Friday, September 20, 2024
Google search engine
Homeಜಿಲ್ಲೆಕಲುಷಿತ ನೀರು ರಾಜಕಾಲುವೆಗೆ-ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ

ಕಲುಷಿತ ನೀರು ರಾಜಕಾಲುವೆಗೆ-ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ

ತುಮಕೂರು ಹೊರವಲಯದ ಅಂತರಸಹಳ್ಳಿ ಕ್ಯೆಗಾರಿಕಾ ವಸಾಹತು ಕಾರ್ಖಾನೆಯೊಂದರಿಂದ ಕಲುಷಿತ ನೀರನ್ನು ರಾಜ ಕಾಲುವೆಗೆ ಹೊರಬಿಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅಂತರಸಹಳ್ಳಿ ಕ್ಯೆಗಾರಿಕಾ ವಸಾಹತು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕ್ಯೆಗಾರಿಕೆಗಳು ಮಾಲಿನಯುಕ್ತ ತ್ಯಾಜ್ಯಗಳನ್ನು ಕಾಲುವೆಗಳಿಗೆ ಬಿಡಬಾರದು, ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಸದರಿ ಪ್ರದೇಶವನ್ನು ಸಮಗ್ರವಾಗಿ ಪರಿಶೀಲಿಸಿ, ತ್ವರಿತ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಅಂತರಸಹಳ್ಳಿ ಕ್ಯೆಗಾರಿಕಾ ವಸಾಹತು ಪ್ರದೇಶದ ವ್ಯಾಪ್ತಿಯು ರಾಜ್ಯ ಸಣ್ಣ ಕ್ಯೆಗಾರಿಕಾ ಅಭಿವೃದ್ದಿ ನಿಗಮದ ವ್ಯಾಪ್ತಿಗೆ ಸೇರಿರುವದರಿಂದ, ರಾಜ್ಯ ಸಣ್ಣ ಕ್ಯೆಗಾರಿಕಾ ಅಭಿವೃದ್ದಿ ನಿಗಮದ ಸಹಾಯಕ ವ್ಯವಸ್ಥಾಪಕರಿಗೆ ಸ್ಥಳದಲೇ ದೂರವಾಣಿ ಮುಖೇನ ಮಾತನಾಡಿ, ಅಂತರಸಹಳ್ಳಿ ಕ್ಯೆಗಾರಿಕಾ ಪ್ರದೇಶದ ಕಾಲುವೆಗಳಲ್ಲಿ ಇರುವಂತಹ ತ್ಯಾಜ್ಯಗಳ ಪರಿಶೀಲನೆ ಮತ್ತು ವಿಲೇವಾರಿಗೆ ಶೀಘ್ರ ಕ್ರಮಕ್ಯೆಗೊಳ್ಳುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕ್ಯೆಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು, ಕೆಐಎಡಿಬಿ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular