Friday, November 22, 2024
Google search engine
Homeಜಿಲ್ಲೆಮತ ಹಾಕಿದ ಬಳಿಕ ಮತಕೇಂದ್ರದಲ್ಲೇ ಹೃದಯಾಘಾತವಾಗಿ ಮೃತಪಟ್ಟ ಮತದಾರ

ಮತ ಹಾಕಿದ ಬಳಿಕ ಮತಕೇಂದ್ರದಲ್ಲೇ ಹೃದಯಾಘಾತವಾಗಿ ಮೃತಪಟ್ಟ ಮತದಾರ

ಮತದಾರರೊಬ್ಬರು ಮತಗಟ್ಟೆಯೊಂದರಲ್ಲಿ ಮತ ಹಕ್ಕು ಚಾಲಾಯಿಸಿ ಹೊರಬರುತ್ತಿರುವಾಗಲೇ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಮೃತರನ್ನು ರಮೇಶ್ ಎಂದು ಗುರುತಿಸಲಾಗಿದೆ.

ತುಮಕೂರಿನ ಸೋಮೇಶ್ವರಪುರಂನ ಎಸ್.ವಿ.ಕೆ. ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಬೂತ್ ನಂಬರ್ 149ರಲ್ಲಿ ಕೆ.ಎಸ್.ರಮೇಶ್ ದಂಪತಿ ಇಂದು ಬೆಳಗ್ಗೆ 11.30ರ ಸಮಯದಲ್ಲಿ ಮತಕೇಂದ್ರಕ್ಕೆ ಹೋಗಿ ಮತ ಚಲಾಯಿಸಿ ಹೊರಬರುತ್ತಿರುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದರು ಎನ್ನಲಾಗಿದೆ.

ಕೂಡಲೇ ಕೆ.ಎಸ್.ರಮೇಶ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದರು ಎಂದು ಹೇಳಲಾಗಿದೆ.

ರಮೇಶ್ ಸೋಮೇಶ್ವರಪುರಂನ ಮುಖ್ಯರಸ್ತೆಯಲ್ಲಿ ಎಫ್ ಸ್ಕ್ವಯರ್ ಬಟ್ಟೆ ಅಂಗಡಿ ನಡೆಸುತ್ತಿದ್ದರೆಂದು ಅವರ ಆಪ್ತರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular