ರಾತ್ರಿ ಮಲಗಿದ್ದ ವ್ಯಕ್ತಿಯ ತಲೆಯ ಮೇಲೆ ಸೈಜು ಕಲ್ಲನ್ನು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದ ಕೆಆರ್‌ಎಸ್ ಅಗ್ರಹಾರದಲ್ಲಿರುವ ಶಿವಣ್ಣ ಅವರ ಕಾರ್ ಶೆಡ್‌ನಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ರವಿ ಎಂದು ಗುರುತಿಸಲಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಶಿವಕುಮಾರ್ ಕೊಲೆ ಮಾಡಿರುವ ವ್ಯಕ್ತಿ ಎಂದು ತಿಳಿದುಬಂದಿದೆ.
ಶಿವಕುಮಾರ್, ರಂಗಸ್ವಾಮಿ ಹಾಗೂ ನಾಗರಾಜು ಹತ್ತಿರ ಗಾರೆ ಕೆಲಸ ಮಾಡಿಕೊಂಡು ಅವರ ತಂದೆ ಹೆಸರಿನಲ್ಲಿರುವ ಶಿವಣ್ಣ ಅವರ ಕಾರ್ ಶೆಡ್‌ನಲ್ಲಿ ವಾಸವಾಗಿದ್ದ, ಇಬ್ಬರೂ ಸ್ನೇಹಿತರಾದರಿಂದ ಆಗ್ಗಾಗ್ಗೆ ಶೆಡ್ಡಿನಲ್ಲಿ ತಂಗುತ್ತಿದ್ದರು ಎನ್ನಲಾಗಿದೆ.
ಭಾನುವಾರ ಇಬ್ಬರು ಕೆಲಸ ಮುಗಿಸಿಕೊಂಡು ಬಂದು ಶೆಡ್‌ನಲ್ಲಿ ಮಲಗಿದ್ದಾರೆ. ರಾತ್ರಿ ಇಬ್ಬರ ನಡುವೆ ಗಲಾಟೆಯಾಗಿ ಶಿವಕುಮಾರ್ ಮಲಗಿದ್ದ ರವಿಯ ತಲೆಗೆ ಸೈಜುಗಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ, ಬೆಳಿಗ್ಗೆ ಶೆಡ್ಡಿನ ಬೀಗ ತೆಗೆದು ನೋಡಿದಾಗ ರವಿ ಕೊಲೆಯಾಗಿದ್ದ, ಕೊಲೆಗೆ ಕಾರಣ ಏನೆಂಬುದು ಸ್ಪಷ್ಟವಾಗಿ ತಿಳಿದು ಬಂದಿರುವುದಿಲ್ಲ.
ಪ್ರಕರಣ ದಾಖಲಿಸಿಕೊಂಡ ಕುಣಿಗಲ್ ಪೊಲೀಸ್ ಠಾಣೆಯ ಪೊಲೀಸರು ಕೊಲೆಯ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕೊಲೆಯಾದ ವ್ಯಕ್ತಿಗೆ ಭಾಗ್ಯ ಎಂಬ ಹೆಂಡತಿ, ಹರ್ಷ ಮತ್ತು ಸಂಧ್ಯಾ ಇಬ್ಬರು ಮಕ್ಕಳಿದ್ದಾರೆ,
ಘಟನೆ ನಡೆದ ಸ್ಥಳಕ್ಕೆ ಎಎಸ್‌ಪಿ ಮರಿಯಪ್ಪ, ಡಿವೈಎಸ್‌ಪಿ ಒಂ ಪ್ರಕಾಶ್, ಇನ್ಸ್ ಪೆಕ್ಟರ್ ನವೀನ್ ಗೌಡ, ಮಾಧ್ಯಾನಾಯಕ್ ,ಪಿಎಸ್‌ಐ ಕೃಷ್ಣಕುಮಾರ್, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.