Monday, December 23, 2024
Google search engine
Homeಮುಖಪುಟಆ ಲಯ, ಈ ಲಯದ ಕುರಿತು ಎಚ್.ಎಸ್.ಶಿವಪ್ರಕಾಶ್

ಆ ಲಯ, ಈ ಲಯದ ಕುರಿತು ಎಚ್.ಎಸ್.ಶಿವಪ್ರಕಾಶ್

ಆಫ್ರಿಕಾದ ಆಧುನಿಕ ನಾಟಕಕಾರರು ಕೇವಲ ಬರವಣಿಗೆಯ ಬಡಗಿಗಳಲ್ಲ; ಅಥವಾ ರಂಗಭೂಮಿಯ ಕಸುಬಿಗರಲ್ಲ. ಬರವಣಿಗೆ ಅವರ ಮಟ್ಟಿಗೆ ವಸಾಹತುಶಾಹಿ ವ್ಯವಸ್ಥೆಯ ವಿರುದ್ಧ ಒಳಹೊರಗಿನ ದೀರ್ಘಕಾಲೀನ ಹೋರಾಟ. ವೊಲೆ ಶೋಯಿಂಕಾನ ಪ್ರಕಾರ ಆಫ್ರಿಕನ್ ಕಲಾಪ್ರತಿಭೆ ವರ್ತಮಾನದ ಅತ್ಯಂತ ತುರ್ತಿನ ಆದ್ಯತೆಗಳ ನಿರೂಪ. ವರ್ಣಭೇದೀಯ ಹಿಂಸೆ, ಅದರ ವಿರುದ್ಧ ಹೋರಾಟದ ಇಕ್ಕಟ್ಟು-ಬಿಕ್ಕಟ್ಟುಗಳು, ಪರಿಣಾಮವಶಾತ್ ತನಗೊದಗಿಬಂದ ದೇಶಭ್ರಷ್ಟತೆ, ಗಡಿಪಾರು ಇತ್ಯಾದಿ ತಲ್ಲಣಗಳ ಕುದಿಯಲ್ಲಿ, ಕುಂದಣದಲ್ಲಿ ಮೂಡಿಬಂದ ಅಪರೂಪದ ಪ್ರತಿಭೆಯ ಫಲ ಲೂಯಿ ನಕೋಸಿಯ ಭರ್ಜರಿ ನಾಟಕ. ಇದನ್ನು ಕನ್ನಡದ ಖ್ಯಾತ ನಿರ್ದೇಶಕ, ರಂಗಕರ್ಮಿ, ಗೆಳೆಯ ನಟರಾಜ್ ಹೊನ್ನವಳ್ಳಿ ಅವರು ಯಶಸ್ವಿಯಾಗಿ ಕನ್ನಡಕ್ಕೆ ತಂದು ನಾಟಕ ರಚನೆ ಮತ್ತು ರಂಗಭೂಮಿಗೆ ಹೊಸಪ್ರೇರಣೆ ನೀಡಬಲ್ಲ ಕೆಲಸ ಮಾಡಿದ್ದಾರೆ.

ನಮ್ಮಲ್ಲಿ ನಾಟಕಗಳೆಂದರೆ ಬರೀ ನಾಟಕಗಳು. ಲೂಯಿ ನಕೋಸಿಯ ನಾಟಕಗಳು ಹಾಗಲ್ಲ. ಅದು ಏಕಕಾಲದಲ್ಲಿ ಕಲಾಕೃತಿ ಮಾತ್ರವಲ್ಲದೆ ನೈತಿಕ, ರಾಜಕೀಯ ಮತ್ತು ದಾರ್ಶನಿಕ ಒಡಂಬಡಿಕೆಯೂ ಆಗಿದೆ. ದೊಡ್ಡ ದೊಡ್ಡ ಪ್ರಶಸ್ತಿ ಬಂದ ಕಾರಣದಿಂದಲೇ ಆಡಂಬರದ ಅತಿ ಪ್ರಶಂಸೆಯನ್ನು ನಿರೀಕ್ಷಿಸುವ ಜಾಣ ಜಾಣೆಯರ ಕೃತಿಯಲ್ಲ. ಒಂದು ಚೂರಾದರೂ ನಮ್ಮ ಸಂದರ್ಭದಲ್ಲಿ ಮಾರ್ಗಪಲ್ಲಟವನ್ನು ಮಾಡಬಲ್ಲದು ಈ ಅಪರೂಪದ ನಾಟಕ.

-ಎಚ್. ಎಸ್. ಶಿವಪ್ರಕಾಶ್, ವಿಮರ್ಶಕರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular