Sunday, September 8, 2024
Google search engine
Homeಆರ್ಥಿಕಜನಸ್ನೇಹಿ ಬಜೆಟ್ - ಸಚಿವ ಗೋವಿಂದ ಕಾರಜೋಳ ಬಣ್ಣನೆ

ಜನಸ್ನೇಹಿ ಬಜೆಟ್ – ಸಚಿವ ಗೋವಿಂದ ಕಾರಜೋಳ ಬಣ್ಣನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್ ರೈತರು, ಮಹಿಳೆಯರು ಮತ್ತು ಎಲ್ಲಾ ವರ್ಗದ ಜನರ ಹಿತಕಾಯುವ ಜನಪರ ಜನಸ್ನೇಹಿ ಬಜೆಟ್ ಆಗಿದೆ ಎಂದು ಸಚಿವ ಗೋವಿಂದ ಕಾರಜೋಳ ಬಣ್ಣಿಸಿದ್ದಾರೆ.

ನೀರಾವರಿ ವಲಯಕ್ಕೆ 25000 ಕೋಟಿ ರೂಪಾಯಿಯ ಅನುದಾನ ನೀಡಿರುವುದು ಮತ್ತು ತನ್ಮೂಲಕ 1.50 ಲಕ್ಷ ಹೆಕ್ಟೇರ್ ನೀರಾವರಿ ಸಾಮರ್ಥ್ಯ ಸೃಜಿಸಲು ಅನುವು ಮಾಡಲು ಅನುದಾನ ಒದಗಿಸಿರುವುದು ರಾಜ್ಯದ ಎಲ್ಲೆಡೆ ನೀರಾವರಿ ಸೌಲಭ್ಯವನ್ನು ವಿಸ್ತರಿಸಬೇಕೆಂಬ ನಮ್ಮ ಪಕ್ಷದ ಬದ್ಧತೆಗೆ ಮುಂಗಡ ಪತ್ರದ ಬೆಂಬಲ ನೀಡಿರುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಹೇಳಿದ್ದಾರೆ.

ಮಹಿಳೆಯರಿಗೆ ಗೃಹಿಣಿ ಶಕ್ತಿ ಯೋಜನೆ, ವಿದ್ಯಾರ್ಥಿನಿಯರಿಗೆ ಉಚಿತ ಬಸ್ಪಾಸ್ ಸೌಲಭ್ಯ, ನಿರುದ್ಯೋಗಿಗಳಿಗೆ 2,000 ರೂ. ಮಾಶಾಸನ ನೀಡುವ ಯೋಜನೆಗಳು ಕಾರ್ಮಿಕರು ಮತ್ತು ಮಹಿಳಾ ಕಾರ್ಮಿಕರಿಗೆ 500 ರೂ. ಮಾಶಾಸನ, ರೈತರ ಪರವಾಗಿ ʼಭೂ ಸಿರಿ” ಯೋಜನೆ, ಕ್ರಮಗಳನ್ನು ಈ ಮುಂಗಡ ಪತ್ರದಲ್ಲಿ ಘೋಷಿಸಲಾಗಿದೆ. ನೇಕಾರರು ಮತ್ತು ಇತರ ಉದ್ಯಮಿಗಳಿಗೆ ಪ್ರೋತ್ಸಾಹ ಧನವನ್ನು ವಿಸ್ತರಿಸುವುದು ಅವರೆಲ್ಲರ ಬದುಕಿನಲ್ಲಿ ಅತ್ಯಂತ ಗುಣಾತ್ಮಕ ಬದಲಾವಣೆಗಳನ್ನು ತರಲಿದೆ ಎಂದು ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಡವರ ಮಕ್ಕಳಿಗೆ ನಿಗಮಗಳ ಮೂಲಕ ಸ್ವಯಂ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಅನುದಾನ ಒದಗಿಸಿರುವುದು ಉದ್ಯೋಗ ಸೃಷ್ಟಿಗೆ ಅನುಕೂಲ ಕಲ್ಪಿಸಿದೆ ಎಂದು ಹೇಳಿದ್ದಾರೆ.

ಈ ಮುಂಗಡ ಪತ್ರದ ಅನುಷ್ಟಾನದಿಂದ ಉದ್ಯೋಗ ಸೃಷ್ಟಿ ಸಮಾನತೆಯ ಕಲ್ಪನೆಗಳನ್ನು ನೈಜ ರೂಪದಲ್ಲಿಯ ಅನುಷ್ಟಾನ ಜನರ ಬದುಕಿನಲ್ಲಿ ಗುಣಾತ್ಮಕವಾದ ಬದಲಾವಣೆ ಮತ್ತು ಸಮಗ್ರ ಅಭಿವೃದ್ಧಿಯ ಚಿಂತನೆಗಳನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಚಿಕಿತ್ಸಕ ಬುದ್ದಿಯಿಂದ ವಿನ್ಯಾಸಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular