Thursday, January 29, 2026
Google search engine
Homeಮುಖಪುಟಕಾಕಿನಾಡದಲ್ಲಿ ತೈಲ ಸಂಗ್ರಹಣೆ ಟ್ಯಾಂಕರ್ ಗೆ ಇಳಿದ 7 ಮಂದಿ ಸಾವು

ಕಾಕಿನಾಡದಲ್ಲಿ ತೈಲ ಸಂಗ್ರಹಣೆ ಟ್ಯಾಂಕರ್ ಗೆ ಇಳಿದ 7 ಮಂದಿ ಸಾವು

ತೈಲ ಸಂಗ್ರಹಣೆ ಟ್ಯಾಂಕರ್ ಗೆ ಪ್ರವೇಶಿಸಿದ ಕಂಪನಿಯೊಂದರ ಏಳು ಕಾರ್ಮಿಕರು ರಾಸಾಯನಿಕ ಉಸಿರಾಟದಿಂದ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪದ್ದಾಪುರಂ ಮಂಡಲದಲ್ಲಿ ಗುರುವಾರ ನಡೆದಿದೆ.

ಕಾಕಿನಾಡ ಜಿಲ್ಲೆಯ ಜಿ.ರಾಗಂಪೇಟೆಯಲ್ಲಿರುವ ಅಂಬಟಿ ಸುಬ್ಬಣ್ಣ ತೈಲ ಕಂಪನಿಯಲ್ಲಿ ಈ ದುರ್ಘಟನೆ ನಡೆದಿದೆ.

ವರದಿಗಳ ಪ್ರಕಾರ ಕಾರ್ಮಿಕರು ಒಬ್ಬರ ನಂತರ ಒಬ್ಬರು ಟ್ಯಾಂಕ್ ಗೆ ಪ್ರವೇಶಿಸಿ ಪ್ರಜ್ಞಾಹೀನರಾದರು. ಎಷ್ಟೋ ಹೊತ್ತಾದರೂ ಹೊರಗೆ ಬಾರದೇ ಇದ್ದ ಕಾರಣ, ಇತರೆ ಕಾರ್ಮಿಕರು ಟ್ಯಾಂಕರ್ ತುಂಡರಿಸಿ ನೋಡಿದಾಗ 7 ಮಂದಿ ಮೃತಪಟ್ಟಿರುವುದು ಕಂಡು ಬಂದಿದೆ.

ಈ ಟ್ಯಾಂಕ್ ಗಳನ್ನು ಕಚ್ಚಾ ತೈಲ ಸಂಗ್ರಹಿಸಲು ಬಳಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಟ್ಯಾಂಕ್ ಗಳನ್ನು ಆಗಾಗ್ಗೆ ಸ್ವಚ್ಛಗೊಳಿಸಲಾಗುತ್ತದೆ ಮತ್ತು ಕಾರ್ಮಿಕರು ಗುರುವಾರ ಸ್ವಚ್ಛಗೊಳಿಸಲು ಟ್ಯಾಂಕರ್ ಗೆ ಇಳಿದಿದ್ದರು ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular