Monday, September 16, 2024
Google search engine
Homeಜಿಲ್ಲೆಮೈಸೂರು ರಂಗಾಯಣಕ್ಕೆ ಸತೀಶ್ ನಿರ್ದೇಶಕ

ಮೈಸೂರು ರಂಗಾಯಣಕ್ಕೆ ಸತೀಶ್ ನಿರ್ದೇಶಕ

ಸರ್ಕಾರ ರಾಜ್ಯದ ವಿವಿಧ ರಂಗಾಯಣಗಳಿಗೆ ನಿರ್ದೇಶಕರನ್ನು ನೇಮಕ ಮಾಡಿದ್ದು ಮೈಸೂರು ರಂಗಾಯಣಕ್ಕೆ ತಿಪಟೂರು ಸತೀಶ್ ಟಿ.ಎಚ್. ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಶಿವಮೊಗ್ಗ ರಂಗಾಯಣಕ್ಕೆ ಪ್ರಸನ್ನ ಡಿ. ಸಾಗರ ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿದ್ದರೆ, ಕಲಬುರಗಿ ರಂಗಾಯಣಕ್ಕೆ ಡಾ.ಸುಜಾತ ಜಂಗಮಶೆಟ್ಟಿ ಅವರನ್ನು ನೇಮಕ ಮಾಡಿದೆ.

ಕಾರ್ಕಳದ ಯಕ್ಷರಂಗಾಯಣಕ್ಕೆ ಶಿವಮೊಗ್ಗದ ವೆಂಕಟರಮಣ ಐತಾಳ ಅವರನ್ನು ನರ್ದೇಶಕರನ್ನಾಗಿ, ದಾವಣಗೆರೆ ವೃತ್ತಿರಂಗಭೂಮಿ ರಂಗಾಯಣಕ್ಕೆ ಮಲ್ಲಿಕಾರ್ಜುನ ಕಡಕೋಳ ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಧಾರವಾಡದ ರಂಗಾಯಣಕ್ಕೆ ಡಾ.ರಾಜು ತಾಳಿಕೋಟೆ ಅವರನ್ನುನಿರ್ದೇಶಕರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಮೈಸೂರು ರಂಗಾಯಣಕ್ಕೆ ತುಮಕೂರು ಜಿಲ್ಲೆಯ ತಿಪಟೂರಿನ ಸತೀಶ್ ಆಯ್ಕೆಯಾಗಿರುವುದಕ್ಕೆ ಹಲವರು ಅಭಿನಂದನೆಗಳನ್ನು ತಿಳಿಸಿದ್ದಾರೆ. ನಾಟಕ ಅಕಾಡೆಮಿಯ ಸದಸ್ಯ ಉಗಮ ಶ್ರೀನಿವಾಸ್ ಅವರು ಸತೀಶ್ ನೇಮಕಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

‘ನಮ್ಮಿಬ್ಬರದ್ದು ಒಂದೇ ಊರು, ಒಂದೇ ಬೀದಿ. ಕೂಗಳತೆ ದೂರದಲ್ಲೇ ನಮ್ಮಿಬ್ಬರ ಮನೆ. ನಮ್ಮ ಪೂರ್ವಿಕರು ಅವರ ಪೂರ್ವಿಕರಿಗೂ ಮೊದಲಿನಿಂದಲೂ ಒಡನಾಟ. ಸತೀಶ್ ಹಲವಾರು ಸಾಹಸಗಳನ್ನು ಮಾಡಿದ್ದಾರೆ. ಇಂಜಿನಿಯರ್ ಪದವಿ ಓದಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ಅವಕಾಶವಿದ್ದರೂ ಎಲ್ಲವನ್ನು ಬಿಟ್ಟು ರಂಗಭೂಮಿಯತ್ತ ವಾಲಿದರು. ತಿಪಟೂರಿನ ಪ್ರವಾಸಿ ಮಂದಿರದ ಮುಂಭಾಗ ನಾವಿಬ್ಬರೂ ಹರಟುವಾಗ ನೀನಾಸಂಗೆ ಓದಲಿಕ್ಕೆ ಹೋಗುವುದಾಗಿ ಹೇಳಿದರು. ನಾಡಿದ್ದು ಸಂದರ್ಶನವಿದೆ ನೀನು ಬಾ ಎಂದರು. ಹೊರಟೆ. ಆಯ್ಕೆಯಾದರು. ನೀನಾಸಂ‌ ಪದವಿ ಪಡೆದು ತಿಪಟೂರಿನಲ್ಲೇ ನೆಲೆ ನಿಂತರು. ರಂಗಶಾಲೆ ಮಾಡಿದರು. ನಾಟಕ ಆಯೋಜಿಸಿದರು.‌ ಈಗ ಪ್ರತಿಷ್ಟಿತ ಮೈಸೂರು ರಂಗಾಯಣಕ್ಕೆ ನಿರ್ದೇಶಕರಾಗಿದ್ದಾರೆ. ಅಭಿನಂದನೆಗಳು Satish Tiptur ಹಾಗೂ Vani Satish ಎಂದು ಉಗಮ ಶ್ರೀನಿವಾಸ್ ಗತದ ದಿನಗಳನ್ನು ಸ್ಮರಿಸಿದ್ದಾರೆ. 

See less

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular