Thursday, May 30, 2024
Google search engine
Homeಮುಖಪುಟಬೆಳಕಿನ ಕಿಡಿ ಆರದಿರಲಿ

ಬೆಳಕಿನ ಕಿಡಿ ಆರದಿರಲಿ

ನಾವೆಲ್ಲ ವಿದ್ಯಾರ್ಥಿಗಳಾಗಿದ್ದಾಗ ದಸಂಸ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಆಗೆಲ್ಲಾ ಅರಿವನ್ನು, ಎಚ್ಚರವನ್ನು ನೀಡುವ ತರಬೇತಿ ಕೇಂದ್ರಗಳಾಗಿ ಈ ದಸಂಸ ಕಾರ್ಯನಿರ್ವಹಿಸುತ್ತಿತ್ತು. ನಾಡಿನಾದ್ಯಂತ ನಡೆಯುತ್ತಿದ್ದ ಶಿಬಿರಗಳು, ಕಾರ್ಯಾಗಾರಗಳು ಎಲ್ಲಾ ಸಮುದಾಯದವರನ್ನು ಒಳಗೊಂಡು ಸಾಮಾಜಿಕ ನ್ಯಾಯ, ಸಮಾನತಾ ತತ್ವವನ್ನು, ತಾಯ್ತನವನ್ನು ಈ ಶಿಬಿರಗಳು ಉಣಿಸುತ್ತಿದ್ದವು.

ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ದಸಂಸದ ಸೇನಾಳುಗಳಾಗಿ ತೊಡಗಿಸಿಕೊಂಡಿದ್ದರು. ನಾಡಿನಲ್ಲಿ ಯಾವುದೇ ಮೂಲೆಯಲ್ಲಿ ದೌರ್ಜನ್ಯಗಳಾದರೂ ಅಲ್ಲಿನ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತಿದ್ದವರು ದಸಂಸದವರೇ ಆಗಿರುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು. ಮಂಡಲ ವರದಿಗಾಗಲಿ, ಸಾಚಾರ್ ವರದಿಗಾಗಲಿ, ಕಂಬಾಲಪಳ್ಳಿ ಹೋರಾಟಕ್ಕಾಗಲಿ ಯಾವುದೇ ಸಮುದಾಯಕ್ಕೆ ಅನ್ಯಾಯವಾದರೂ ಅಲ್ಲಿ ಪ್ರತಿಭಟಿಸುತ್ತಿದ್ದವರು ದಸಂಸದ ತರಬೇತಿದಾರರೇ ಆಗಿರುತ್ತಿದ್ದರು. ಧರ್ಮ, ದೇವರು, ದೇವಸ್ಥಾನ ಮುಂತಾದ ಧಾರ್ಮಿಕ ಕರ್ಮಠಕ್ಕೆ ದಸಂಸ ಬಿತ್ತಿದ ವೈಚಾರಿಕತೆಯಿಂದ ಎದುರುಗೊಳ್ಳುತ್ತಿದ್ದರು. ಆಗ ಹಾಸ್ಟೆಲ್ ಗಳು ಇಂಥ ವೈಚಾರಿಕ, ಮಾನವೀಯ ನೆಲೆಯನ್ನು ಬಿತ್ತುವ ನೆಲಗಳಾಗಿದ್ದವು.

ದಸಂಸ ಕಳೆಗುಂದಿದೆ. ವೈಚಾರಿಕ ಕಿಡಿಗಳಾಗಬೇಕಾಗಿದ್ದ ಹೊಸ ತಲೆಮಾರು ಧಾರ್ಮಿಕ ಕಂದಕಕ್ಕೆ ಬಿದ್ದು ಬಣ್ಣದೊಳಗೆ ಮುಳುಗೆದ್ದು, ಕೂಗುಮಾರಿಯಂತೆ ಕೂಗುತ್ತಾ ಸಾಗುತ್ತಿರುವುದನ್ನು ನೋಡಿದರೆ ಆತಂಕವಾಗುತ್ತದೆ. ದಸಂಸ ಮತ್ತೆ ಪುಟಿದೇಳಬೇಕು ಎಂಬುದು ತೀವ್ರವಾಗಿ ಬಲಗೊಳ್ಳುತ್ತಿದೆ. ಆದರೆ ಕಾಲದ ನಡೆಯೇ ಭಿನ್ನವಾಗಿದೆ.

ಹೊಸ ಯುವಜನಾಂಗವನ್ನು ಇಂಥವುಗಳಿಂದ ಬಿಡಿಸಿ ವೈಚಾರಿಕವಾಗಿ, ಸಾಂಸ್ಕೃತಿಕವಾಗಿ ಈ ಹೊತ್ತಿಗೆ ತರಬೇತಿಗೊಳಿಸುವುದು ಹೇಗೆ ಎಂಬ ಪ್ರಶ್ನೆಗಳು ಪದೆ ಪದೆ ನಮ್ಮ ಮುಂದೆ ನಿಲ್ಲುತ್ತಿವೆ.

ಇಂಥ ಹೊತ್ತಿನಲ್ಲಿ ಅಲ್ಲೊಂದು ಇಲ್ಲೊಂದು ದಸಂಸ ದ ಶಿಬಿರಗಳು ನಡೆಯುತ್ತಿರುವುದು ಆತಂಕವನ್ನು ತಗ್ಗಿಸಿವೆ.

ಶಿರಾದ ದಸಂಸ ನಾಯಕರು, ಗೆಳೆಯರಾದ ಟೈರ್ ರಂಗನಾಥ್ ಅವರು ಇಂದಿನಿಂದ ಮೂರು ದಿನಗಳ ಕಾಲ ಶಿಬಿರವನ್ನು ದ್ವಾರನಕುಂಟೆಯಲ್ಲಿ ಆಯೋಜಿಸಿದ್ದಾರೆ.. ಈ ಶಿಬಿರದಲ್ಲಿ ನಾನು ಭಾಗವಹಿಸಿ ಒಂದಷ್ಟು ಸಂವಾದಿಸುವೆ.. ಬನ್ನಿ ಭಾಗವಹಿಸಿ ಗೆಳೆಯರೇ.. ಇಂಥ ಶಿಬಿರಗಳು ಮತ್ತೆ ಮತ್ತೆ ನಡೆಯುತ್ತಿರಲಿ, ಬೆಳಕಿನ ಕಿಡಿ ಆರದಿರಲಿ

ಲೇಖಕರು:ಡಾ.ರವಿಕುಮಾರ್ ನೀಹ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments