Thursday, September 19, 2024
Google search engine
Homeಮುಖಪುಟಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಿದರೆ ದೇಶ ಅಧೋಗತಿಗೆ - ಸಚಿವ ಕೆ.ಎನ್.ರಾಜಣ್ಣ

ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಿದರೆ ದೇಶ ಅಧೋಗತಿಗೆ – ಸಚಿವ ಕೆ.ಎನ್.ರಾಜಣ್ಣ

ಹೋದಲ್ಲಿ, ಬಂದಲ್ಲಿ ನಾ ಕಾವೋಂಗ, ನಾ ಕಾನೆದೂಂಗ ಎಂಬ ಮಾತುಗಳನ್ನು ಹೇಳುತ್ತಿದ್ದ ಪ್ರಧಾನಿ ನರೇಂದ್ರಮೋದಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬುದನ್ನು ಸುಪ್ರಿಂಕೋರ್ಟು ಬಹಿರಂಗಪಡಿಸಿದೆ.ಇಂತಹ ಸೋಗಲಾಡಿ ವ್ಯಕ್ತಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಿದರೆ, ದೇಶದ ಗತಿ ಏನಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡು ಜನರು ಮತ ಚಲಾಯಿಸಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

ತುಮಕೂರಿನ ಹಮ್ಮಿಕೊಂಡಿದ್ದ ಕಾಂಗ್ರೆಸ್ ಮುಖಂಡರ ಪ್ರಚಾರಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಸದನದಲ್ಲಿ ಈ ದೇಶದ ಜನರ ಸಮಸ್ಯೆಗಳ ಕುರಿತು ಮಾತನಾಡಿದ ಉದಾಹರಣೆಯಿಲ್ಲ. ಇಂತಹ ಪ್ರಧಾನಿಯನ್ನು ಮತ್ತೊಮ್ಮೆ ಆಯ್ಕೆ ಮಾಡುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.

ನಮ್ಮದು ಬಡವರು, ದಲಿತರು, ಹಿಂದುಳಿದವರು ಹಾಗು ಅಲ್ಪಸಂಖ್ಯಾತರ ಪರವಾದ ಆಡಳಿತ. ಹಿಂದೆ ಟಿಪ್ಪು ಜಯಂತಿ ಆರಂಭಿಸಿದಾಗ ಅದನ್ನು ವಿರೋಧಿಸಿದ್ದ ಬಿಜೆಪಿ ಏನೆಲ್ಲಾ ಅವಾಂತರ ಸೃಷ್ಟಿಸಿತ್ತು ಎಂಬುದನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು. ಕನ್ನಂಬಾಡಿ ಕಟ್ಟೆಯ ಸೃಷ್ಟಿಕರ್ತ ಟಿಪ್ಪು ಈ ನಾಡಿಗೆ ರೇಷ್ಮೆ ಬೆಳೆ ಪರಿಚಯಿಸಿದರು. ಶೃಂಗೇರಿ ಸೇರಿದಂತೆ ಹಲವು ದೇವಾಲಯಗಳ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಅವುಗಳಿಗೆ ರಕ್ಷಣೆ ಒದಗಿಸಿದವ ಟಿಪ್ಪು. ಅಧಿಕಾರಕೋಸ್ಕರ ಇತಿಹಾಸವನ್ನೇ ಮರೆ ಮಾಚಲು ಹೊರಟವರಿಗೆ ಸರಿಯಾದ ಬುದ್ದಿ ಕಲಿಸಬೇಕಾಗಿದೆ ಎಂದು ತಿಳಿಸಿದರು.

ತುಮಕೂರು ಜಿಲ್ಲಾ ರಾಜಕೀಯ ಇತಿಹಾಸದಲ್ಲಿಯೇ ತುಮಕೂರಿನ ಹೊರಗಿನವರು ಗೆದ್ದ ಇತಿಹಾಸವಿಲ್ಲ. ಎ.ಕೃಷ್ಣಪ್ಪ, ಮಾಜಿ ಪ್ರಧಾನಿ ದೇವೇಗೌಡರನ್ನೇ ಮನೆಗೆ ಕಳುಹಿಸಿದ ಸ್ವಾಭಿಮಾನಿಗಳು ತುಮಕೂರಿನ ಜನ. ಹಾಗಾಗಿ ಶಾಸಕರಾಗಿ, ಸಂಸದರಾಗಿ ಜಿಲ್ಲೆಯ ಸಮಸ್ಯೆಗಳ ಕುರಿತು ಅಧಿವೇಶನಗಳಲ್ಲಿ ಸಮರ್ಥವಾಗಿ ಚರ್ಚೆ ಮಾಡಿ ಜಿಲ್ಲೆಯ ಮಾನ, ಮರ್ಯಾದೆ ಕಾಪಾಡಿದ ಮುದ್ದಹನುಮೇಗೌಡರನ್ನು ಗೆಲ್ಲಿಸಬೇಕು ಎಂದರು.

ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಕೆಲ ಸಣ್ಣಪುಟ್ಟ ಗೊಂದಲಗಳಿAದ ಕಾಂಗ್ರೆಸ್ ಪಕ್ಷ ತೊರೆಯಬೇಕಾಯಿತು. ಇದಕ್ಕಾಗಿ ಪಕ್ಷಕ್ಕೆ ಸೇರ್ಪಡೆಗೊಂಡ ದಿನವೇ ಬಹಿರಂಗ ಕ್ಷಮೆ ಕೇಳಿದ್ದೇನೆ. ನೀವು ಕೊಟ್ಟ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಶೇಕಡ ೯೪ರಷ್ಟು ಲೋಕಸಭೆಯಲ್ಲಿ ಭಾಗವಹಿಸಿದ್ದೇನೆ. ಜಿಲ್ಲೆಯ ನೆಲ, ಜಲ, ಕೊಬ್ಬರಿ, ನೀರಾವರಿ ವಿಚಾರವಾಗಿ ಚರ್ಚೆ ನಡೆಸಿದ್ದೇನೆ. ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಲು ನೀವು ಕೊಟ್ಟ ಅಧಿಕಾರ ಕಾರಣ. ಹಾಗಾಗಿ ಮತ್ತೊಮ್ಮೆ ನನಗೆ ಅವಕಾಶ ಮಾಡಿಕೊಡವಂತೆ ಮನವಿ ಮಾಡಿದರು.

ಗೃಹ ಸಚಿವರ ಡಾ.ಜಿ.ಪರಮೇಶ್ವರ್ ಮಾತನಾಡಿ, ಎಸ್.ಪಿ.ಮದ್ದಹನುಮೇಗೌಡರು, ಎಲ್ಲರ ಕೈಗೆಟುವ ಸಂಸದರಾಗಿದ್ದಾರೆ. ನಮ್ಮದು ಜಾತ್ಯಾತೀತ ತಳಹದಿಯ ಮೇಲೆ ನಿಂತಿರುವ ಪ್ರಜಾಪ್ರಭುತ್ವ ಭಾರತ. ಇದು ಉಳಿಯಬೇಕಾದರೆ ನಾವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಿದೆ. ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ, ಹಿಂದು, ಮುಸ್ಲಿಂ ಹೆಸರಿನಲ್ಲಿ ಕೋಮಗಲಭೆ ಸೃಷ್ಟಿಸುವ ಬಿಜೆಪಿಯಿಂದ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular