Sunday, September 8, 2024
Google search engine
Homeಮುಖಪುಟತುಮಕೂರು, ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಗಳು ಸ್ಪರ್ಧೆ

ತುಮಕೂರು, ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಗಳು ಸ್ಪರ್ಧೆ

ಹೈದ್ರಾಬಾದಿನಲ್ಲಿ ನಡೆದ ರಾಷ್ಟ್ರೀಯ ಮಂಡಳಿ ಸಭೆಯ ತೀರ್ಮಾನದಂತೆ ಕರ್ನಾಟಕದ ಎಲಾ ಜಿಲ್ಲಾ ಮುಖಂಡರುಗಳ ಅಭಿಪ್ರಾಯಗಳನ್ನು ಆಲಿಸಿ, ತುಮಕೂರು ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಯನ್ನು ಮುಂದಿನ ಲೋಕಸಭಾ ಚುನಾವಣಾ ಕಣಕ್ಕೆ ಇಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಮಂಡಳಿಗೆ ವರದಿ ನೀಡಲಾಗಿದೆ ಎಂದು ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈದ್ರಾಬಾದಿನಲ್ಲಿ ನಡೆದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಕರ್ನಾಟಕದಿಂದ ಸಿಪಿಐ ಸ್ಪರ್ಧೆ ಮಾಡಬಹುದಾದ ಲೋಕಸಭಾ ಕ್ಷೇತ್ರಗಳನ್ನು ಗುರುತಿಸಿ ಹೆಸರಿಸುವಂತೆ ಸೂಚನೆ ನೀಡಿದ್ದರು. ಆದರಂತೆ ರಾಜ್ಯದಲ್ಲಿ ಎಲ್ಲಾ ಜಿಲ್ಲಾ ಮುಖಂಡ ಅಭಿಪ್ರಾಯ ಸಂಗ್ರಹಿಸಿದ್ದು, ತುಮಕೂರು ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳನ್ನು ಆಯ್ಕೆ ಮಾಡಲಾಗಿದೆ.ಈ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದು ಬಿಡುವುದು ರಾಷ್ಟ್ರೀಯ ಮಂಡಳಿಗೆ ಬಿಟ್ಟ ತೀರ್ಮಾನ ಎಂದರು.

ಕಳೆದ 10 ವರ್ಷಗಳಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸದರೆ ಧಾರ್ಮಿಕ ಮತ್ತು ಭಾವನಾತ್ಮಕ ವಿಚಾರಗಳ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುತ್ತಿರುವ ಒಕ್ಕೂಟ ಸರಕಾರದ ಕ್ರಮವನ್ನು ಖಂಡಿಸಿ, ಬಿಜೆಪಿ ಸೊಲಿಸಿ, ದೇಶ ಉಳಿಸಿ ಎಂಬ ಆಂದೋಲವನ್ನು ಮಾರ್ಚ್ 3 ರಿಂದ ರಾಜ್ಯದಾಧ್ಯಂತ ಆಯೋಜಿಸಿದ್ದು, ರಾಜ್ಯದ ಮೈಸೂರು, ಕಲ್ಬುರ್ಗಿ, ಬಳ್ಳಾರಿ, ಮಂಗಳೂರು, ಹಾವೇರಿ ಮತ್ತು ದಾವಣಗೆರೆಯಲ್ಲಿ ಬೃಹತ್ ಕಾರ್ಮಿಕರು, ರೈತರ ಸಮಾವೇಶ ಆಯೋಜಿಸಲಾಗಿದೆ. ಮಾರ್ಚ್ 3ರಂದು ಮೊದಲ ಕಾರ್ಯಕ್ರಮ ದಾವಣಗೆರೆಯಲ್ಲಿ ಆಯೋಜಿಸಲಾಗಿದೆ. ಈ ಆಂದೋಲನಕ್ಕೆ ಜಾತ್ಯಾತೀತ ಮನಸ್ಸುಗಳೆಲ್ಲವನ್ನು ಆಹ್ವಾನಿಸಲಾಗಿದೆ ಎಂದು ಸಾತಿ ಸುಂದರೇಶ್ ತಿಳಿಸಿದರು.

ಸಿಪಿಐ ರಾಷ್ಟ್ರೀಯ ಮಂಡಳಿ ಕಾರ್ಯದರ್ಶಿ ಪಿ.ವಿ.ಲೋಕೇಶ್ ಮಾತನಾಡಿ, ಚುನಾವಣೆ ಬಾಂಡ್ ಎಂಬುದು ಎಂತಹ ಘನಘೋರ ಬ್ರಷ್ಟಾಚಾರ ಎಂಬುದನ್ನು ಇತ್ತೀಚಿನ ಸುಪ್ರಿಂಕೋರ್ಟ ತೀರ್ಪು ಸ್ಪಷ್ಟಪಡಿಸಿದೆ. 2009ರಲ್ಲಿ ಯುಪಿಎ-2 ಸರ್ಕಾರವಿದ್ದಾಗ ಇಂದಜಿತ್ ಗುಪ್ತ ಅವರ ಆಯೋಗ ಚುನಾವಣಾ ಪಡೆಯುವುದು ಬೇಡ ಎಂಬ ವರದಿಯನ್ನು ಚುನಾವಣಾ ಸುಧಾರಣಾ ವರದಿಯಲ್ಲಿ ನೀಡಿದ್ದರು. ಅದರ ಮುಂದುವರೆದ ಭಾಗ ಸುಪ್ರಿಂಕೋರ್ಟು ತೀರ್ಪು. ಚುನಾವಣಾ ಆಯೋಗ ನಿಗದಿತ ಅವಧಿಯೊಳಗೆ ಚುನಾವಣಾ ಬಾಂಡ್‌ಗಳ ಬಗ್ಗೆ ಮಾಹಿತಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಹಾಕಿದರೆ ಜನತೆ ನಿಜವಾದ ಭ್ರಷ್ಟಾಚಾರಿ ಯಾರು ?, ದೇಶದ ಸಂಪತ್ತು ಯಾರ ಕೈಗೆ ಸೇರುತ್ತಿದೆ ಎಂಬ ಸ್ಪಷ್ಟ ಮಾಹಿತಿ ರವಾನೆಯಾಗಲಿದೆ ಎಂದರು.

ಮಾಧ್ಯಮಗೋಷ್ಟಿಯಲ್ಲಿ ರಾಜ್ಯ ಮಂಡಳಿ ಅಮ್ಜಾದ್ ಖಾನ್, ಕೆ.ಜೋತಿ, ಜಿಲ್ಲಾಧ್ಯಕ್ಷ ಗಿರೀಶ್, ಖಜಾಂಚಿ ಅಶ್ವಥನಾರಾಯಣ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular