ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಮ್ಮ ಮೊದಲ ಬಜೆಟ್ ಮಂಡಿಸಿದ್ದು ಭರಪೂರ ಭರವಸೆಗಳನ್ನು ನೀಡಿದ್ದಾರೆ. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿರುವ ಬಜೆಟ್ ಇದಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
2023ನೇ ಸಾಲಿನ ಬಜೆಟ್ ನ ಮುಖ್ಯಾಂಶಗಳು
1, ಬೆಂಗಳೂರು ನಗರಾಭಿವೃದ್ಧಿಗೆ 10 ಸಾವಿರ ಕೋಟಿ ನಿಗದಿ
2. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ರೂ ಸಾಲ
3. ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತರ ಗೌರವ ಧನ 1 ಸಾವಿರ ರೂಪಾಯಿ ಹೆಚ್ಚಳ
4. ತಿಪಟೂರಿನಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯ ಸ್ಥಾಪನೆ
5. ನಮ್ಮ ನಲ್ಮೆ ಹೆಸರಿನ ಹೊಸ ಯೋಜನೆ
6. ಮಕ್ಕಳಿಗೆ ವಾತ್ಸಲ್ಯ ಯೋಜನೆ
7. ರಾಯಚೂರಿನಲ್ಲಿ ಏಮ್ಸ್ ಮಾದರಿಯ
8. 31 ವಸತಿ ಶಾಲೆಗಳ ನಿರ್ಮಾಣಕ್ಕೆ 96 ಕೋಟಿ. ಇದರಿಂದ 7,800 ವಿದ್ಯಾರ್ಥಿಗಳಿಗೆ ಅನುಕೂಲ
9. ಶಿಕ್ಷಣಕ್ಕೆ 37 ಸಾವಿರ ಕೋಟಿ ಮೀಸಲು
10. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆಗೆ 500 ಕೋಟಿ ರೂ ವೆಚ್ಚ
11. ಭೂರಹಿತ ಮಹಿಳೆಯರಿಗೆ ಮಾಸಿಕ 500 ಪ್ರೋತ್ಸಾಹ ಧನ
12. 175 ಕೋಟಿ ರೂಗಳ ವೆಚ್ಚದಲ್ಲಿ 150 ಜಂಕ್ಷನ್ ಗಳ ನಿರ್ಮಾಣ
13. ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
14. ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಹಳ್ಳಿ ಮುತ್ತು ಯೋಜನೆ
15. ಹೊಸ 5 ಲಕ್ಷ ಮನೆಗಳ ನಿರ್ಮಾಣಕ್ಕಾಗಿ 5 ಸಾವಿರ ಕೋಟಿ ನಿಗದಿ
16. ಸರ್ಕಾರಿ ಜಾಗದಲ್ಲಿರುವ ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ
17. ರೈತ ವಿದ್ಯಾನಿಧಿ ಯೋಜನೆಯಡಿಯಲ್ಲಿ 10.32 ಲಕ್ಷ ವಿದ್ಯಾರ್ಥಿಗಳಿಗೆ 125 ಕೋಟಿ ನಿಗದಿ
18. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಿಗಮಗಳಿಗೆ 795 ಕೋಟಿ ನಿಗದಿ
19. ಟ್ರಾಫಿಕ್ ನಿಯಂತ್ರಣಕ್ಕೆ 150 ಕೋಟಿ ವೆಚ್ಚ
20. ಪ್ರವಾಸಿ ತಾಣಗಳ ಗೈಡ್ ಗಳ ಗೌರವಧನ ಹೆಚ್ಚಳ


