ಸೇವೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಧರಣಿ ಮೂರನೇ ದಿನವೂ ಮುಂದುವರೆಯಿತು. ಬೇಡಿಕೆಗಳನ್ನು ಈಡೇರಿಸದಿದ್ದರೆ ಧರಣಿಯನ್ನು ಮುಂದುವರೆಸಲಾಗುವುದು. ಇದು ಮಾಡು ಇಲ್ಲವೆ ಮಡಿ ಹೋರಾಟ ಆಗಿದೆ ಎಂದು ಅತಿಥಿ ಉಪನ್ಯಾಸಕರು ತಿಳಿಸಿದ್ದಾರೆ.
ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ವಿದ್ಯಾರ್ಥಿಗಳು ನಮ್ಮ ಪ್ರತಿಭಟನಾ ಧರಣಿಗೆ ಬೆಂಬಲ ನೀಡಲಿದ್ದು ಧರಣಿ ತೀವ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅತಿಥಿ ಉಪನ್ಯಾಸಕರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಡಾ.ಧರ್ಮವೀರ ಮಾತನಾಡಿ, ಅರೆಕಾಲಿಕ, ಅತಿಥಿ, ಬಾಡಿಗೆ ಮುಂತಾದ ಅವೈಜ್ಙಾನಿಕ ಹೆಸರಿಗಳಿಂದ ನಮ್ಮನ್ನು ಶೋಷಣೆ ಮಾಡಲಾಗುತ್ತಿದೆ. ಎರಡು ದಶಗಕಳಿಂದಲೂ ನಮ್ಮನ್ನು ಶೋಷಣೆಮಾಡುತ್ತ ಬಂದಿರುವ ರಾಜ್ಯ ಸರ್ಕಾರಗಳು ಇನ್ನಾದರು ನಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಇಡೇರಿಸಬೇಕೆಂದು ಆಗ್ರಹಿಸಿದರು.
ಅತಿಥಿ ಉಪನ್ಯಾಸಕ ಶಶಿಧರ್ ಮಾತನಾಡಿ ಪ್ರತಿ ಬಾರಿ ಅತಿಥಿ ಉಪನ್ಯಾಸಕರ ಪ್ರತಿಭಟನೆಯನ್ನು ಸರ್ಕಾರಗಳು ಹತ್ತಿಕ್ಕುತ್ತಿವೆ. ಹೀಗಾಗಿ ಕಾಯಂಗೊಳಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ವಿದ್ಯಾರ್ಹತೆ, ಅನುಭವ ಇದ್ದರು ನಮ್ಮನ್ನು ಕಾಯಾಮಾತಿ ಮಾಡದೆ ಸರ್ಕಾಗಳು ಮಿನಾಮೇಷ ಎಣೆಸುತ್ತ ನಮ್ಮನ್ನು ಕಡೆಗಣೆಸುತ್ತಿವೆ ಎಂದು ಖಂಡಿಸಿದರು.
ಅತಿಥಿ ಉಪನ್ಯಾಸಕ ಡಾ.ಮಲ್ಲಕಾರ್ಜುನ್ ಮಾತನಾಡಿ, ಅತಿಥಿ ಉಪನ್ಯಾಸಕರು ಸರ್ಕಾರದ ಗಮನ ಸೇಳೆಯುವಂತೆ ಮಾಡಬೇಕು ಮತ್ತು ಲಿಖಿತ ಬರವಸೆ ನೀಡುವವರೆಗು ನಮ್ಮ ಅನಿರ್ಧಾಷ್ಟಾವಧಿ ಧರಣಿ ಮುಂದುವರೆಯುತ್ತದೆ ಎಂದರು.
ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಕರುಗಳಾದ ಡಾ,ಶಿವಣ್ಣ ತಿಮ್ಮಲಾಪುರ, ಸುರೇಶ್.ಟಿ, ರಾಮಲಕ್ಷ್ಮಿ, ಡಾ.ಸವಿತ, ನವೀನ್ ಕುಮಾರ್, ಶಂಕರಪ್ಪ ಹಾರೋಗೆರೆ, ಭರತ್, ರಘು. ಸಿ.ಎಸ್,ನಾಗೇಂದ್ರಕುಮಾರ್, ಡಾ.ಹನುಮಂತರಾಯಪ್ಪ,ವಿಶ್ವನಾಥ್, ಹರ್ಷ, ಕಾಂತರಾಜು, ಮನು, ಚೇತನ್, ಶಶಿ, ಶುಭ.ಎಸ್.ಆರ್, ಶಂಕರ್. ಲೋಕೇಶ್, ಕೆಂಚರಾಯಪ್ಪ ಇತರರು ಇದ್ದರು.