ಯಾರಿಗೆ ಏನು ಪ್ರಿಯವೋ ಅದೇ ನೆನಪಾಗುತ್ತೆ. ಬಡವರನ್ನು ಕಂಡಾಗ ನಮಗೆ ಅನ್ನ ನೆನಪಾಗುತ್ತದೆ. ಹಾಗಾಗಿ ನಾವು ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕುರಿತು ವ್ಯಂಗ್ಯವಾಡಿದ್ದಾರೆ.
ಸಿಟಿ ರವಿ ಅವರಿಗೆ ಅವರ ಆಸಕ್ತಿ ಮತ್ತು ಸಂಸ್ಕೃತಿಗೆ ತಕ್ಕ ಹಾಗೆ ಬಾರು-ಹುಕ್ಕಾಬಾರ್ ನೆನಪಾಗುತ್ತದೆ ಎಂದು ಚುಚ್ಚಿದ್ದಾರೆ.
ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಗಳು ರಾಜ್ಯದ ಬಿಜೆಪಿ ನಾಯಕರ ಕಣ್ಣುಕುಕ್ಕುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ಅನ್ನಭಾಗ್ಯದ ಅಕ್ಕಿ ಕಡಿಮೆ ಮಾಡಿದಿರಿ. ಇಂದಿರಾ ಕ್ಯಾಂಟೀನ್ ಮುಚ್ಚಲು ನೋಡಿದಿರಿ. ಈಗ ಹೆಸರಿನ ವಿವಾದ ಎಂದು ಬಿಜೆಪಿ ನಾಯಕರನ್ನು ಕೆಣಕಿದ್ದಾರೆ.
ಬಿಜೆಪಿ ಸಂಸ್ಕೃತಿಯನ್ನು ಅವರು ಟೀಕಿಸಿದ್ದಾರೆ.