ಆಕಸ್ಮಿಕ ಬೆಂಕಿ ತಗುಲಿ ಬಿರಿಯಾನಿ ಹೋಟೆಲ್‌ವೊಂದು ಸುಟ್ಟು ಹೋಗಿರುವ ಘಟನೆ ತುಮಕೂರಿನಲ್ಲಿ ಗುರುವಾರ ಸಂಭವಿಸಿದೆ. ಘಟನೆಯಲ್ಲಿ ನಗರದ ಎಸ್.ಐಟಿ ಕಾಲೇಜು ಹಿಂಭಾಗದ ಗಂಗೋತ್ರಿ ನಗರದ ಮುಖ್ಯರಸ್ತೆಯಲ್ಲಿರುವ ಬಿರಿಯಾನಿ ಹೌಸ್ ಹೋಟೆಲ್ ಸಂಪೂರ್ಣ ಸುಟ್ಟು ಹೋಗಿದೆ.
ಸದರಿ ಹೋಟೆಲ್ ನಲ್ಲಿ ಮೆಗಾ ಗ್ಯಾಸ್ ಪೈಪ್‌ಲೈನ್ ಅಳವಡಿಸಿದ್ದು ಸ್ಟೌವ್ ಮೇಲೆ ಅಡುಗೆ ಎಣ್ಣೆ ಬಾಂಡಲಿ ಇಟ್ಟಿದ್ದಾಗ ದಿಢೀರನೇ ಬೆಂಕಿ ಕಾಣಿಸಿಕೊಂಡಿದೆ. ನೋಡುನೋಡುತ್ತಿದ್ದಂತೆಯೇ ಬೆಂಕಿ ಇಡೀ ಹೋಟೆಲ್ ಅನ್ನು ಆವರಿಸಿತು ಎನ್ನಲಾಗಿದೆ.
ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದು ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದ್ದಾರೆ.
ಘಟನೆಯಲ್ಲಿ ಬಿರಿಯಾನಿ ಮಾಡಲು ತಂದಿದ್ದ ಮಾಂಸ, ಅಕ್ಕಿ, ಪಾತ್ರೆಗಳೆಲ್ಲ ಸುಟ್ಟು ಹೋಗಿವೆ. ಹೋಟೆಲ್ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಸ್ಥಳಕ್ಕೆ ಮಾಜಿ ಸಚಿವ ಸೊಗಡು ಶಿವಣ್ಣ ಭೇಟಿ ನೀಡಿ ಹೊಟೆಲ್ ಸಿಬ್ಬಂದಿಯಿAದ ಬೆಂಕಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.