ನಾನು ಕನ್ನಡ ಸಾಹಿತ್ಯದ ವಿದ್ಯಾರ್ಥಿ ಅಲ್ಲಾ, ಹಾಗಾಗಿ ಸಾಹಿತ್ಯದ ಪರಿಭಾಷೆ ಬಳಸಿ ಮಾತನಾಡಿವುದು ನನಗೆ ಬರುವುದಿಲ್ಲ. ನಾನು ನಮ್ಮ ಸಮಾಜವನ್ನು ಗ್ರಹಿಸುವ ತಿಳಿಸಿವ ಕಟ್ಟಿಕೊಡುವ ಆವರಣವನ್ನು ಕಟ್ಟಿಕೊಡುತ್ತದೆ ಎಂಬುದು. ನಮ್ಮ ಸಮಾಜವನ್ನು ಬಿಂಬಿಸಿವುದರ ಬಗ್ಗೆ ಆಸಕ್ತಿ ಇದೆ 1988ರಲ್ಲಿ ಕುಸುಮಬಾಲೆ ಬಿಡುಗಡೆ ಆಯ್ತು. ಕುಸುಮಬಾಲೆಯ ನಂತರ ಆ ಪ್ರಕಾರದಲ್ಲಿ ಬಂದಂತಹ ಪುಸ್ತಕವೇ ಅಟ್ರಾಸಿಟಿ ಎಂದು ಸಮಾಜ ವಿಜ್ಞಾನಿ ಡಾ.ಸಿ.ಜಿ.ಲಕ್ಷ್ಮೀಪತಿ ಅಭಿಪ್ರಾಯಪಟ್ಟರು.
ತುಮಕೂರಿನ ಕನ್ನಡ ಭವನದಲ್ಲಿ ಜೂ.29ರಂದು ಹಮ್ಮಿಕೊಂಡಿದ್ದ ಕಂಟಲಗೆರೆ ಗುರುಪ್ರಸಾದ್ ಅವರ ಅಟ್ರಾಸಿಟಿ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ದೇವನೂರು ರವರ ಕಾದಂವರಿಯಲ್ಲಿ ಅನೇಕ ಕುಸೂರಿಗಳಿವೆ, ನೇರವಾದ ವಾಸ್ತವವಾದ ನಿರೂಪಣೆ ಈ ಅಟ್ರಾಸಿಟಿಯಲ್ಲಿದೆ. ನಾನು ಇದನ್ನು ಓದುವಾಗ ಬಹಳ ಕಷ್ಟವಾಯ್ತು ಎಂದು ಹೇಳಿದರು.
ಒಂದು ವಾರಗಳ ಕಾಲ ಡೀಪಾಗಿ ಓದಬೇಕಾಯ್ತು, ಅದರಲ್ಲಿ ಅಷ್ಟೊಂದು ಲೇಯರ್ಸ್ಗಳಿವೆ. ಪ್ರತಿ ಪಾತ್ರಕ್ಕೂ ಒಂದೊಂದು ಫ್ಲಾಶ್ ಬ್ಯಾಕ್ ಇದ್ದು ಉಪಕಥೆಗಳಿವೆ. ಭಾರತೀಯ ಗ್ರಾಮಗಳ ಕ್ರೌರ್ಯ, ಭಾರತೀಯ ಗ್ರಾಮಗಳ ಕ್ರೌರ್ಯದ ಪರಮಾವಧಿ ಈ ಕಾದಂಬರಿಯಲ್ಲಿ ಕಾಣಬಹುದು. ಮೇಲ್ಜಾತಿಗಳ ಕಾದಂಬರಿ ಆತ್ಮಕಥಾನಕವಾಗಿರುತ್ತದೆ. ಅವರ ಆತ್ಮಕಥೆ ಮತ್ತು ಸಮಾಜವೂ ಒಳಗೊಂಡೊರಿತ್ತದೆ. ಆದರೆ ದಲಿತರ ಕಾದಂಬರಿಗಳಲ್ಲಿ ಸಮುದಾಯದ ಕಾಣುತ್ತದೆ ಎಂದರು.
ಯಾರಾದ್ರೂ ತುಂಬಾ ಜನ ಮಾತಾಡ್ತಾರೆ, ಈಗ ಸಂಘ ಪರಿವಾರ ಬಂದಿದೆ. ಅದು ಬಂದಿದೆ ಎಂದು ಬುದ್ಧಿಜೀವಿಗಳು ಮಾತಾಡ್ತಾರೆ. ನಮ್ಮ ಜಾತಿಯೇ ಹಿಟ್ಲರ್ ಆಗಿವೆ. ಎಲ್ಲವೂ ಜಾತಿ ಪದ್ದತಿಯ ಪ್ರತಿಫಲವೆ. ಒಂದು ಗ್ರಾಮವನ್ನು ವ್ಯಾಖ್ಯಾನಿಸುವುದೇ ಈ ಅಟ್ರಾಸಿಟಿ. ಡಿಎಸ್ಎಸ್ ನಾಯಕರುಗಳು ಸ್ಥಳೀಯವಾಗಿ ಎದುರಿಸುವ ಸಮಸ್ಯೆಗಳು ಬೇರೆ ಬೇರೆಯಾಗಿರುತ್ತವೆ ಎಂದು ತಿಳಿಸಿದರು.
ಅತಿಯಾದ ನೈತಿಕತೆಯನ್ನು ಬಡವರಿಂದ ಮಾತ್ರ ನೀರಿಕ್ಷಿಸಲಾಗುತ್ತದೆ ಈ ದೇಶದಲ್ಲಿ. ನೈತಿಕ ಪ್ರಶ್ನೆ ಎನ್ನುವುದು ಬಹಳ ತಾತ್ವಿಕವಾದದ್ದು. ಕಾದಂಬರಿಗಳನ್ನು ನಾವು ಓದುವುದಲ್ಲ. ಅದನ್ನು ಉತ್ಖನನ ಮಾಡಬೇಕು. ನಾವು ಸಾಮಾಜಿಕ ಬಂಡವಾಳವಾಗಿ ಅಂಬೇಡ್ಕರ್ ಅನ್ನು ಬಳಸುತ್ತೇವೆ, ಮುಂದೆಯೂ ಬಳಸಿಕೊಳ್ತೇವೆ, ದೇವರಾಜು ತಹಶೀಲ್ದಾರ್ ಬಳಿ ಹತ್ತು ಸಾವಿರ ಕೇಳಿದ ತಕ್ಷಣ ಅದು ಭ್ರಷ್ಟಾಚಾರ ಎಂದು ಡಿಎಸ್ಎಸ್ ಅವನತಿ ಎನ್ನುತ್ತಾರೆ. ಹಾಗಾದ್ರೆ ಈ ಭ್ರಷ್ಟಾಚಾರದ ವ್ಯಾಖ್ಯಾನವನ್ನು ನಾವು ಮರು ವ್ಯಾಖ್ಯಾನ ಮಾಡಬೇಕಿದೆ ಎಂದರು.
ಸಾಮಾನ್ಯವಾಗಿ ಪ್ರತಿ ಪೇಜಲ್ಲೂ ಅಟ್ರಾಸಿಟಿ ಮರುಕಳಿಸುತ್ತ ಹೋಗುತ್ತದೆ. ಸೂಕ್ಷ್ಮವಾದ ವ್ಯಕ್ತಿಗಳ ಮೇಲೆ ಮನಸ್ಸುಗಳ ಮೇಲೆ ಹೇಗೆ ಸಿಂಬಾಲಿಕ್ ವೈಲೆನ್ಸ್ ಅಂದರೆ ಸಾಂಕೇತಿಕ ಹಿಂಸೆಗಳನ್ನು ಸಮಾಜ ಶಾಸ್ತ್ರೀಯ ದಾಖಲೆಯಂತೆ ಈ ಅಟ್ರಾಸಿಟಿ ಯಲ್ಲಿ ದಾಖಲಾಗಿದೆ ಎಂದು ವಿವರಿಸಿದರು.
ಅಟ್ರಾಸಿಟಿ ಕಾದಂಬರಿ ಸಾಂಸ್ಕೃತಿಕ ಗಣಿಯಾಗಿ ಕಂಡಿದೆ ನನಗೆ. ಹಾಗಾಗಿಯೇ ಇದನ್ನು ಉತ್ಖನನ ಮಾಡಬೇಕಿದೆ. ಬಹುಜನರ ಆಶಯವು ಬಿಕೆಯವರ ಪ್ರಭಾವ ನವೀನನಲ್ಲಿ ಇಲ್ಲಿ ಕಾಣಬಹುದು. ಈ ಕಾಲಕ್ಕೆ ಬಂದಿರುವ ಒಂದು ಒಳ್ಳೆಯ ಸಾಂಸ್ಕೃತಿಕ ದಾಖಲೆಯಾಗಿ ಅಟ್ರಾಸಿಟಿ ಕಾದಂಬರಿ ಬಂದಿದೆ ಎಂದರು.
ಕಾರ್ಯಕ್ರಮವನ್ನು ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಲೇಖಕ ತುಂಬಾಡಿ ರಾಮಯ್ಯ ವಹಿಸಿದ್ದರು. ಹಿರಿಯ ಪತ್ರಕರ್ತ ಚ.ಹ.ರಘುನಾಥ್ ಪುಸ್ತಕ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಮೈಸೂರಿನ ಚರಿತ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ದಸಂಸ ಮುಖಂಡ ಕುಂದೂರು ತಿಮ್ಮಯ್ಯ, ವೇಣುಪ್ರವೀಣ್ ಕಂಟಲಗೆರೆ, ಕಾದಂಬರಿಕಾರ ಗುರುಪ್ರಸಾದ್ ಕಂಟಲಗೆರೆ ಹಾಜರಿದ್ದರು.