ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ರೈತರನ್ನು ತೀವ್ರ ಅವಮಾನಕ್ಕೀಡು ಮಾಡಿರುವ ಬಿಜೆಪಿ ಪಕ್ಷವನ್ನು ಸೋಲಿಸಿ, ರೈತರನ್ನು ಉಳಿಸಿ ಎಂಬುದಷ್ಟೇ ರೈತ ಸಂಘದ ಕೋರಿಕೆಯಾಗಿದೆ.ನೇರವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಹೇಳಿಕೆ ನೀಡಿಲ್ಲ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಹಾಗು ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಸ್ಪಷ್ಟನೆ ನೀಡಿದ್ದಾರೆ.
ರೈತ ಸಂಘದಲ್ಲಿ ಎಲ್ಲಾ ಪಕ್ಷ ಹಾಗು ಸಮುದಾಯಗಳಿಗೆ ಸೇರಿದ ಜನರಿದ್ದಾರೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಸುಗ್ರೀವಾಜ್ಣೆ ಮೂಲಕ ಜಾರಿಗೆ ತಂದಿದ್ದ ಮೂರು ಕರಾಳ ರೈತ ವಿರೋಧ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಸುಮಾರು 13 ತಿಂಗಳುಗಳ ಕಾಲ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ 752 ಕ್ಕು ಹೆಚ್ಚು ಜನ ರೈತರು ಸಾವನ್ನಪ್ಪಿದರು. ರೈತರ ಹೋರಾಟಕ್ಕೆ ಮಣಿದು ಕರಾಳ ಕೃಷಿ ಕಾಯ್ದೆಗಳ ವಾಪಸ್ ಪಡೆಯುವ ವೇಳೆ ರೈತರ ಬೇಡಿಕೆಗಳಾದ ಎಂ.ಎಸ್.ಪಿ.ಗೆ ಕಾನೂನಿನ ಬಲ ಹಾಗು ವಿದ್ಯುತ್ ಖಾಸಗೀಕರಣ ಮಸೂದೆ ಜಾರಿ ಮಾಡಬಾರದು ಎಂಬ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿ, ಎರಡನ್ನು ಈಡೇರಿಸದೆ ಮೋಸ ಮಾಡಿದೆ ಎಂದು ದೂರಿದರು.
ಎಂ.ಎಸ್.ಪಿ.ಗೆ ಕಾನೂನು ಮತ್ತು ಸಂಸತ್ತಿನಲ್ಲಿ ಮಂಡಿಸಿರುವ ವಿದ್ಯುತ್ ಖಾಸಗೀಕರಣ ತಿದ್ದುಪಡಿ ಕಾಯಿದೆ ವಾಪಸ್ ಪಡೆಯಲು ಒತ್ತಾಯಿಸಿ ರೈತರು ಪತ್ರಿಭಟನೆಗೆ ಮುಂದಾದಾಗ ರೈತರು ದೆಹಲಿಯನ್ನು ಪ್ರವೇಶಿಸಿದಂತೆ ರಸ್ತೆಗೆ ಮುಳ್ಳು ತಂತಿ ಹಾಕಿ, ರೈತರ ಮೇಲೆ ಜಲಪಿಂರಗಿ ಬಳಸಿ ಅತ್ಯಂತ ಅಮಾನುಷ್ಯವಾಗಿ ನಡೆಸಿಕೊಂಡಿದೆ. ಈ ಎಲ್ಲಾ ಘಟನೆಗಳ ಹಿನ್ನೆಲೆಯಲ್ಲಿ ಫೆ.೧೪ ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ರೈತರ ಮಹಾ ಸಮಾವೇಷದಲ್ಲಿ ತೆಗೆದುಕೊಂಡ ನಿರ್ಣಯದಂತೆ ಬಿಜೆಪಿಯನ್ನು ಸೋಲಿಸುವ ನಿರ್ಣಯ ಕೈಗೊಳ್ಳಲಾಗಿದೆ. ಸದರಿ ನಿರ್ಣಯದಂತೆ ಬಿಜೆಪಿ ಪಕ್ಷವನ್ನು ಸೋಲಿಸುವುದಷ್ಟೇ ರೈತರ ಹೋರಾಟಗಾರರ ಗುರಿಯಾಗಿದೆ. ಬಿಜೆಪಿ ಹೊರತುಪಡಿಸಿ ರೈತರು ಯಾವ ಪಕ್ಷಕ್ಕಾದರು ಮತ ಚಲಾಯಿಸಲು ಸ್ವಾತಂತ್ರರು ಎಂದು ಸ್ಪಷ್ಟಪಡಿಸಿದ್ದಾರೆ