Monday, September 16, 2024
Google search engine
Homeಮುಖಪುಟಟಿವಿ ನಿರೂಪಕಿ ಅಪರ್ಣ ನಿಧನ

ಟಿವಿ ನಿರೂಪಕಿ ಅಪರ್ಣ ನಿಧನ

ಟಿವಿ ಆಂಕರ್ ಹಾಗೂ ರೇಡಿಯೋ ಜಾಕಿ ಆಗಿದ್ದ ಅಪರ್ಣಾ ಬೆಂಗಳೂರಿನಲ್ಲಿ ಜೂನ್ 11 ರಂದು ತಡರಾತ್ರಿ ನಿಧನರಾಗಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು.

ಅವರು ಅಪಾರ ಆಬಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ದೂರದರ್ಶನ ಚಂದನದಲ್ಲಿ ಟಿವಿ ನಿರೂಪಕಿಯಾಗಿದ್ದರು. ಅಷ್ಟೇ ಅಲ್ಲ ರೇಡಿಯೋ ಜಾಕಿಯಾಗಿಯೂ ಕೆಲಸ ನಿರ್ವಹಿಸಿದ್ದರು.

ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಪ್ರಸಿದ್ದಿ ಪಡೆದಿದ್ದರು. ಪುಟ್ಟಣ್ಣ ಕಣಗಾಲ್ ಅವರ ಕೊನೆಯ ಚಿತ್ರ ಮಸಣದ ಹೂ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಮಜಾ ಟಾಕೀಸ್ ನಲ್ಲಿ ವರಲಕ್ಷ್ಮಿಯಾಗಿ ಹಾಸ್ಯ ನಟಿಯಾಗಿಯೂ ಅಭಿನಯಿಸಿದ್ದರು.

1993ರಲ್ಲಿ ಆಕಾಶವಾಣಿಯಲ್ಲಿ ರೇಡಿಯೋ ಜಾಕಿಯಾಗಿ ವೃತ್ತಿ ಆರಂಭಿಸಿದ ಅಪರ್ಣಾ ಅವರು ಮೂಡಲ ಮನೆ, 2013ರಲ್ಲಿ ಮುಕ್ತ ಧಾರಾವಾಹಿಯಲ್ಲೂ ನಟಿಸಿದ್ದಾರೆ. 2015ರಲ್ಲಿ ಈಟಿವಿ ಕನ್ನಡ ನಡೆಸಿದ ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿ ಜನರ ಗಮನ ಸೆಳೆದಿದ್ದರು.

ಮಸಣದ ಹೂವು, ಸಂಗ್ರಾಮ, ನಮ್ಮೂರ ರಾಜ, ಸಾಹಸ ವೀರ, ಮಾತೃ ವಾತ್ಸಲ್ಯ, ಒಲವಿ ಆಸರೆ, ಇನ್ಸ್ ಪೆಕ್ಟರ್ ವಿಕ್ರಮ್, ಒಂದಾಗಿ ಬಾಳು, ಡಾಕ್ಟರ್ ಕೃಷ್ಣ, ಒಂಟಿ ಸಲಗ, ಚಕ್ರವರ್ತಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular