ನವ ವಿವಾಹಿತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಬರದಲೇಪಾಳ್ಯದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಾತನನ್ನು 28 ವರ್ಷದ ಮಂಜುನಾಥ ಎಂದು ಗುರುತಿಸಲಾಗಿದೆ.
ತಮ್ಮ ಹಳೆಯ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯ ರೂಮಿನ ತೀರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಮಂಜುನಾಥ ಆರು ತಿಂಗಳ ಹಿಂದೆ ತಮ್ಮ ಹತ್ತಿರದ ಸಂಬಂಧಿ ಚೈತ್ರ ಎಂಬುವರೊಟ್ಟಿಗೆ ಮದುವೆಯಾಗಿದ್ದ ಎಂದು ಹೇಳಲಾಗಿದೆ. ಕಳೆದ 20 ದಿನಗಳ ಹಿಂದೆ ಹೊಸ ಮನೆಯ ಗೃಹಪ್ರವೇಶ ಮಾಡಿದ್ದರು ಎಂದು ತಿಳಿದುಬಂದಿದ್ದು ಹಳೆಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಗಣಪತಿ ಉತ್ಸವಕ್ಕೆ ಹೋಗಬೇಡ ಅಂದಿದ್ದಕ್ಕೆ ಬಾಲಕ ಆತ್ಮಹತ್ಯೆ
ಪೋಷಕರು ಗಣಪತಿ ಉತ್ಸವಕ್ಕೆ ಹೋಗಬೇಡ ಎಂದು ಹೇಳಿದಕ್ಕೆ ಬೆಸರಗೊಂಡು 12 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹೊನ್ನಯ್ಯನಪಾಳ್ಯದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು 12 ವರ್ಷದ ಪುಣ್ಯತಿತ್ ಎಂದು ಗುರುತಿಸಲಾಗಿದೆ. ಈತ ಹುಳಿಯಾರಿನ ಕೆಪಿಎಸ್ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪುಣ್ಯತೀತ್ ಗಣಪತಿ ಉತ್ಸವಕ್ಕೆ ಹೋಗುವುದಾಗಿ ತಂದೆ-ತಾಯಿಗಳಿಗೆ ಹೇಳಿದ್ದಾನೆ. ಇದಕ್ಕೆ ಪೋಷಕರು ಒಪ್ಪಿಲ್ಲ. ಆದರೂ ಗಣಪತಿ ಉತ್ಸವಕ್ಕೆ ಹೋಗುವುದಾಗಿ ಪಟ್ಟು ಹಿಡಿದಿದ್ದಾನೆ. ಇದಕ್ಕೆ ಪೋಷಕರು ಬೇಡವೆಂದು ಮನೆಯಲ್ಲೇ ಇರಬೇಕು ಎಂದು ತಾಕೀತು ಮಾಡಿದರೆಂದು ಹೇಳಲಾಗಿದೆ.
ಇದರಿಂದ ಬೇಸತ್ತ ಬಾಲಕ ಮನೆಯ ಕಬ್ಬಿಣದ ತೀರಿಗೆ ಬಳ್ಳಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.