ಬೆಂಗಳೂರಿನ ಆರ್ಟ್ ಪೌಂಢೇಶನ್ ನಿಂದ ಮಾರ್ಚ್ 11ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ವರ್ಣ ಆರ್ಟ್ ಗ್ಯಾಲರಿ ಕನ್ನಡ ಭವನದಲ್ಲಿ ಮಣೆಗಾರ ಖ್ಯಾತಿಯ ಕವಿ ತುಂಬಾಡಿ ರಾಮಯ್ಯ ಅವರ ಜಾಲ್ಗಿರಿ ಕಾದಂಬರಿ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ.ಧರಣಿದೇವಿ ಮಾಲಗಿತ್ತು ಕಾದಂಬರಿ ಬಿಡುಗಡೆಗೊಳಿಸುವರು. ಕರ್ನಾಟಕ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಅಧ್ಯಕ್ಷತೆ ವಹಿಸುವರು.
ಪುಸ್ತಕ ಕುರಿತು ಚ.ಹ.ರಘುನಾಥ್ ಮಾತನಾಡುವರು. ಮುಖ್ಯ ಅತಿಥಿಗಳಾಗಿ ಕವಿ ಡಾ.ರವಿಕುಮಾರ್ ನಿಹ, ಕೆಎಎಸ್ ಅಧಿಕಾರಿ ಡಾ.ಶ್ರೀಪಾದ ಭಾಗವಹಿಸುವರು.
ಜಾನಪದ ಗಾಯಕ ಡಾ.ಬಾನಂದೂರು ಕೆಂಪಯ್ಯ, ಇಂದು ಸಂಜೆ ಸಂಪಾದಕಿ ಡಾ. ಪದ್ಮನಾಗರಾಜ್, ಯುವ ಉದ್ಯಮಿ ಟಿ.ಕೆ.ಚಂದ್ರಕಾಂತ್ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಗುವುದು.