Friday, October 18, 2024
Google search engine
Homeಜಿಲ್ಲೆ'ಕುಲಪತಿ ಹುದ್ದೆ ಅಧಿಕಾರವಲ್ಲ, ಜವಾಬ್ದಾರಿ'

‘ಕುಲಪತಿ ಹುದ್ದೆ ಅಧಿಕಾರವಲ್ಲ, ಜವಾಬ್ದಾರಿ’

ಕುಲಪತಿ ಹುದ್ದೆ ಅಧಿಕಾರವಾಲ್ಲ, ವಾಸ್ತವವಾಗಿ ಅದೊಂದು ಜವಾಬ್ದಾರಿ ಎಂದು ವಿವಿ ಕುಲಪತಿ ಪ್ರೊ. ಎಂ.ವೆಂಕಟೇಶ್ವರಲು ಹೇಳಿದರು.

ತುಮಕೂರು ವಿವಿಯಲ್ಲಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅವರು ತಮ್ಮಅಧಿಕಾರ ಅವಧಿಯ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ವಿವಿ ಸಿಬ್ಬಂದಿಯೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವ್ಯಕ್ತಿ ಉನ್ನತ ಸ್ಥಾನವನ್ನು ಏರಿದಾಗ ಜವಾಬ್ದಾರಿ ಹೆಚ್ಚಾಗಬೇಕು. ಅಧಿಕಾರವನ್ನು ಚಲಾಯಿಸದೆ ಎಲ್ಲರ ಸಹಕಾರದಿಂದ ಕಾರ್ಯ ನಿರ್ವಹಿಸಿದಾಗ ಬೆಳವಣಿಗೆ ಕಾಣಬಹುದು. ವೈಯಕ್ತಿಕ ಲಾಭಕ್ಕಾಗಿ ಕಾರ್ಯನಿರ್ವಹಿಸದೆ, ಅಭಿವೃದ್ಧಿಗಾಗಿ ದುಡಿಯಬೇಕು. ಅಡ್ಡದಾರಿಯಿಂದ ಯಾವುದೇ ಹುದ್ದೆಗೆ ಏರಬಾರದು ಎಂದರು.

ಅಹಂಕಾರ, ಕೀಳರಿಮೆ, ಸಂಕೀರ್ಣ ಮನೋಭಾವ, ನಕಾರಾತ್ಮಕ ಮನೋಭಾವ ಬಿಟ್ಟು ಸ್ನೇಹಪರತೆಯಿಂದ ಅಧ್ಯಾಪಕರು ಕಾರ್ಯ ನಿರ್ವಹಿಸಿದಾಗ ಶಿಕ್ಷಣ ಸಂಸ್ಥೆಯ ಸಾಮೂಹಿಕ ಪ್ರಗತಿ ಕಾಣಬಹುದು. ಹುದ್ದೆಯ ಅಧಿಕಾರ ಚಲಾಯಿಸದೆ ಸಮಾನತೆಯಿಂದ ಸಹೋದ್ಯೋಗಿಗಳೊಂದಿಗೆ ವರ್ತಿಸಬೇಕು. ವಿಶ್ವವಿದ್ಯಾನಿಲಯದ ಬದಲಾವಣಿಗಾಗಿ ಹೊಸ ಚಿಂತನೆಗಳನ್ನು ಸ್ವಾಗತಿಸಬೇಕು ಎಂದು ತಿಳಿಸಿದರು.

ವಿವಿ ಕುಲಸಚಿವೆ ನಾಹಿದಾ ಜಮ್ ಜಮ್ ಮತ್ತು ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಅವರು ಕುಲಪತಿಗಳಿಗೆ ಶುಭ ಹಾರೈಸಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular