Thursday, September 19, 2024
Google search engine
Homeಮುಖಪುಟಹಾಲಿನ ದರ ಹೆಚ್ಚಳ ಬೇಡ ಎಂದು ಸಿಎಂಗೆ ಪತ್ರ ಬರೆದ ಪಂಡಿತ್ ಜವಹಾರ್

ಹಾಲಿನ ದರ ಹೆಚ್ಚಳ ಬೇಡ ಎಂದು ಸಿಎಂಗೆ ಪತ್ರ ಬರೆದ ಪಂಡಿತ್ ಜವಹಾರ್

ಹಾಲಿನ ಬೆಲೆಯನ್ನ ಲೀಟರ್ ಗೆ ಐದು ರೂಪಾಯಿ ಜಾಸ್ತಿ ಮಾಡಿ ರೈತರಿಗೆ ಆ ಹಣವನ್ನು ಸಂಪೂರ್ಣ ಕೊಡುವುದಾಗಿ ತಾವು ಮತ್ತು ಸಚಿವ ರಾಜಣ್ಣ ಅವರು ಹೇಳಿಕೆ ಕೊಟ್ಟಿದ್ದೀರಿ. ರೈತರಿಗೆ ಸರ್ಕಾರವು ಯಾವುದಾದರೂ ರೂಪದಲ್ಲಿ ನೆರವು ನೀಡುತ್ತಿದೆ ಎಂದು ತಿಳಿದು ಬಂದರೆ ಅದನ್ನು ಸ್ವಾಗತ ಮಾಡುವವರಲ್ಲಿ ನಾನು ಮೊದಲಿಗ ಎಂದು ಜನ ಸಂಗ್ರಾಮ ಪರಿಷತ್ ತುಮಕೂರು ಜಿಲ್ಲಧ್ಯಕ್ಷ ಪಂಡಿತ್ ಜವಹಾರ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತಿಳಿಸಿದ್ದಾರೆ.

ಆದರೆ ರೈತರಿಗೆ ಸಹಾಯ ಮಾಡಲು ತೊಂದರೆಯಲ್ಲಿರುವ ಸಾರ್ವಜನಿಕರಿಗೆ ಪುನಃ ತೊಂದರೆ ಕೊಡುವುದು ಎಷ್ಟು ಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವ ಅವರು, ಈಗಾಗಲೇ ಎಲ್ಲಾ ಪದಾರ್ಥಗಳ ಬೆಲೆಗಳು ಜಾಸ್ತಿಯಾಗಿ ಸಾರ್ವಜನಿಕರು ಜೀವನ ನಡೆಸಲು ಬಹಳ ಕಷ್ಟ ಪಡುತ್ತಿರುವುದು ತಮಗೆ ಗೊತ್ತೇ ಇದೆ. ಹಾಗಾಗಿ ತಾವು ನಾಲ್ಕೈದು ರೀತಿಯ ಭಾಗ್ಯಗಳನ್ನು ನೀಡಿ ಬೆಲೆ ಏರಿಕೆಯಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡುತ್ತಿದ್ದೀರಾ ಎಂದು ಹೇಳಿದ್ದಾರೆ.

ಮುಂಚೇನೆ ಬೆಲೆ ಏರಿಕೆಯಿಂದ ಬಳಲುತ್ತಿರುವ ಜನರಿಗೆ ಪುನಃ ನೀವು ಐದು ರೂಪಾಯಿ ಲೀಟರ್ಗೆ ಜಾಸ್ತಿ ಮಾಡುವುದು ಎಷ್ಟು ಮಟ್ಟಿಗೆ ಸಮರ್ಥನೀಯ, ಈಗಾಗಲೇ ಪೆಟ್ರೋಲ್ ಬೆಲೆ ಜಾಸ್ತಿ ಮಾಡಿ ಗಾಯದ ಮೇಲೆ ಬರೆ ಎಳೆದಿದ್ದೀರಾ, ರೈತರಿಗೆ ಸಹಾಯ ಮಾಡಬೇಕು ಎನ್ನುವುದಕ್ಕೆ ಸಾರ್ವಜನಿಕರ ಮೇಲೆ ನೀವು ಏಕೆ ತೆರಿಗೆ ಹಾಕಬೇಕು, ಉಳ್ಳವರಿಂದ ವಿವಿಧ ರೂಪದಲ್ಲಿ ಹಣ ಪಡೆದು ರೈತರಿಗೆ ಕೊಡಿ. ಒಬ್ಬರು ತೊಂದರೆಯಲ್ಲಿದ್ದಾರೆ ಎಂದ ಮಾತ್ರಕ್ಕೆ ಮತ್ತೊಬ್ಬ ತೊಂದರೆಯಲ್ಲಿರುವವರನ್ನ ಪುನಃ ತೊಂದರೆಗೀಡು ಮಾಡುವುದು ನಿಮ್ಮ ಆರ್ಥಿಕ ನೀತಿಯೇ ಎಂದು ಜವಹಾರ್ ಕೇಳಿದ್ದಾರೆ.
7ನೇ ವೇತನದ ಆಯೋಗದ ವರದಿಯಂತೆ ರಾಜ್ಯದ ಸರ್ಕಾರಿ ನೌಕರರಿಗೆ ರೂ.20,000 ಕೋಟಿ ರೂಗಳ ಮೊತ್ತದ ಸಂಬಳವನ್ನು ಜಾಸ್ತಿ ಮಾಡಿದ್ದೀರಾ. ಸರ್ಕಾರಿ ನೌಕರು ಈಗಾಗಲೇ ಕಾಲಕಾಲಕ್ಕೆ ತಕ್ಕಂತೆ ಸಂಬಳ ಮತ್ತು ಭತ್ಯೆಯನ್ನು ಜಾಸ್ತಿ ಮಾಡಿಕೊಂಡು ಯಾವ ತೊಂದರೆ ಇಲ್ಲದ ಜೀವನವನ್ನು ನಡೆಸುತ್ತಿದ್ದಾರೆ. ರೈತರಿಗೆ ಕೊಡಬೇಕಾದ ಹಣವನ್ನು ಈ ಸರ್ಕಾರಿ ನೌಕರರಿಂದ ಪಡೆದು ಕೊಡಿ. ಸರ್ಕಾರಿ ನೌಕರರಿಗೆ ಇದರಿಂದ ತೊಂದರೆ ಏನು ಆಗುವುದಿಲ್ಲ ಎಂದು ಸಲಹೆ ನೀಡಿದ್ದಾರೆ.

ನಿಮ್ಮ ಆರ್ಥಿಕ ನೀತಿಯನ್ನು ಬದಲಿಸಿಕೊಳ್ಳಿ. ಅತ್ಯಂತ ಅನುಭವವಿದ್ದು ಅತಿ ಹೆಚ್ಚಿನ ಬಜೆಟ್ ಮಂಡಿಸಿರುವ ನೀವು ಜನರಿಗೆ ಗಾಯದ ಮೇಲೆ ಬರೆದಂತೆ ತೊಂದರೆ ಕೊಟ್ಟು ಸಾರ್ವಜನಿಕರ ವಿರೋಧವನ್ನು ಕಟ್ಟಿಕೊಳ್ಳಬೇಡಿ. ನಿಮ್ಮ ಈ ನೀತಿ ಸಾರ್ವಜನಿಕರನ್ನು ಕಾಂಗ್ರೆಸ್ ಪಕ್ಷದಿಂದ ದೂರ ಮಾಡುತ್ತದೆ ಎಂಬುದು ನೆನಪಿರಲಿ. ಮುಂಚಿನಂತೆ ನೀವೀಗ ಜನಮಾನಸದ ನಾಯಕರಾಗಿ ಉಳಿದಿಲ್ಲ
ದಯವಿಟ್ಟು ಹಾಲಿನ ಬೆಲೆಯನ್ನು ಜನರ ಮೇಲೆ ಹೇರಿಕೆಯಾಗುವಂತೆ ಮಾಡದಿರಿ ಎಂದು ಸಿಎಂಗೆ ಬರೆದ ಪತ್ರದಲ್ಲಿ ಅವರು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular