Friday, September 20, 2024
Google search engine
Homeಮುಖಪುಟತಮಿಳುನಾಡು - ಪ್ರತಿ ತಿಂಗಳು ಮಹಿಳೆಗೆ 1000 ರೂ ನೆರವು - ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್

ತಮಿಳುನಾಡು – ಪ್ರತಿ ತಿಂಗಳು ಮಹಿಳೆಗೆ 1000 ರೂ ನೆರವು – ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್

ಆಡಳಿತಾರೂಢ ಡಿಎಂಕೆಯು ತಮಿಳುನಾಡಿನ ಬಡಕುಟುಂಬದ ಮುಖ್ಯಸ್ಥ ಮಹಿಳೆ ಮಾಸಿಕ ನೆರವು ನೀಡುವ ಯೋಜನೆಯನ್ನು ಮುಂಬರುವ ರಾಜ್ಯ ಬಜೆಟ್ ನಲ್ಲಿ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.

ಫೆಬ್ರವರಿ 27ರಂದು ನಡೆಯಲಿರುವ ಈರೋಡ್ ಉಪಚುನಾವಣೆಯ ಪ್ರಚಾರದ ಕೊನೆಯ ದಿನದಂದು ಡಿಎಂಕೆ ಅಧ್ಯಕ್ಷರೂ ಆದ ಸ್ಟಾಲಿನ್ ತಮ್ಮ ಪಕ್ಷವು ತನ್ನ ಭರವಸೆಗಳನ್ನು ಕಾರ್ಯಗತಗೊಳಿಸಲು ಎಂದಿಗೂ ವಿಫಲವಾಗಿಲ್ಲ ಎಂದು ತಿಳಿಸಿದ್ದಾರೆ.

ಕುಟುಂಬದ ಪ್ರತಿ ಮಹಿಳೆಗೆ ತಿಂಗಳಿಗೆ 1,000 ರೂಗಳನ್ನು ಒದಗಿಸುವ ಡಿಎಂಕೆಯ ಚುನಾವಣಾ ಭರವಸೆಯನ್ನು ಖಂಡಿತವಾಗಿಯೂ ಜಾಋಇಗೆ ತರಲಾಗುವುದು ಎಂದು ಹೇಳಿದ್ದಾರೆ.

ಈ ಯೋಜನೆಯ ಅನುಷ್ಟಾನದ ದಿನಾಂಕವನ್ನು ಮಾರ್ಚ್ ನಲ್ಲಿ ನಡೆಯುವ ಬಜೆಟ್ ಅಧಿವೇಶನದಲ್ಲಿ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.

ಡಿಎಂಕೆಯ ಚುನಾವಣಾ ಭರವಸೆಗಳಲ್ಲಿ ಶೇಕಡಾ 85 ರಷ್ಟು ಅನುಷ್ಠಾನಗೊಂಡಿದೆ ಮತ್ತು ಉಳಿದವುಗಳನ್ನು ಈ ವರ್ಷಾಂತ್ಯದೊಳಗೆ ಮಾಡಲಾಗುವುದು ಎಂದು ಸಿಎಂ ಹೇಳಿದರು.

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ರಿಯಾಯಿತಿ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಉಪಹಾರ ಮತ್ತು ರೈತರಿಗೆ ಉಚಿತ ವಿದ್ಯುತ್ ನೀಡುತ್ತಿರುವುದಾಗಿ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular