ತಾಂತ್ರಿಕ ಸಮಿತಿ ರಚಿಸುತ್ತೇವೆ ಎಂದು ಹೇಳುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಾಗಾರಿ ಮಾತ್ರ ನಿಲ್ಲಿಸುತ್ತಿಲ್ಲ ಎಂದು ಹೋರಾಟ ಸಮಿತಿಯ ಶಾಂತಕುಮಾರ್ ಆರೋಪಿಸಿದರು.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಅವರು ಕುಣಿಗಲ್ ವರೆಗೆ ನಾಲೆಯಲ್ಲಿ ನೀರು ಹರಿಸಲು ನಾಲೆ ಆಧುನಿಕರಣಕ್ಕೆ 700 ಕೋಟಿ ವಿನಿಯೋಗಿಸಲಾಗುತ್ತಿದೆ. ಇದ್ದರಿಂದ ನಾಲೆಯಲ್ಲಿ ನೀರು ಸೋರಿಕೆಯಾಗುವುದಿಲ್ಲ. ಹೀಗಿದ್ದರೂ ರಾಜ್ಯ ಸರ್ಕಾರ ಕುಣಿಗಲ್ ಮೂಲಕ ಮಾಗಡಿ ಮತ್ತು ರಾಮನಗರಕ್ಕೆ ಪೈಪಲೈನ್ ಮೂಲಕ ನೀರು ತೆಗೆದುಕೊಂಡು ಹೋಗಲು ಹುನ್ನಾರ ನಡೆಸುತ್ತಿದೆ ಆದ್ದರಿಂದ ಜೂನ್ 25 ತುಮಕೂರು ಜಿಲ್ಲಾ ಬಂದ್ ಮಾಡುತ್ತೇವೆ ಎಂದು ಹೇಳಿದರು.
ಕಳೆದ ಎರಡು ದಿನಗಳ ಹಿಂದ ಉಪಮುಖ್ಯಮಂತ್ರಿಗಳು ಮತ್ತು ಪರಮೇಶ್ವರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಜನತೆ ಪರ ಹಾಗೂ ಕಾಮಗಾರಿ ನಿಲ್ಲಿಸುವ ಸಂಬಂಧ ತಿರ್ಮಾನವಾಗಿಲ್ಲ. ಅದ್ದರಿಂದ ಹೋರಾಟವನ್ನು ಮಾಡಿಯೇ ತೀರುತ್ತೇವೆ ಎಂದು ತಿಳಿಸಿದರು.
ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಮಾತನಾಡಿ, ಸರ್ಕಾರ ಈಗಾಗಲೇ ಟೆಂಡರ್ ಕರೆದಿದೆ. ಕೆಲಸ ನಡೆಯುತ್ತಿದೆ. ಉಪಮುಖ್ಯಮಂತ್ರಿಗಳು ಕಾಮಗಾರಿ ಸಂಬಂಧ ತಾಂತ್ರಿಕ ಸಮಿತಿ ರಚಿಸಿ ಸಾಧಕ ಬಾಧಕಗಳ ಬಗ್ಗೆ ವರದಿ ಬರಲಿ ನೋಡೋಣ ಎನ್ನುತ್ತಾರೆ. ಕಾಮಗಾರಿ ನಿಲ್ಲಿಸುವುದು ಬೇಡ ಎಂದರೆ ತಾಂತ್ರಿಕ ಸಮಿತಿ ರಚನೆ ಯಾಕೆ ಬೇಕು ಎಂದು ಪ್ರಶ್ನೆ ಮಾಡಿದರು.
ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ನಿಂದ ಗುಬ್ಬಿ, ಶಿರಾ, ಮಧುಗಿರಿ, ಕೊರಟಗೆರೆ ಮತ್ತು ತುಮಕೂರು ಗ್ರಾಮಾಂತರದ ಕ್ಷೇತ್ರಗಳ ರೈತರಿಗೆ, ಜನ, ಜನುವಾರಗಳಿಗೆ ತೊಂದರೆಯಾಗುತ್ತದೆ ಎಂದು ಹೇಳಿದರು.
ಶಾಸಕ ಸುರೇಶ್ ಗೌಡ ಮಾತನಾಡಿ, ರಾಜಕಾರಣಕ್ಕಾಗಿ ಈ ಹೋರಾಟ ಮಾಡತ್ತಾ ಇಲ್ಲ. ರೈತರಿಗೆ ಅನ್ಯಾಯವಾಗುತ್ತದೆ ಎಂಬ ಕಾರಣಕ್ಕೆ ಹೋರಾಟ ಮಾಡುತ್ತಿದೇವೆ. ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಮಾಡಿದ್ದೇ ಆದರೆ 70 ರಿಂದ 167 ಕಿಮೀ ವರೆಗಿನ ನಾಲೆಯವರೆಗೆ ನೀರೇ ಹರಿಯುವುದಿಲ್ಲ. ಉಪಮುಖ್ಯಮಂತ್ರಿಗಳು ಅಧಿಕಾರ ಇದೆ ಎಂಬ ಕಾರಣಕ್ಕೆ ದಬ್ಬಾಳಿಕೆ ಮಾಡಬಾರದು ಎಂದರು.
ಮಾಜಿ ಸಚಿವ ಸೊಗಡು ಶಿವಣ್ಣ,ಕನ್ನಡಸೇನೆಯ ದನಿಯಕುಮಾರ್ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ
ನಾಗರಾಜು,ವೆಂಕಟೇಶ, ನರಸಿಂಹರಾಜು,ಪಂಚಾಕ್ಷರಯ್ಯ,
ಪ್ರಭಾಕರ್ ಮತ್ತಿತರರು ಹಾಜರಿದ್ದರು.