ಬಡವರಿಗೆ ಹಣದಾಸೆ ತೋರಿಸಿ ಅಕ್ರಮವಾಗಿ ಪಡಿತರ ಅಕ್ಕಿ ಖರೀದಿಸಿ ಬೇರೆ ರಾಜ್ಯಕ್ಕೆ ಹೆಚ್ಚಿನ ಬೆಲೆ ಸಾಗಿಸಲು ಸಂಗ್ರಹ ಮಾಡಿದ ಗೂಡೌನ ಮೇಲೆ ಹುಬ್ಬಳ್ಳಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಪಡಿತರ ಅಕ್ಕಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಸುದ್ದಿ ಟಿವಿ ವರದಿ ಮಾಡಿದೆ.
ಹುಬ್ಬಳ್ಳಿ ಅಮರಗೋಳ ಎಪಿಎಂಸಿ ಯಾರ್ಡದಲ್ಲಿರುವ ದಾಸ್ತಾನು ಮಳಿಗೆ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು, ಸುಮಾರು 50 ಕೆಜಿಯ 5 ಲಕ್ಷ ರೂಪಾಯಿ ಮೌಲ್ಯದ 450 ಚೀಲ ಪಡಿತರ ಅಕ್ಕಿ ಹಾಗೂ ನಾಲ್ಕು ವಾಹನಗಳ ಸೇರಿ ಒಂಬತ್ತು ಲಕ್ಷ ಮೌಲ್ಯದ ಅಕ್ಕಿ ಹಾಗೂ ನಾಲ್ಕು ವಾಹನ ವಶಕ್ಕೆ ಪಡೆದಿದ್ದಾರೆ.
ಷಣ್ಮುಖಪ್ಪ ಬಿನ್ ಚೆನ್ನಪ್ಪ ಬೆಟಗೇರಿ ಈತ ಸರ್ಕಾರದಿಂದ ಬಿಪಿಎಲ್ ಕಾರ್ಡದಾರರಿಗೆ ಉಚಿತವಾಗಿ ಪೂರೈಸುವ ಪಡಿತರ ಅಕ್ಕಿಯನ್ನು 10 ರಿಂದ 15 ರೂಪಾಯಿ ಬೆಲೆಗೆ ಬಡವರಿಗೆ ಹಣದಾಸೆ ತೋರಿಸಿ ಸಾರ್ವಜನಿಕರಿಂದ ಖರೀದಿಸಿ ಮಾಡಿ, ಬಳಿಕ ಅದೇ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಂಜುನಾಥ ಹರ್ಲಾಪುರ ಎಂಬಾತನಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಮಂಜುನಾಥ ಹರ್ಲಾಪುರ ವ್ಯಕ್ತಿಯು ಈತನು ಸುಮಾರು 23 ರಿಂದ 25 ರೂಪಾಯಿಗೆ ರೂಪಾಯಿ ಹೆಚ್ಚಿನ ಬೆಲೆಗೆ ಮಾಹಾರಾಷ್ಟ್ರ ರಾಜ್ಯಕ್ಕೆ ಮಾರಾಟ ಮಾಡುವ ವಿಚಾರ ಸಿಸಿಬಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಸುದ್ದಿ ಟಿವಿ ವರದಿ ಮಾಡಿದೆ.
ಅಕ್ರಮ ಪಡಿತರ ಅಕ್ಕಿ ಅಕ್ರಮ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ವಾಹನಗಳ ಸಮೇತ ಐವರನ್ನು ಬಂಧಿಸಿ ಹುಬ್ಬಳ್ಳಿ ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಇನ್ಸಪೆಕ್ಟರ್ ಬಾಳಪ್ಪ ಮಂಟೂರ ರವರು ಮುಂದಿನ ತನಿಖೆ ಕೈಗೊಂಡಿದ್ದಾರೆ.