Sunday, September 8, 2024
Google search engine
Homeಮುಖಪುಟಪೂರ್ವ ಟರ್ಕಿ - ಸಿರಿಯಾ ಗಡಿಯಲ್ಲಿ ಭೂಕಂಪನ ಸಾವಿನ ಸಂಖ್ಯೆ 5 ಸಾವಿರಕ್ಕೆ ಏರಿಕೆ

ಪೂರ್ವ ಟರ್ಕಿ – ಸಿರಿಯಾ ಗಡಿಯಲ್ಲಿ ಭೂಕಂಪನ ಸಾವಿನ ಸಂಖ್ಯೆ 5 ಸಾವಿರಕ್ಕೆ ಏರಿಕೆ

ಪೂರ್ವ ಟರ್ಕಿ ಮತ್ತು ನೆರೆಯ ಸಿರಿಯಾದಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪನಗಳಿಂದ ಉರುಳಿಬಿದ್ದ ಸಾವಿರಾರು ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಬದುಕುಳಿದವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ಭೂಕಂಪನದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 5 ಸಾವಿರಕ್ಕೆ ಏರಿಕೆಯಾಗಿದೆ.

ಸಿರಿಯಾದ 12 ವರ್ಷಗಳ ಅಂತರ್ಯುದ್ಧ ಮತ್ತು ನಿರಾಶ್ರಿತರ ಬಿಕ್ಕಟ್ಟಿನಿಂದ ಸುತ್ತುವರಿದ ಪ್ರದೇಶದಲ್ಲಿ ಹರಡಿರುವ ಲೋಹ ಮತ್ತು ಕಾಂಕ್ರೀಟ್ ನ ಗೋಜಲುಗಳ ನಡುವೆ ವಿಪತ್ತು ನಿರ್ವಹಣ ಸಿಬ್ಬಂದಿ ಬದುಕುಳಿದವರನ್ನು ಹುಡುಕುತ್ತಿರುವಾಗ ಮೃತದೇಹಗಳನ್ನು ಹೊರ ತೆಗೆದಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಹಲವು ನಗರಗಳಲ್ಲಿ 5,600ಕ್ಕೂ ಹೆಚ್ಚು ಕಟ್ಟಡಗಳು ನೆಲಸಮಗೊಂಡಿವೆ. ಇದರಲ್ಲಿ ಟರ್ಕಿ ಮತ್ತು ಸಿರಿಯನ್ ವಿಪತ್ತು ನಿರ್ವಹಣ ತಂಡಗಳು ಅವಶೇಷಗಳಡಿ ನಿಲುಕಿರುವ ಮೃತ ದೇಹಗಳನ್ನು ಹೊರ ತೆಗೆಯುವ ಕೆಲಸ ನಡೆಸಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular