Friday, November 22, 2024
Google search engine
Homeಮುಖಪುಟಆಹಾರ ತಜ್ಞ ಕೆ.ಸಿ.ರಘು ನಿಧನ - ಗಣ್ಯರ ಸಂತಾಪ

ಆಹಾರ ತಜ್ಞ ಕೆ.ಸಿ.ರಘು ನಿಧನ – ಗಣ್ಯರ ಸಂತಾಪ

ಅನಾರೋಗ್ಯದಿಂದ ಬಳಲುತ್ತಿದ್ದ ನಾಡಿನ ಹೆಸರಾಂತ ಆಹಾರ ತಜ್ಞ ಕೆ.ಸಿ.ರಘು ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು.

ಶ್ವಾಸಕೋಶದ ಕ್ಯಾನ್ಸರ್ ಗೆ ತುತ್ತಾಗಿದ್ದ ಕೆ.ಸಿ.ರಘು ಇಂದು ಬೆಳಗ್ಗೆ ಬೆಂಗಳೂರಿನ ದಾಸರಹಳ್ಳಿಯ ಅಮೃತ ನಗರದಲ್ಲಿರುವ ನಿವಾಸದಲ್ಲಿ ಬೆಳಗ್ಗೆ 7.30ರ ಸುಮಾರಿಗೆ ಸಾವನ್ನಪ್ಪಿದ್ದಾರೆ.

ಪ್ರಿಸ್ವೀನ್ ಆರ್ಗ್ಯಾನಿಕ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದ ಅವರು, ಶಿಶುಗಳಲ್ಲಿ ಕಂಡುಬರುವ ಮಾರಕ ಕಾಯಿಲೆಗಳಿಗೆ ಪೌಷ್ಟಿಕಾಂಶದ ಪರಿಹಾರವರನ್ನ ಸಂಶೋಧನೆಯಿಂದ ಕಂಡುಹಿಡಿದು ದೇಶಾದ್ಯಂತ ಹಾಗೂ ವಿದೇಶಕ್ಕೂ ಒದಗಿಸುತ್ತಿದ್ದರು.

ನಿರರ್ಗಳವಾಗಿ ಮಾತನಾಡುತ್ತಿದ್ದ ಕೆ.ಸಿ.ರಘು ಆಹಾರ ಆರೋಗ್ಯದ ವಿಚಾರದಲ್ಲಿ ಅದ್ಬುತ ಜ್ಞಾನ ಹೊಂದಿದ್ದರು. ಕೆ.ಸಿ.ರಘು ಹಲವು ವರ್ಷಗಳ ಕಾಲ ಪುಡ್ ಅಂಡ್ ನ್ಯೂಟ್ರೀಷನ್ ವರ್ಲ್ಡ್ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಹಲವು ದಿನಪತ್ರಿಕೆಗಳಲ್ಲಿ ಆರೋಗ್ಯದ ಕುರಿತು ಲೇಖನಗಳನ್ನು ಬರೆದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪೇಸ್ ಬುಕ್ ಖಾತೆಯಲ್ಲಿ ಖ್ಯಾತ ಆಹಾರ ತಜ್ಞ ಮತ್ತು ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಘು ಅವರ ಹಠಾತ್ ಸಾವು ತುಂಬಲಾರದ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ.

ಅವರ ಕುಟುಂಬ ವರ್ಗದ ದು:ಖದಲ್ಲಿ‌ ನಾನೂ ಭಾಗಿಯಾಗಿದ್ದೇನೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular