Thursday, October 10, 2024
Google search engine
Homeಮುಖಪುಟಮೀಸಲಾತಿ ತೆಗೆಯಬೇಕು ಎಂದು ರಾಹುಲ್ ಹೇಳಿಲ್ಲ-ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ

ಮೀಸಲಾತಿ ತೆಗೆಯಬೇಕು ಎಂದು ರಾಹುಲ್ ಹೇಳಿಲ್ಲ-ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ

ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಎಸ್ಸಿ, ಎಸ್ಟಿ ಮೀಸಲಾತಿ ತೆಗೆಯಬೇಕು ಎಂದು ಅಮೇರಿಕಾದಲ್ಲಿ ಹೇಳಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರ ಸಂವಾದದ ಹೇಳಿಕೆಯನ್ನು ತಿರುಚಲಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ಹೇಳಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು. ಎಲ್ಲಾ ಹಂತಗಳಲ್ಲು ಆರ್ ಎಸ್ ಎಸ್ ಪ್ರಣೀತ ಮನುವಾದವನ್ನು ತೂರಿಸಲು ಪ್ರಯತ್ನಪಡುತ್ತಿದೆ ಬಿಜೆಪಿ. ಆರ್ ಎಸ್ ಎಸ್ ಎರಡನೇ ಸರಸಂಘ ಚಾಲಕರಾಗಿದ್ದ ಗೋಲವಳ್ಕರ್ ಅವರು ತಮ್ಮ ಬಂಚ್ ಆಫ್ ಥಾಟ್ಸ್ ಪುಸ್ತಕದಲ್ಲಿ ಶ್ರೇಣಿಕೃತ ವ್ಯವಸ್ಥೆ ಇರಬೇಕು ಎಂದು ಪ್ರತಿಪಾದನೆ ಮಾಡಿದ್ದಾರೆ. ಶೋಷಿತ ವರ್ಗದ ಜನರು ಮುಂದುವರೆಯದೆ ಹಾಗೆಯೇ ಇರಬೇಕು ಎಂಬುದು ಬಿಜೆಪಿ ಹಾಗೂ ಸಂಘದ ಚಿಂತನೆ ಎಂದು ಆರೋಪಿಸಿದರು.

ಸಂವಿಧಾನ ರಚಣೆಯಲ್ಲಿ ಆರ್ ಎಸ್ ಎಸ್ ಅವರ ಕೊಡುಗೆ ಏನಿದೆ. ಅಂಬೇಡ್ಕರ್ ಅವರ ವಿಚಾರದಲ್ಲಿ ನಂಬಿಕೆಯಿಟ್ಟು ಸಂವಿಧಾನ ಜಾರಿಗೆ ತಂದ ಪಕ್ಷ ಕಾಂಗ್ರೆಸ್. ಬಾಬಾ ಸಾಹೇಬರನ್ನು ಸಂವಿಧಾನ ಕರಡು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದು ಕಾಂಗ್ರೆಸ್ ಹಾಗೂ ನೆಹರು ಅವರು.

ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ ಆಕ್ಟ್ 1950 ಮೂಲಕ ಮೀಸಲಾತಿ ತಂದಿದ್ದು ಕಾಂಗ್ರೆಸ್ ಸರ್ಕಾರ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದಲು ಮೀಸಲಾತಿ ತರಲು ಮುಂದದಾಗ ಸಮಾಜವನ್ನು ಒಡೆದು ಆಳುವ ನೀತಿಗೆ ನೂಕಬೇಕು ಎಂದು ಪ್ರಯತ್ನಪಟ್ಟಿದ್ದು ಇದೇ ಬಿಜೆಪಿ.

ಅನಂತ್ ಕುಮಾರ್ ಹೆಗಡೆ, ಯತ್ನಾಳ್ ಅವರು ಸೇರಿದಂತೆ ಅನೇಕ ಬಿಜೆಪಿ ನಾಯಕರು ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಕಿತ್ತು ಹಾಕಲು ಎಂದು ಹೇಳಿದ್ದಾರೆ ಎಂದರು.

ಮೀಸಲಾತಿಯನ್ನು ಮುಂದುವರೆಸಿಕೊಂಡು ಬರುವಂತೆ ಮಾಡಿದ್ದು ಕಾಂಗ್ರೆಸ್. ಆದರೆ ಬಿಜೆಪಿ ಎಂದಿಗೂ ಮೀಸಲಾತಿ ಪರವಾಗಿ ಹೋರಾಟ ಮಾಡಿಲ್ಲ. ಅದು ಪರೋಕ್ಷವಾಗಿ ಮೀಸಲಾತಿ ತೆಗೆಯಬೇಕು ಎಂದು ಹುನ್ನಾರ ಮಾಡುತ್ತಿದೆ. 2013 ರಲ್ಲಿ ಎಸ್ಇಪಿ, ಟಿಎಸ್ಪಿ ಕಾನೂನು ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ. ಕೇಂದ್ರ ಬಿಜೆಪಿ ಸರ್ಕಾರ ಇದೆ ಕಾರ್ಯಕ್ರಮವನ್ನು ಏಕೆ ಕೇಂದ್ರದಲ್ಲಿ ಜಾರಿಗೆ ತರದೇ ಆಟ ಆಡುತ್ತಿದೆ ಎಂದು ಟೀಕಿಸಿದರು.

ಕರ್ನಾಟಕದಲ್ಲಿ 38 ಸಾವಿರ ಕೋಟಿ ಹಣವನ್ನು ಪರಿಶಿಷ್ಟ ಜಾತಿ ಹಾಗೂ ವರ್ಗದ ಜನರಿಗೆ ಖರ್ಚು ಮಾಡುತ್ತಿದೆ. ಬಿಜೆಪಿ ಕೇವಲ ಕಣ್ಣು ಒರೆಸುವ ಕೆಲಸ ಮಾಡುತ್ತಿದೆ. ರಾಹುಲ್ ಗಾಂಧಿ ಅವರು ಅವಕಾಶ ವಂಚಿತರಿಗೆ ಸೌಲಭ್ಯ ಸಿಗಬೇಕು ಎಂದು ಹೇಳಿದ್ದಾರೆ. ಸರ್ವರಿಗೂ ಸಮಪಾಲು, ಸಮಬಾಳು ಸೇರಿದಂತೆ ಎಲ್ಲಾ ರೀತಿಯ ಹಕ್ಕು ಸಿಗಬೇಕು ಎಂದು ಹೇಳುತ್ತಾ ಇದ್ದಾರೆ. ಬಡವರ, ದಲಿತರ ವಿರೋಧಿ ಪಕ್ಷ ಯಾವುದಾದರು ಇದ್ದರೆ ಅದು ಬಿಜೆಪಿ ಮಾತ್ರ. ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ತಿರುಚಿರುವ ಬಿಜೆಪಿ ಅವರ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular