ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ದಾಳಿ ಮುಂದುವರಿಸಿದ್ದಾರೆ. ಶನಿವಾರವೂ ಕೂಡ ಎರಡ್ಮೂರು ಪ್ರಾಂತ್ಯಗಳು ಮತ್ತು ಕಂದಹಾರ್ ನಲ್ಲಿರುವ ಪ್ರಮುಖ ರೇಡಿಯೋ ಕೇಂದ್ರವನ್ನು ತಾಲಿಬಾನ್ ವಶಕ್ಕೆ ಪಡೆದಿದೆ. ವಾಯ್ಸ್ ಆಫ್ ಶರಿಯಾ ಅಥವಾ ಇಸ್ಲಾಮಿಕ್ ಲಾ ಕೇಂದ್ರ ಇದೀಗ ತಾಲಿಬಾನ್ ವಶದಲ್ಲಿದೆ.
ನುಸುಳುಕೋರರು ಆಫ್ಘಾನಿಸ್ತಾನದ ನೆಲವನ್ನು ಸಂಪೂರ್ಣ ವಶಕ್ಕೆ ಪಡೆಯಲು ತೀವ್ರ ಯತ್ನ ಮುಂದುವರಿಸಿದ್ದಾರೆ. ಕಳೆದ ಒಂದು ವಾರದಲ್ಲಿ ಆಫ್ಘಾನಿಸ್ತಾನದ ಉತ್ತರ, ಪಶ್ಚಿಮ ಮತ್ತು ದಕ್ಷಿಣ ಭಾಗದ ಹಲವು ಪ್ರಾಂತ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜಧಾನಿ ಕಾಬೂಲ್ ಸಮೀಪದ ಲೋಗರ್ ಪ್ರಾಂತ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡಿರುವ ತಾಲಿಬಾನ್ ಉಗ್ರರು ಆಫ್ಘಾನ್ ಸೇನೆಯೊಡನೆ ಕದನ ಮುಂದುವರಿಸಿದೆ. ಲೋಗರ್ ಪ್ರಾಂತ್ಯವನ್ನು ತಾಲಿಬಾನ್ ಪಡೆಗಳು ವಶಪಡಿಸಿಕೊಂಡಿಲ್ಲ ಎಂದು ಸ್ಥಳೀಯ ಕಾನೂನು ಪಂಡಿತರು ಹೇಳಿದ್ದಾರೆಂದು ಅಸೋಷಿಯೇಟ್ ಪ್ರೆಸ್ ವರದಿ ಮಾಡಿದೆ.
ಪಾಕಿಸ್ತಾನದ ಗಡಿ ಭಾಗವಾದ ಪಾಕ್ ಟಿಕ್ ಪ್ರಾಂತ್ಯ ತಾಲಿಬಾನ್ ವಶಕ್ಕೆ ಸೇರಿದೆ. ಕಾನೂನು ಪಂಡಿತ ಖಾಲಿದ್ ಅಸಾದ್ ಹೇಳುವಂತೆ ಕಾಬೂಲ್ ಮಾರ್ಗದಲ್ಲಿ ತೆರಳುತ್ತಿದ್ದ ಗೌರ್ನರ್ ಮತ್ತು ಇತರೆ ಅಧಿಕಾರಿಗಳು ತಾಲಿಬಾನ್ ಉಗ್ರರಿಗೆ ಶರಣಾಗಿದ್ದಾರೆಂದು ಎಪಿ ವರದಿಯಲ್ಲಿ ತಿಳಿಸಿದೆ.
ಸ್ಥಳೀಯ ಸೈಯದ್ ಹುಸೈನ್ ಗಾರ್ಡೆಜಿ ತಾಲಿಬಾನಿಗಳು ಸ್ಥಳೀಯರೊಂದಿಗೆ ಕಾದಾಟಕ್ಕೆ ಇಳಿದಿದ್ದರು. ಹಿರಿಯರು ಬಂದು ಸಮಾಧಾನಪಡಿಸಿದ ನಂತರ ತಾಲಿಬಾನಿಗಳು ಮೌನವಾದರು. ಗಾರ್ಡೆಜಿ ಈಗ ತಾಲಿಬಾನ್ ವಶದಲ್ಲಿದೆ. ಸರ್ಕಾರಿ ಪಡೆಗಳು ತಾಲಿಬಾನಿಗಳೊಂದಿಗೆ ಕದನ ಮುಂದುವರಿಸಿದ್ದಾರೆ ಎಂದು ಹೇಳಿದ್ದರೆ, ಇದನ್ನು ನಿರಾಕರಿಸಿರುವ ತಾಲಿಬಾನ್ ‘ಗಾರ್ಡೆಜಿ ಪ್ರಾಂತ್ಯವನ್ನು ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಹೇಳಿದೆ.