Thursday, November 21, 2024
Google search engine
Homeಮುಖಪುಟಬಸವ ಪ್ರಶಸ್ತಿ ಸೇರಿದಂತೆ ರಾಷ್ಟ್ರೀಯ, ರಾಜ್ಯ ಪ್ರಶಸ್ತಿ ಘೋಷಿಸಿದ ಕರ್ನಾಟಕ ಸರ್ಕಾರ

ಬಸವ ಪ್ರಶಸ್ತಿ ಸೇರಿದಂತೆ ರಾಷ್ಟ್ರೀಯ, ರಾಜ್ಯ ಪ್ರಶಸ್ತಿ ಘೋಷಿಸಿದ ಕರ್ನಾಟಕ ಸರ್ಕಾರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2022-23 ಮತ್ತು 2023-24ನೇ ಸಾಲಿನ ರಾಷ್ಷ್ಟೀಯ ಮತ್ತು ರಾಜ್ಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

ಚಿಂತಕ ಆನಂದ್ ತೇಲ್ತುಂಬ್ಡೆ, ವಿಮರ್ಶಕ ಡಾ.ಕೆ.ಮರುಳಸಿದ್ದಪ್ಪ, ರಂಗಕರ್ಮಿ ಸಿ.ಬಸವಲಿಂಗಯ್ಯ, ಸಾಹಿತಿ ನಾ.ಡಿಸೋಜ ತುಮಕೂರಿನ ರಂಗಭೂಮಿ ಕಲಾವಿದ ಚನ್ನಬಸವಯ್ಯ ಗುಬ್ಬಿ ಸೇರಿದಂತೆ ಹಲವರಿಗೆ ಪ್ರಶಸ್ತಿ ಲಭಿಸಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಶಿವರಾಜ ತಂಗಡಗಿ, ಬಸವ ರಾಷ್ಟ್ರೀಯ ಪ್ರಶಸ್ತಿ, ಮಹಾವೀರ ಶಾಂತಿ ಪ್ರಶಸ್ತಿ, ಪಂಪ ಪ್ರಶಸ್ತಿಗಳು ಸೇರಿ ಇತರೆ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ ಎಂದು ಹೇಳಿದರು.

ಪ್ರಶಸ್ತಿ ಪಡೆದವರ ಪಟ್ಟಿ ಈ ಕೆಳಗಿನಂತಿದೆ.

ಚಿಂತಕ ಆನಂದ್ ತೇಲ್ತುಂಬ್ಡೆ ಮತ್ತು ಡಾ.ಎನ್.ಜಿ. ಮಹದೇವಪ್ಪ ಅವರಿಗೆ ಬಸವ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ಧಾರವಾಡದ ಜಿನದತ್ತ ದೇಸಾಯಿ ಹಾಗೂ ಗುಜರಾತ್ ನ ಗಾಂಧೀ ಸೇವಾಶ್ರಮ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕೊಳಲು ನುಡಿಸುವ ನಿತ್ಯಾನಂದ ಹಳದಿಪುರ, ಕೋಲಾರದ ನಾದಸ್ವರ ಕಲಾವಿದ ಶ್ರೀರಾಮುಲು ಅವರಿಗೆ ಟಿ.ಚೌಡಯ್ಯ ಪ್ರಶಸ್ತಿ ಲಭಿಸಿದೆ.

ಹಿಂದೂಸ್ತಾನಿ ಗಾಯಕ ಧಾರವಾಡದ ಸೋಮನಾಥ ಮರಡೂರ ಮತ್ತು ಕರ್ನಾಟಕ ಸಂಗೀತದ ಮೈಸೂರಿನ ಡಾ.ನಾಗಮಣಿ ಶ್ರೀನಾಥ್ ಅವರು ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮಹಾರಾಷ್ಟ್ರದ ಡಾ.ಕೆ.ವಿಶ್ವನಾಥ್ ಕಾರ್ನಾಡ್, ಬೆಳಗಾವಿಯ ಚಂದ್ರಕಾಂತ ಪೋಕಳೆ ಅವರಿಗೆ ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನ ಸಿ.ಬಸವಲಿಂಗಯ್ಯ, ಮಂಗಳೂರಿನ ಸದಾನಂದ ಸುವರ್ಣ ಅವರಿಗೆ ಬಿ.ವಿ.ಕಾರಂತ ಪ್ರಶಸ್ತಿ ಲಭಿಸಿದೆ.

ತುಮಕೂರಿನ ಚನ್ನಬಸವಯ್ಯ ಗುಬ್ಬಿ, ವಿಜಯಪುರದ ಎಲ್.ಬಿ.ಶೇಖ್ ಮಾಸ್ತರ ಅವರು ಡಾ.ಗುಬ್ಬಿ ವೀರಣ್ಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹಂಪಿ ಡಾ.ಮೊಗಳ್ಳಿ ಗಣೇಶ್, ಉತ್ತಮ ಕಾಂಬ್ಳೆ, ದಾವಣಗೆರೆಯ ಬಿ.ಟಿ.ಜಾಹ್ನವಿ ಅವರಿಗೆ ಡಾ.ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನ ಕೆ.ಮರುಳಸಿದ್ದಪ್ಪ, ಬೆಳಗಾವಿಯ ಹಸನ್ ನಯೀಂ ಸುರಕೊಡ, ಕೋಲಾರದ ಕೆ.ರಾಮಯ್ಯ, ಬಳ್ಳಾರಿಯ ವೀರಸಂಗಯ್ಯ ಅವರು ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಧಾರವಾಡದ ಜಗನ್ಮಾತೆ ಅಕ್ಕಮಹಾದೇವಿ ಆಶ್ರಮದ ಟ್ರಸ್ಟ್, ಮಂಡ್ಯದ ಡಾ. ಆರ್.ಸುನಂದಮ್ಮ, ಕಲಬುರಗಿಯ ಮೀನಾಕ್ಷಿ ಬಾಳಿ, ಬೆಂಗಳೂರಿನ ಡಾ.ವಸುಂಧರಾ ಭೂಪತಿ ಅವರಿಗೆ ಅಕ್ಕಮಹಾದೇವಿ ಪ್ರಶಸ್ತಿ ಲಭಿಸಿದೆ.

ಹಾವೇಋಇಯ ಡಾ.ಲಿಂಗದಹಳ್ಳಿ ಹಾಲಪ್ಪ, ಮಂಗಳೂರಿನ ಡಾ.ಬಿ.ಶೆಟ್ಟಿ ಅವರು ಕನಕಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಗೆ ಮೈಸೂರಿನ ಜಿ.ಎಲ್.ಎನ್.ಸಿಂಹ ಮತ್ತು ಕಲಬುರಗಿಯ ಬಸವರಾಜ್ ಎಲ್.ಜಾನೆ ಭಾಜನರಾಗಿದ್ದಾರೆ.

ಜನಪದಶ್ರೀ ಪ್ರಶಸ್ತಿಗೆ-ವಾದನ- ದಕ್ಷಿಣ ಕನ್ನಡದ ಅರುವ ಕೊರಗಪ್ಪ ಶೆಟ್ಟಿ, ಚಿಕ್ಕಮಗಳೂರಿನ ಜಿ.ಪಿ.ಜಗದೀಶ್ ಅವರು ಆಯ್ಕೆಯಾಗಿದ್ದಾರೆ.

ಜನಪದಶ್ರೀ ಪ್ರಶಸ್ತಿಗೆ-ಗಾಯನ- ಬೀದರ್ ನ ಕಲ್ಲಪ್ಪ ಮುರ್ಜಾಪುರ, ಚಿತ್ರದುರ್ಗದ ಹಲಗೆ ದುರ್ಗಮ್ಮ ಆಯ್ಕೆಯಾಗಿದ್ದಾರೆ.

ಮೈಸೂರಿನ ಎಂ.ಕೆ.ಸರಸ್ವತಿ, ಧಾರವಾಡದ ಅಕ್ಕಮಹಾದೇವಿ ಮಠ ನಿಜಗುಣ-ಪುರಂದರ ಪ್ರಶಸ್ತಿಗೆ ಆಯ್ಕೆಯಾಗಿದೆ.

ಗದುಗಿನ ಸಿದ್ದೇಶ್ವರ ಶಾಸ್ತ್ರಿ, ಮೈಸೂರಿನ ಕೃಷ್ಣಗಿರಿ ರಾಮಚಂದ್ರ ಅವರು ಕುಮಾರವ್ಯಾಸ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಚಿತ್ರಾ ವೇಣುಗೋಪಾಲ್, ಬೆಂಗಳೂರಿನ ರೇವತಿ ನರಸಿಂಹನ್ ಅವರಿಗೆ ಶಾಂತಲ ನಾಟ್ಯ ಪ್ರಶಸ್ತಿ ಲಭಿಸಿದೆ.

ಸಂತ ಶಿಶುನಾಳ ಷರೀಫಾ ಪ್ರಶಸ್ತಿಗೆ ಬೆಂಗಳೂರಿನ ಕಸ್ತೂರಿ ರಂಗನ್, ಶಿವಮೊಗ್ಗದ ಎನ್.ಬಿ. ಶಿವಲಿಂಗಪ್ಪ ಅವರು ಆಯ್ಕೆಯಾಗಿದ್ದಾರೆ.

ಪಂಪ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಶಿವಮೊಗ್ಗದ ನಾ.ಡಿಸೊಜಾ ಅವರಿಗೆ ನೀಡಲಾಗಿದೆ.

ಸಿಎಂ ಅಭಿನಂದನೆ:

ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿರುವ ಆನಂದ್ ತೆಲ್ತುಂಬಡೆ, ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ಭಾಜನರಾಗಿರುವ ಕೆ. ಮರುಳಸಿದ್ದಪ್ಪ, ಪಂಪ ಪ್ರಶಸ್ತಿಗೆ ಭಾಜನರಾಗಿರುವ ನಾ. ಡಿಸೋಜಾ, ಬಿ.ವಿ ಕಾರಂತ ಪ್ರಶಸ್ತಿಗೆ ಭಾಜನರಾಗಿರುವ ಸಿ. ಬಸವಲಿಂಗಯ್ಯ ಮತ್ತು ಸದಾನಂದ ಸುವರ್ಣ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಭಾಜನರಾಗಿರುವ ಬಾನು ಮುಷ್ತಾಕ್, ಅಕ್ಕಮಹಾದೇವಿ ಪ್ರಶಸ್ತಿಗೆ ಭಾಜನರಾಗಿರುವ ಮೀನಾಕ್ಷಿ ಬಾಳಿ ಹಾಗೂ ಡಾ. ವಸುಂಧರಾ ಭೂಪತಿ ಅವರು ಸೇರಿದಂತೆ ಎಲ್ಲಾ ಪ್ರಶಸ್ತಿ ವಿಜೇತ ಗಣ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆಗಳನ್ನು ತಿಳಿಸಿದ್ದಾರೆ.

ತಮ್ಮ ಸಾಧನೆ ಮತ್ತು ಸೇವಾ ಮನೋಭಾವ ಸಮಾಜಕ್ಕೆ ಮಾದರಿಯಾಗಲಿ ಎಂದು ಆಶಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular