ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಣಾಸಿಯಿಂದ, ಗೃಹ ಸಚಿವ ಅಮಿತ್ ಶಾ ಗುಜರಾತ್ ನ ಗಾಂಧೀನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಹೇಮಾಮಾಲಿನಿ, ಸ್ಮೃತಿ ಇರಾನಿ, ರಾಜ್ ನಾಥ್ ಸಿಂಗ್ ಹೆಸರುಗಳ ಮೊದಲ ಪಟ್ಟಿಯಲ್ಲಿದ್ದುಲ ಕೇರಳದ ತಿರುವನಂತಪುರಂನಿಂದ ರಾಜೀವ್ ಚಂದ್ರಶೇಖರ್ ಸ್ಪರ್ಧಿಸಲಿದ್ದಾರೆ.
ಮೊದಲ ಪಟ್ಟಿಯಲ್ಲಿ 34 ಕೇಂದ್ರ ಸಚಿವರಿಗೆ ಟಿಕೆಟ್ ನೀಡಲಾಗಿದೆ. ಇವರಲ್ಲಿ 28 ಮಹಿಳೆಯರಿಗೂ ಟಿಕೆಟ್ ನೀಡಲಾಗಿದೆ.
ಉತ್ತರ ಪ್ರದೇಶದಿಂದ 51, ಪಶ್ಚಿಮ ಬಂಗಾಳದಿಂದ 20, ಮಧ್ಯಪ್ರದೇಶದಿಂದ 24, ಗುಜರಾತ್ ಮತ್ತು ರಾಜಸ್ಥಾನದಿಂದ ತಲಾ 15 ಮಂದಿಗೆ ಟಿಕೆಟ್ ನೀಡಿದೆ. ಮೊದಲ ಪಟ್ಟಿಯಲ್ಲಿ ಕರ್ನಾಟಕದ ಯಾರೊಬ್ಬರ ಹೆಸರೂ ಇಲ್ಲ.
ತೆಲಂಗಾಣದಿಂದ 9, ಅಸ್ಸಾಂನಿಂದ 11, ಜಾರ್ಖಂಡ್ ಮತ್ತು ಛತ್ತೀಸ್ ಗಡದಿಂದ ತಲಾ 11 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಲಾಗಿದೆ. ದೆಹಲಿಯಿಂದ 5, ಜಮ್ಮುಕಾಶ್ಮೀರದಿಂದ 2, ಉತ್ತರಾಖಂಡ್ 3, ಅರುಣಾಚಲ ಪ್ರದೇಶದಿಂದ 2 ಮತ್ತು ಗೋವಾ, ತ್ರಿಪುರ, ಅಂಡಮಾನ್ ಮತ್ತು ನಿಕೋಬಾರ್ ಮತ್ತು ದಮನ್ ಹಾಗೂ ದಿಯೂನಿಂದ ತಲಾ 1 ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.
ಹಿಂದುಳಿದ ವರ್ಗಗಳಿಗೆ -57, ಪರಿಶಿಷ್ಟ ಜಾತಿಗೆ -27, ಪರಿಶಿಷ್ಟ ಪಂಗಡಕ್ಕೆ -18 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ.
ಅರುಣಾಚಲ ಪಶ್ಚಿಮ – ಕಿರಣ್ ರಿಜಿಜು, ಅರುಣಾಚಲ ಪೂರ್ವ – ತಪೀರ್ ಗೋವಾ, ಕರಿಮ್ ಗಂಜ್ – ಕೃಪನಾಥ್ ಮಲ್ಲ, ಸಿಲ್ಚಾರ್ – ಪರಿಮಳ್ ಶುಕ್ಲಬೈದ್ಯ, ಗುವಾಹಟಿ – ಬಿಜುಲಿ ಕಾಲಿತ ಮೇಧಿ ಅವರನ್ನು ಕಣಕ್ಕೆ ಇಳಿಸಲಾಗಿದೆ.