Friday, November 22, 2024
Google search engine
Homeಮುಖಪುಟಕಾಡುಗೊಲ್ಲರ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ - ಡಾ.ದೊಡ್ಡಮಲ್ಲಯ್ಯ

ಕಾಡುಗೊಲ್ಲರ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ – ಡಾ.ದೊಡ್ಡಮಲ್ಲಯ್ಯ

ಪ್ರಸ್ತುತ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಒಕ್ಕೂಟದ ವತಿಯಿಂದ ಕಾಂಗ್ರೆಸ್ಸಿನ ಎಸ್.ಪಿ.ಮುದ್ದಹನುಮೇಗೌಡರನ್ನು ಬೆಂಬಲಿಸಲು ತೀರ್ಮಾನಿಸಿದ್ದೇವೆ ಎಂದು ಕಾಡುಗೊಲ್ಲರ ಮುಖಂಡ ಡಾ.ದೊಡ್ಡಮಲ್ಲಯ್ಯ ತಿಳಿಸಿದರು.

ಕಾರಣ ಸ್ವಾತಂತ್ರೋತ್ತರ ರಾಜ್ಯದಲ್ಲಿ ಕಾಡುಗೊಲ್ಲರನ್ನು ಗುರುತಿಸಿ ಬೆಂಬಲಿಸಿದ್ದು ಕಾಂಗ್ರೆಸ್ ಪಕ್ಷ ಮಾತ್ರ. ದೇವರಾಜ ಅರಸರ ಕಾಲದಲ್ಲಿ ಹಾಗೂ ನಂತರ ಬಂದ ವೀರೇಂದ್ರ ಪಾಟೀಲರು ಮತ್ತು ಎಸ್.ಎಂ.ಕೃಷ್ಣರ ಕಾಲದಲ್ಲಿ ಹೊಳಲ್ಕೆರೆಯಲ್ಲಿ ಕೆ.ಹೆಚ್.ಸಿದ್ದರಾಪ್ಪನವರನ್ನು ಮತ್ತು ಎ.ವಿ.ಉಮಾಪತಿಯವರನ್ನು ಸೇರಿದಂತೆ ಅನೇಕರನ್ನ ಶಾಸಕರನ್ನಾಗಿಸಿದರು ಈ ಹಿನ್ನೆಲೆಯಲ್ಲಿ ಋಣ ಭಾದೆ ಹೊಂದಿರುವ ನಾವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದೇವೆ ಎಂದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಯಮ್ಮ ಬಾಲರಾಜರನ್ನು ಶಾಸಕರನ್ನಾಗಿಸಿದರು. ಉಳಿದಂತೆ ಸಿದ್ದರಾಮಯ್ಯನವರು ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಿದರು. ರಾಜ್ಯ ಯೋಜನಾ ಮಂಡಳಿಗೆ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ರಾಜ್ಯ ನಿಷ್ಕರ್ಷ ಮಂಡಳಿಗೆ ಸದಸ್ಯರನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವದ್ಯಾಲಯಕ್ಕೆ ಉಪಕುಲಪತಿಗಳನ್ನು ನೇಮಿಸಿದರು. ಕಾಡುಗೊಲ್ಲರಿಗೆ ತಮ್ಮ ಜಾತಿಯೇ ಇರಲಿಲ್ಲ.

ಆದ್ದರಿಂದ ೨೦೧೮ರಲ್ಲಿ ಕಾಡುಗೊಲ್ಲ ಮತ್ತು ಹಟ್ಟಿಗೊಲ್ಲ ಪದವನ್ನು ರಾಜ್ಯ ಹಿಂದುಳಿದ ವರ್ಗಗಳ ಪಟ್ಟಿ ಪ್ರವಗ(೧)ರಲ್ಲಿ ಸೇರಿಸಿ ಮೀಸಲಾತಿಗೆ ಅರ್ಹರನ್ನಾಗಿ ಮಾಡಿದರು, ಕುರಿಗಾಹಿ ಬಂಧುಗಳಿಗೆ ಮತ್ತು ರೈತರಿಗೆ ಅನುಗ್ರಹ ಯೋಜನೆಯನ್ನು ಜಾರಿ ಮಾಡಿ ರಾಸುಗಳು ಮರಣ ಹೊಂದಿದಾಗ ಆಗುವ ನಷ್ಟವನ್ನು ತಪ್ಪಿಸಿದರು. ಹೀಗೆ ಅನೇಕ ಸೌಲಭ್ಯಗಳನ್ನು ಕೊಟ್ಟ ಮಹನೀಯರು ಸಿದ್ದರಾಮಯ್ಯನವರು ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುತ್ತೇವೆ ಎಂದರು.

ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ರಾಮಣ್ಣ ಕೂನಿಕೆರೆ ಮಾತನಾಡಿ, ಕಳೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ್ದರಿAದ ತುಮಕೂರು ಮತ್ತು ಚಿತ್ರದುರ್ಗಗಳಲ್ಲಿ ಅನೇಕ ಶಾಸಕರು ಬಿಜೆಪಿ ಪಕ್ಷದಿಂದ ಚುನಾಯಿತರಾದರು. ಬದಲಾಗಿ ಬಿಜೆಪಿ ಮಾಡಿದ್ದೇನು? ೨೦೨೦ರಲ್ಲಿ ಶಿರಾ ಉಪಚುನಾವಣೆಯಲ್ಲಿ ಎಸ್.ಟಿ.ಗೆ ಸೇರಿಸುತ್ತೇವೆ ಮತ್ತು ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುತ್ತೇವೆ ಎಂದು ನಮ್ಮವರ ಮತ ಪಡೆದು ಗೆಲುವು ಸಾಧಿಸಿ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲೇ ಇಲ್ಲ. ಅದಕ್ಕೂ ಸಿದ್ದರಾಮಯ್ಯನವರೇ ಬರಬೇಕಾಯಿತು.

ಯಡಿಯೂರಪ್ಪನವರು, ವಿಜಯೇಂದ್ರರವರು ಪ್ರತಾಪ್ ಸಿಂಹರವರು ಹಾಗೂ ಎ.ನಾರಾಯಣಸ್ವಾಮಿಯವರು ಕಾಡುಗೊಲ್ಲರನ್ನು ಎಸ್.ಟಿಗೆ ಸೇರಿಸುತ್ತೇವೆಂದು ಸುಳ್ಳು ಹೇಳಿದರು. ನಮ್ಮ ಎಸ್.ಟಿ.ಸೇರ್ಪಡೆ ಕಡತ ಕಳೆದ ಹತ್ತು ವರ್ಷಗಳಿಂದಲೂ ಕೇಂದ್ರ ಸರ್ಕಾರದಲ್ಲಿ ಬಾಕಿ ಇದೆ. ಈಗ ಮತ್ತೆ ಎಸ್.ಟಿ.ಗೆ ಸೇರಿಸುತ್ತೇವೆ ಎಂದು ಮೂಗಿಗೆ ತುಪ್ಪ ಹಚ್ಚುತ್ತಿದ್ದಾರೆ, ಈ ಎಲ್ಲಾ ವಿಚಾರಗಳ ಹಿನ್ನೆಲೆಯಲ್ಲಿ ನಿಜ ಹೇಳುವ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪರ್ಧೆ ಮಾಡಿದ ಸಜ್ಜನರು, ವಿದ್ಯಾವಂತರಾದ ಎಸ್.ಪಿ.ಮುದ್ದಹನುಮೇಗೌಡರನ್ನು ಈ ಸಾರಿಯ ಚುನಾವಣೆಯಲ್ಲಿ ಬೆಂಬಲಿಸಲು ತೀರ್ಮಾನಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಕಾಡುಗೊಲ್ಲ ಬುಡಕಟ್ಟು ಮಹಾಸಭಾ ಪ್ರಧಾನ ಕಾರ್ಯದರ್ಶಿ ಹಾರೋಗೆರೆ ಮಾರಣ್ಣ, ಕಾಡುಗೊಲ್ಲರ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ್, ಕರಡಿ ಬುಳ್ಳಪ್ಪ ವೇದಿಕೆ ಪ್ರಧಾನ ಕಾರ್ಯದರ್ಶಿ ಬಿಡಿ ಬಸವರಾಜು, ಕಾಡುಗೊಲ್ಲ ಮಹಾಸಭಾ ರಾಜ್ಯ ನಿರ್ದೇಶಕ ಸಂಪತ್ ಕುಮಾರ್, ಪದಾಧಿಕಾರಿಗಳಾದ ಶಿವು ಯಾದವ್, ಚಿನ್ನಪ್ಪ, ಹರೀಶ್ ಪೂಜಾರ ಸೇರಿದಂತೆ ಇತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular