ಕೊರೊನ ವೈರಸ್ ಹರಡುವುದು ಕಡಿಮೆಯಾಗಿರುವ ನಡುವೆಯೇ ಇದೀಗ ದೇಶದಲ್ಲಿ ಎಚ್3ಎನ್2 ವೈರಸ್ ಹರಡುವ ಭೀತಿ ಎದುರಾಗಿದ್ದು ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ತಜ್ಞ ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ರೋಗಿಗಳಲ್ಲಿ ತೀವ್ರ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಳ್ಳಲಿದ್ದು ಸುಮಾರು 1 ತಿಂಗಳು ಕಾಡಲಿದೆ. ಈ ಹಿನ್ನೆಲೆಯಲ್ಲಿ ನಾಳೆ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ನಾಳೆ ನಡೆಯಲಿರುವ ಸಭೆಯಲ್ಲಿ ಜನರು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಗೈಡ್ ಲೈನ್ ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ರೋಗ ತಗುಲಿದ ವ್ಯಕ್ತಿ ಸೀನಿದರೆ, ಕೆಮ್ಮಿದರೆ ಸಾಕು ಸುಮಾರು 7-8 ಜನರಿಗೆ ವೈರಸ್ ಹರಡಲಿದೆ. ಹಾಗಾಗಿ ಜನರು ರೋಗ ಹರಡದಂತೆ ತಡೆಯಲು ಮಾಸ್ಕ್ ಧರಿಸುವಬೇಕು. ಸ್ಯಾನಿಟೈಸರ್ ಬಳಸಬೇಕು ಎಂದು ಹೇಳಿದ್ದಾರೆ.
ಎಚ್3ಎನ್2 ಸೋಂಕು ಹರಡಿದ ರೋಗಿಗಳಲ್ಲಿ ಸುಸ್ತು ಕಾಣಿಸಿಕೊಳ್ಳಲದೆ. ತೀವ್ರ ಉಸಿರಾಟದ ತೊಂದರೆಯೂ ಕಂಡು ಬರಲಿದೆ ಎಂದು ತಜ್ಞರು ತಿಳಿಸಿದ್ದಾರೆ.


