ಜಾತಿ, ಧರ್ಮದ ಹೆಸರಿನಲ್ಲಿ ಹಿಂಸೆ ಕ್ರೌರ್ಯಗಳು ನಡೆಯುತ್ತಿವೆ. ಇದನ್ನು ತಡೆಯಲು ಪ್ರೀತಿ ಸಾಮರಸ್ಯದಿಂದ ಸಾಧ್ಯ ಎಂದು ಜನಪರ ಚಿಂತಕ ಕೆ.ದೊರೈರಾಜ್ ಹೇಳಿದರು.
ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ಸೌರ್ಹಾದತೆಗಾಗಿ ಮಾನವ ಸರಪಳಿ ಕಾರ್ಯಕ್ರಮ ಭಾಗವಹಿಸಿ ಅವರು ಮಾತನಾಡಿ, ಜನವರಿ 30, 1948ರಲ್ಲಿ ಮತಾಂಧನ ಗುಂಡಿಗೆ ಗಾಂಧೀಜಿ ಬಲಿಯಾದರು. ಈ ದಿನವನ್ನು ಸರ್ವೋದಯ ದಿನವೆಂದು ಕರೆಯುತ್ತೇವೆ ಎಂದರು.
ಇಡೀ ಜಗತ್ತ ನಿಂತಿರುವುದು ಪ್ರೀತಿಯ ಮೇಲೆ. ಗಾಂಧಿಯವರು ಪ್ರತಿಪಾದಿಸಿದ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಗಾಂಧೀಜಿ ಪ್ರತಿಪಾಧಿಸಿದ ಸತ್ಯ, ಅಹಿಂಸೆ ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಸಾಮರಸ್ಯದ ಸಮಾಜವನ್ನು ಕಟ್ಟಬೇಕು ಎಂದು ಸಲಹೆ ನೀಡಿದರು.
ಯಾರು ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುತ್ತಾರೋ ಅಂಥವರಿಗೆ ಬೆಂಬಲ ನೀಡಬಾರದು. ಸಮಾಜದ ಸ್ವಾಸ್ಥ್ಯವನ್ನು ಆಳುವ ಮಾಡುವವರಿಗೆ ಬೆಂಬಲ ನೀಡಿದರೆ ಸಮಾಜದಲ್ಲಿ ಅಶಾಂತಿ ತಲೆದೋರುತ್ತದೆ. ಹೀಗಾಗಿ ಪ್ರೀತಿ ಸಹನೆ, ಸೌಹಾರ್ದತೆಯನ್ನು ಬೆಂಬಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿಂತಕ ಸಿ.ಯತಿರಾಜು, ಜನಸಂಗ್ರಾಮ ಪರಿಷತ್ ಜಿಲ್ಲಾ ಸಂಚಾಲಕ ಪಂಡಿತ್ ಜವಾಹರ್, ತಾಜುದ್ದೀನ್, ಕವಯತ್ರಿ ಶೈಲಾ ನಾಗರಾಜ್ ಇತರರು ಇದ್ದರು.
ಪಾವಗಡದಲ್ಲಿ ಸೌಹಾರ್ದತಗಾಗಿ ಮಾನವ ಸರಪಳಿಯನ್ನು ಶನಿದೇವರ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಎಫ್.ಐ ಜಿಲ್ಲಾಧ್ಯಕ್ಷ ಈ.ಶಿವಣ್ಣ, ಬಹುತ್ವದ ಭಾರತ ನಮ್ಮದು. ಹಾಗಾಗಿ ಬುದ್ಧ ಬಸವರ, ಅಂಬೇಡ್ಕರ್, ಕುವೆಂಪು ವಿಚಾರಗಳನ್ನು ಯುವಪೀಳಿಗೆಗೆ ತಲುಪಿಸಬೇಕಾಗಿದೆ ಎಂದು ತಿಳಿಸಿದರು.
ಧರ್ಮಾಧಾರಿತ ರಾಜಕಾರಣವುದ ಧೇಶಕ್ಕೆ ಅಪಾಯಕಾರಿಯಾಗಿದ್ದು ದೇಶವನ್ನು ಮುನ್ನಡೆಸಲು ಐಕ್ಯತೆಯು ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲಾ ಜಾತಿ, ಧರ್ಮಗಳನ್ನು ಸಮಾನವಾಗಿ ಕಂಡಾಗ ಮಾತ್ರ ದೇಶವನ್ನು ಮುನ್ನಡೆಸಲು ಸಾಧ್ಯ. ಗಾಂಧೀಯನ್ನು ಕೊಂದ ಕೋಮುವಾದಿ ಶಕ್ತಿಗಳು ಇಂದು ದೇಶವ್ಯಾಪಿ ದೇಶಭಕ್ತರಂತೆ ನಟಿಸುತ್ತಿದ್ದಾರೆ. ಇಂಹತ ಕೋಮುವಾದಿ ಶಕ್ತಿಗಳನ್ನು ಅರ್ಥ ಮಾಡಿಕೊಂಡು ಸಂವಿಧಾನ ನೀಡಿರುವ ಸಮಾನತೆ ಆಧಾರದಲ್ಲಿ ಎಲ್ಲರೂ ಸಹಬಾಳ್ವೆಯಿಂದ ಬದುಕಬೇಕಾಗಿದೆ ಎಂದು ಪ್ರತಿಪಾದಿಸಿದರು.
ಜಾತಿ ಧರ್ಮ ಅವಶ್ಯಕತೆ ಇಲ್ಲದಿದ್ದರೂ ಸಹ ಅದನ್ನು ಮುನ್ನೆಲೆಗೆ ತಂದು ಸಾಮಾಜಿಕ ಸಂಘರ್ಷವನ್ನು ಉಂಟು ಮಾಡುತ್ತಿದ್ದಾರೆ. ಆದ್ದರಿಂದ ಜನರು ಅರ್ಥಮಾಡಿಕೊಂಡು ಸಮಾನತೆಯಿಂದ ಬದುಕಬೇಕೆಂದು ಹೇಳಿದರು.
ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಸಂಚಾಲಕಿ ಶಿವಗಂಗಮ್ಮ ಮಾತನಾಡಿ, ಗಾಂಧೀ ಹುತಾತ್ಮ ದಿನವಾದ ಇಂದು ರಾಜ್ಯವ್ಯಾಪಿ ಪ್ರಗತಿಪರ ಸಂಘಟನೆಗಳಿಂದ ಸಮಾನತೆಗಾಗಿ ಸೌಹಾರ್ದ ಮಾನವ ಸರಪಳಿ ನಿರ್ಮಿಸಿರುವುದು ಅತ್ಯಂತ ಸಂತೋಷಕರವಾಗಿದೆ ಎಂದರು.
ಸತ್ಯಸಾಯಿ ಜಿಲ್ಲೆಯ ಎಸ್.ಎಫ್ಐ ಜಿಲ್ಲಾಧ್ಯಕ್ಷ ವೀರೇಶ್, ರಾಮಾಂಜಿನಪ್ಪ, ಕೆಂಚಮ್ಮ, ವಿ.ಎಚ್.ರಾಮಾಂಜಿ, ಮದಲೇಟಪ್ಪ, ಮಮತ, ದುಗ್ಗಪ್ಪ, ವೆಂಕಟೇಶ್, ಈಶ್ವರಪ್ಪ, ಭೂಲಕ್ಷ್ಮಿ ಸಂಜೀವಮ್ಮ ಇತರರು ಇದ್ದರು.