ತುಮಕೂರಿನ ಬಾಳನಕಟ್ಟೆ ಪ್ರದೇಶದಲ್ಲಿರುವ ಗುಬ್ಬಿ ವೀರಣ್ಣ ಕಲಾಕ್ಷೇತ್ರ ಗಬ್ಬೆದ್ದು ಹೋಗಿದೆ ಎಂದು ರಂಗಕರ್ಮಿ ನಟರಾಜ್ ಹೊನ್ನವಳ್ಳಿ ಎಂದು ತಿಳಿಸಿದ್ದಾರೆ.
ನಮ್ಮನ್ನ ಕ್ಷಮಿಸಿ ವೀರಣ್ಣನವರೆ. ನಿಮ್ಮ ಹೆಸರಿನ ರಂಗಮಂದಿರವನ್ನು ನಾವು ಸರಿಯಾಗಿ ಇಟ್ಕೊಂಡಿಲ್ಲ. ಆಗಸ್ಟ್ 31ನೇ ತಾರೀಖು ಬಾಬ್ ಮಾರ್ಲೆ ಫ್ರಂ ಕೋಡಿಹಳ್ಳಿ ನಾಟಕ ನೋಡಲು ಹೋಗಿದ್ದೆ. ರಂಗಮಂದಿರ ತುಂಬಿತ್ತು. ರಂಗಮಂದಿರ, ಗ್ರೀನ್ ರೂಂ, ವಿಂಗ್ ಸ್ಪೇಸ್ ವಾಸನೆ ಬರುತ್ತಿತ್ತು ಎಂದು ಹೇಳಿದ್ದಾರೆ.
ನಾಟಕ ಪ್ರದರ್ಶನಕ್ಕೆ ಬೇಕಾಗುವಷ್ಟು ಬೆಳಕಿನ ಉಪಕರಣಗಳಿಲ್ಲ, ಇದ್ದ ಉಪಕರಣಗಳು ಎಲ್ಲಿ ಎಂದು ಪ್ರಶ್ನಿಸಿದ್ದಾರೆ.
ಧ್ವನಿಯ ಉಪಕರಣಗಳು ಕಿರಿಕಿರಿ ನೀಡುತ್ತವೆ. ಉಸ್ತುವಾರಿ ಕಮಿಟಿ ಯಾರು? ಎಲ್ಲಿದ. ಅವರಿಗೆ ರಂಗಮಂದಿರ ಹೇಗಿರಬೇಕೆಂಬ ಕಲ್ಪನೆ ಇದೆಯೇ ಎಂದು ನಟರಾಜ್ ಹೊನ್ನವಳ್ಳಿ ಕೇಳಿದ್ದಾರೆ.
ಈ ರಂಗಮಂದಿರದ ಮೂಲಕ ಲಾಭ ಮಾಡ್ಕೋತಿರೋರು ಯಾರು ಎಂದು ಪ್ರಶ್ನಿಸಿರುವ ಅವರು, ಪ್ರತಿ ವರ್ಷ ರೆನೊವೇಷನ್ ಗೆ ಉಪಕರಣಗಳಿಗೆ ಎಷ್ಟು ಹಣ ಸುರೀತಿರಾ ಎಂದು ಹೇಳಿದ್ದಾರೆ.
ನಾಟಕ ಪ್ರದರ್ಶಿಸುವ ಸ್ಥಳೀಯ ತಂಡಗಳಿಗೆ ಸಾಂಸ್ಕೃತಿಕ ಜವಾಬ್ದಾರಿ ಇದೆಯೇ? ಸಹಾಯಕ ನಿರ್ದೇಶಕರ ಕೆಲಸವೇನು? ಮಾನ್ಯ ಉಸ್ತುವಾರಿ ಸಚಿವರು ಇತ್ತ ಗಮನ ವಹಿಸುವರೇ ಎಂದು ಪ್ರಶ್ನೆಗಳನ್ನು ಕೇಳಿದ್ದಾರೆ.
ಒಂದು ನಾಟಕ ಪ್ರದರ್ಶನ ಘನವಾಗಿ ಅದರ ಧ್ವನಿ ಚಲುವು, ದೃಶ್ಯ ಮುಖೇನ ನಮ್ಮೊಳಗೆ ಇಳಿಯಬೇಕಲ್ಲವೆ? ನಾಟಕ ನೋಡುವ ಸಾಮಾಜಿಕರೂ ಇತ್ತ ಗಮನ ಕೊಡಬೇಕಲ್ಲವೇ? ಸಹಾಯಕ ನಿರ್ದೇಶಕರಿಗೆ ರಾಜ್ಯದಲ್ಲಿ ಇರುವ ಸುಸಜ್ಜಿತ ಕೆಲವೇ ರಂಗಮಂದಿರಗಳನ್ನಾದರೂ ಭೇಟಿ ಮಾಡಿ ಎಂದು ಸಲಹೆ ನೀಡಿದ್ದಾರೆ.