Monday, December 23, 2024
Google search engine
Homeಜಿಲ್ಲೆಯಾವ ರಾಜಕಾರಣಿಗಳೂ ತೆಂಗು ಬೆಳೆಗಾರರ ಪರ ನಿಲ್ಲಲಿಲ್ಲ - ಶ್ರೀಕಾಂತ್ ಕೆಳಹಟ್ಟಿ

ಯಾವ ರಾಜಕಾರಣಿಗಳೂ ತೆಂಗು ಬೆಳೆಗಾರರ ಪರ ನಿಲ್ಲಲಿಲ್ಲ – ಶ್ರೀಕಾಂತ್ ಕೆಳಹಟ್ಟಿ

ಕೊಬ್ಬರಿ ತಿಪಟೂರಿನ ವಾಣಿಜ್ಯ ಉತ್ಪನ್ನ. ಸ್ವಾತಂತ್ರ್ಯ ಭಾರತದ ನಂತರ ತಿಪಟೂರು ತಾಲ್ಲೂಕಿನ ರಾಜಕೀಯ ಇತಿಹಾಸ ನೋಡಿದರೆ ಎಲ್ಲ ಜನಪ್ರತಿನಿಧಿಗಳು ಹುಟ್ಟಿರುವುದು ಕೃಷಿ ಉತ್ಪನ್ನ ಮಾರುಕಟ್ಟೆಯಿಂದಲೆ! ಎಲ್ಲರೂ ತೆಂಗು ಬೆಳೆಗಾರರ ಆರ್ಥಿಕತೆಯನ್ನು ತನ್ನ ಮುಷ್ಟಿಯಲ್ಲಿಟ್ಟುಕೊಂಡು ಅಧಿಕಾರಕ್ಕೆ ಬಂದ ವ್ಯಾಪಾರಸ್ಥರೆ! ಎಲ್ಲರೂ ಕೊಬ್ಬರಿ ದಲ್ಲಾಳಿಗಳ, ರವಾನೆದಾರರ ಹಿತ ಕಾಪಾಡಿದವರೆ ಆಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಶ್ರೀಕಾಂತ್ ಕೆಳಹಟ್ಟಿ ತಿಳಿಸಿದ್ದಾರೆ.

ರೈತ ಸಂಕಷ್ಟದಲ್ಲಿದ್ದಾಗ, ಅಧಿಕಾರದಲ್ಲಿದ್ದ ಯಾವ ಜನಪ್ರತಿನಿಧಿಯೂ ಬೆಳೆಗಾರರ ಪರವಾಗಿ ನಿಂತ ನಿದರ್ಶನಗಳೇ ಇಲ್ಲ. ಅಷ್ಟೇ ಏಕೆ ವಿಧಾನಸಭೆಯಲ್ಲೂ ಸೊಲ್ಲೆತ್ತಿಲ್ಲ. ಬದಲಾಗಿ ರೈತರೇ ತಿಂಗಳುಗಟ್ಟಲೆ ಪ್ರತಿಭಟನೆ ಮಾಡಿ ನ್ಯಾಯ ದೊರಕಿಸಿಕೊಳ್ಳಬೇಕಾದ ಪರಿಸ್ಥಿತಿಯಿದೆ.

2002 ರಿಂದ ಇತ್ತೀಚಿನವರೆಗೂ ಬೆಲೆ ಕುಸಿದಾಗಲೆಲ್ಲ ಕ್ಷೇತ್ರದ ಬೆಳೆಗಾರರ ಸಂಕಷ್ಟವನ್ನು ಅರಿತು ಅವರ ಪರವಾಗಿ ನಿಲ್ಲಬೇಕಾದ ಜನಪ್ರತಿನಿಧಿಗಳು, ಸರ್ಕಾರವನ್ನು ಪ್ರತಿನಿಧಿಸಿ ಸಂಧಾನಕ್ಕೆ ಬಂದ ಉದಾಹರಣೆಗಳೇ ಹೆಚ್ಚು. ಅದು ಇಂದಿಗೂ ಮುಂದುವರೆದಿದೆ.

ಸಾಂದರ್ಭಿಕ ಫೋಟೋ

ಇದೀಗ ಬಿಜೆಪಿ ಆಡಳಿತದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿಗೊಂಡು ಮಾರುಕಟ್ಟೆಗಳು ಮುಚ್ಚುವ ಸ್ಥಿತಿ ಬಂದಿದೆ. ಕೇಂದ್ರದಲ್ಲಿ ಕಾಯ್ದೆ ಹಿಂಪಡೆದು ರಾಜ್ಯದಲ್ಲಿ ಹಿಂಪಡೆಯದಿದ್ದರೂ ಆಡಳಿತ ಪಕ್ಷದ ಶಾಸಕ ಸಚಿವ, ಮಾಜಿ ಶಾಸಕ ಕೂಡ ರೈತ ವಿರೋಧಿ ನೀತಿಯ ವಿರುದ್ದ ತುಟಿ ಬಿಚ್ಚಿಲ್ಲ. ಇದು ಆರಿಸಿ ಕಳುಹಿಸಿದ ಮತದಾರರಿಗೆ ಇವರೆಲ್ಲರೂ ಮಾಡುತ್ತಿರುವ ದ್ರೋಹ. ಇವರ ಆಸಕ್ತಿ ವ್ಯಾಪಾರಸ್ಥರ ಹಿತಾಸಕ್ತಿ ಕಾಪಾಡಿಕೊಳ್ಳುವುದೇ ಆಗಿದೆ.

ತಿಪಟೂರು ತಾಲ್ಲೂಕಿನ ಶೇಕಡ 80 ರಷ್ಟು ಆರ್ಥಿಕತೆ ಕೊಬ್ಬರಿಯಿಂದಲೇ. ಪ್ರತಿಯೊಬ್ಬ ಜನಪ್ರತಿನಿಧಿಯೂ ತಾನು ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೇ ಕೊಬ್ಬರಿ ಹಾಗು ತೆಂಗು ಬೆಳೆಗಾರರ ಬಗ್ಗೆ ಕಾಳಜಿ ವಹಿಸಿ ಬದ್ದರಾಗಿರಬೇಕಾಗಿತ್ತು. ಆದರೆ ಅದು ಇದುವರೆವಿಗೂ ಕನಸಾಗೆ ಉಳಿದಿದೆ.

ಕೆಲ ವರ್ಷಗಳಿಂದ ಕೊಬ್ಬರಿ ಕುರಿತಾದ ಎಲ್ಲ ಹೋರಾಟಗಳಲ್ಲಿ, ಭೂಸಂತ್ರಸ್ಥರ ಹೋರಾಟಗಳಲ್ಲಿ ಹಾಗು ಇನ್ನಿತರ ಎಲ್ಲ ರೈತಪರ ಹೋರಾಟಗಳಲ್ಲಿ ಕೈಜೋಡಿಸುತ್ತಿರುವ ಏಕೈಕ ರಾಜಕಾರಣಿ ಟೂಡಾ ಶಶಿಧರ್. ಇವರು ಪ್ರತಿನಿಧಿಸಲು ಹೊರಟಿರುವ ತಿಪಟೂರು ವಿಧಾನಸಭಾ ಭಾಗದ ಜನರ ಸಮಸ್ಯೆಗಳು ಸಾಕಷ್ಟು.

ರಾಜಕೀಯವಾಗಿ ನೋಡುವುದಾದರೆ ಟೂಡಾ ಅವರದು ಅತ್ಯಂತ ಸರಳ, ಸಹನೆ, ಸಹಿಷ್ಣುತೆಯ ವ್ಯಕ್ತಿತ್ವ. ಕಾಂಗ್ರೆಸ್ ಪಕ್ಷದ ನೀತಿ ಸಿದ್ದಾಂತ ಮೀರಿದವರಲ್ಲ. 20 ವರ್ಷದಿಂದ ಕಾಂಗ್ರೆಸ್ ಸಿದ್ದಾಂತಕ್ಕೆ ದುಡಿದ ಅನುಭವ, ದೂರದೃಷ್ಟಿಯುಳ್ಳ ಕನಸುಗಾರ.

ಎಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಸಹನೆ ಕಳೆದುಕೊಂಡವರಲ್ಲ. ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ನಾಯಕನಾಗಿ ಮಹಿಳೆಯರ ಬಗೆಗಿನ ಕಾಳಜಿಯ ನಡೆ ಪ್ರಶಂಸಾರ್ಹ.

ಸಾಮಾಜಕ ನ್ಯಾಯದ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗುತ್ತಿರುವ ನೀವು ಈ ಬಾರಿ ಎಲ್ಲರ ಮನೆಮಾತಾಗಿದ್ದೀರ. ಬುದ್ಧ, ಬಸವ ಅಂಬೇಡ್ಕರ್ ಹಾಗು ಕ್ಷೇತ್ರದ ಮತದಾರರ ಆಶೀರ್ವಾದ ತಮ್ಮ ಮೇಲಿದೆ. ನಾಡು ಈ ಯುವ ಕ್ರಿಯಾಶೀಲ ರಾಜಕಾರಣಿಯ ನಡೆಯನ್ನು ಹೆಮ್ಮೆಯಿಂದ ಕಾಣುವಂತಾಗಲಿ. ಇಂಥ ನಾಯಕತ್ವ ರಾಜ್ಯಕ್ಕೆ ಮಾದರಿ ಆಗಲಿ.

ಹೊಸ ಕನಸುಗಳೊಂದಿಗೆ ಕೊಬ್ಬರಿ ಮಾರುಕಟ್ಟೆಯ ಹೊರತಾದ ಹೊಸ ನಾಯಕನನ್ನು ಆರಿಸುವ ಭರವಸೆಯೊಂದಿಗೆ…. ಬದಲಾವಣೆ ಬಯಸುತ್ತಾ… ಶಶಿಧರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಶ್ರೀಕಾಂತ್ ಕೆಳಹಟ್ಟಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular