ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ತನ್ನ ಭೂ ವೀಕ್ಷಣೆ ಉಪಗ್ರಹ ಇಒಎಸ್-03ಅನ್ನು ಉಡಾವಣೆ ಮಾಡಿದರೂ ಅದು ಸಂಪೂರ್ಣವಾಗಿ ಸಾಧಿಸಲಾಗಲಿಲ್ಲ ಎಂದು ಬಾಹ್ಯಾಕಾಶ ಸಂಸ್ಥೆ ಉಡಾವಣೆಯ ನಂತರ ತಿಳಿಸಿದೆ ಎಂದು ಎನ್.ಡಿ.ಟಿವಿ ವರದಿ ಮಾಡಿದೆ.
ಜಿಎಸ್ಎಲ್.ವಿ-ಎಫ್-10/ಇಒಎಸ್-03ಅನ್ನು ಇಂದು ಮೂರು ಗಂಟೆ 26 ನಿಮಿಷಗಳ ಕೌಂಟ್ ಡೌನ್ ನಂತರ ಭಾರತೀಯ ಕಾಲಮಾನ ಆಗಸ್ಟ್ 12ರ ಮುಂಜಾನೆ 5.43ರಲ್ಲಿ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬ್ಯಾಹಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು.
ಆದರೆ ಸ್ವಲ್ಪ ಸಮಯದ ನಂತರ ಇದನ್ನು ಮಿಷನ್ ಕಂಟ್ರೋಲ್ ಸೆಂಟರ್ ನಲ್ಲಿ ರೇಂಜ್ ಆಪರೇಷನ್ಸ್ ಡೈರೆಕ್ಟರ್ ‘ಕಾರ್ಯಕ್ಷಮತೆಯ ತೊಂದರೆಯಿಂದಾಗಿ ಮಿಷನ್ ಅನ್ನು ಸಂಪೂರ್ಣವಾಗಿ ಸಾಧಿಸಲಾಗಲಿಲ್ಲ ಎಂದು ಘೋಷಿಸಿದರು.
ಇಒಎಸ್-03 ಅತ್ಯಾಧುನಿಕ ಚುರುಕುಬುದ್ದಿಯ ಭೂಮಿಯ ವೀಕ್ಷಣೆ ಉಪಗ್ರಹವಾಗಿದ್ದು ಜಿಎಸ್ಎಲ್.ವಿ-ಎಫ್-10ನಿಂದ ಜಿಯೋಸಿಂಕ್ರೋಸನ್ ಟ್ರಾನ್ಸ್ ಫರ್ ಕ್ಷಕ್ಷೆಯಲ್ಲಿ ಇರಿಸಲಾಗಿರುತ್ತದೆ. ಇದು ಚಂಡಮಾರುತಗಳು, ಮೋಡದ ಬಿರುಗಾಳಿ ಮತ್ತು ಗುಡುಗು ಸಹಿತ ನೈಸರ್ಗಿಕ ವಿಕೋಪಗಳ ತ್ವರಿತ ಮೇಲ್ವಿಚಾರಣೆಯಲ್ಲಿ ಸಹಾಯ ಮಾಡುತ್ತದೆ ಎಂದು ಎನ್.ಡಿ.ಟಿವಿ ತಿಳಿಸಿದೆ.
“ಈ ಜಿಎಸ್ಎಲ್.ವಿ. ವಿಮಾನದಲ್ಲಿ ಮೊದಲ ಬಾರಿಗೆ 4 ಮೀಟರ್ ವ್ಯಾಸದ ಒಜಿವ್ ಆಕಾರದ ಪೇಲೋಡ್ ಫೇರಿಂಗ್ ಅನ್ನು ಹಾರಿಸಲಾಗುತ್ತಿದೆ. ಇದು ಜಿಎಸ್ಎಲ್.ವಿ ಹದಿನಾಲ್ಕನೆಯ ಹಾರಾಟ’ ಎಂದು ಇಸ್ರೋ ತಿಳಿಸಿರುವುದಾಗಿ ವರದಿ ತಿಳಿಸಿದೆ.