಗಾಯಾಳು ವಿದ್ಯಾರ್ಥಿಗಳು ಶ್ರೀದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶ್ರೀದೇವಿ ಆಸ್ಪತ್ರೆಯಲ್ಲಿ ಮೃತ ಚಂದನ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಬದುಕಿದ್ದಾನೆಂಬ ಸಣ್ಣ ಆಶೆಯಲ್ಲಿ “ಕಂದಾ ಎದ್ದೇಳು’ ಎಂದು ಕಣ್ಣೀರು ಸುರಿಸುತ್ತಿದ್ದ ಹೃದಯವಿದ್ರಾವಕ ಘಟನೆ ನೋಡಿ ಅಲ್ಲಿದ್ದವರು ಮರುಗಿದರು.

ಸ್ಥಳಕ್ಕೆ ಡಿಡಿಪಿಐ ಶಿವನಂಜಯ್ಯ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಘಟನೆಯಲ್ಲಿ ವಿದ್ಯಾರ್ಥಿ ಸಾವನ್ನಪ್ಪಿದ್ದು ಇಲಾಖೆಯಿಂದ ಅಗತ್ಯ ನೆರವು ನೀಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಇದೊಂದು ಆಕಸ್ಮಿಕ ಘಟನೆ, ಇದು ನೋವು ತಂದಿದೆ. ಈ ಘಟನೆಯಲ್ಲಿ ಯಾರದೇ ತಪ್ಪು ಕಾಣಿಸುತ್ತಿಲ್ಲ. ವಿದ್ಯಾರ್ಥಿಗಳು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular