ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭಾರೀ ಭೂಕಂಪನದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 16 ಸಾವಿರಕ್ಕೆ ಏರಿದೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ.
ಸೋಮವಾರ 7.8 ತೀವ್ರತೆಯ ಭೂಕಂಪನದಿಂದ ಸಾವಿನ ಸಂಖ್ಯ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. 72 ಗಂಟೆಗಳಿಂದಲೂ ರಕ್ಷಣಾ ಕಾರ್ಯ ಮುಂದುವರೆದಿದೆ.
ಬದುಕುಳಿದವರು ಆಹಾರ ಮತ್ತು ಆಶ್ರಯಕ್ಕಾಗಿ ಪರದಾಡುವಂತೆ ಆಗಿದೆ. ಕೆಲವು ಸಂದರ್ಭದಲ್ಲಿ ಅವರ ಸಂಬಂಧಿಕರು ರಕ್ಷಣೆಗಾಗಿ ಕರೆದಂತೆ ಅಸಹಾಯಕತೆಯಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಟರ್ಕಿಯ ಹಟೇ ಪ್ರಾಂತ್ಯದ ಶಿಶುವಿಹಾರದ ಶಿಕ್ಷಕ ಸೆಮಿರೆ ಕೋಬನ್ ಹೇಳುವಂತೆ ನನ್ನ ಸೋದರಳಿಯ, ನನ್ನ ಅತ್ತಿಗೆ ಮತ್ತು ನನ್ನ ಅತ್ತಿಗೆಯ ಸಹೋದರಿ ಅವಶೇಷಗಳಡಿಯಲ್ಲಿ ಹೂತು ಹೋಗಿದ್ದಾರೆ. ಅವರು ಅವಶೇಷಗಳ ಅಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಬದುಕುಳಿದಿರುವ ಲಕ್ಷಣಗಳಿಲ್ಲ ಎಂದು ಹೇಳಿದ್ದಾರೆ.
ನಾವು ಅವರನ್ನು ತಲುಪಲು ಸಾಧ್ಯವಿಲ್ಲ. ನಾವು ಅವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದೇವೆ. ಆದರೆ ಅವರು ಪ್ರತಿಕ್ರಿಯಿಸು್ತಿಲ್ಲ. ನಾವು ಸಹಾಯಕ್ಕಾಗಿ ಕಾಯುತ್ತಿದ್ದೇವೆ . ಈಗ 48 ಗಂಟೆಗಳು ಕಳೆದಿವೆ ಎಂದು ನೋವಿನಿಂದ ಹೇಳಿದರು.
ಆನ್ ಲೈನ್ ನಲ್ಲಿ ಟೀಕೆಗಳು ಹೆಚ್ಚಾಗುತ್ತಿದ್ದಂತೆ ಎರ್ಡೋಗನ್ ಅವರು ಭೂಕಂಪನದ ಕೇಂದ್ರ ಬಿಂದು ಕಹ್ರಮನ್ ಮರಸ್ ಗೆ ಅತ್ಯಂತ ಕಠಿಣವಾದ ಸ್ಥಳಗಳಲ್ಲಿ ಒಂದನ್ನು ಭೇಟಿ ಮಾಡಿದರು ಎಂದು ಒಪ್ಪಿಕೊಂಡಿದ್ದಾರೆ.