Monday, September 16, 2024
Google search engine
Homeಮುಖಪುಟರಾಜ್ಯ ಸರ್ಕಾರ ತುಮಕೂರು ವಿವಿಗೆ ಅನುದಾನ ನೀಡಿಲ್ಲ - ಡಾ.ಜಿ.ಪರಮೇಶ್ವರ್ ಆರೋಪ

ರಾಜ್ಯ ಸರ್ಕಾರ ತುಮಕೂರು ವಿವಿಗೆ ಅನುದಾನ ನೀಡಿಲ್ಲ – ಡಾ.ಜಿ.ಪರಮೇಶ್ವರ್ ಆರೋಪ

ರಾಜ್ಯ ಸರ್ಕಾರದ ಇತ್ತೀಚಿನ ನಡವಳಿಕೆಯನ್ನು ಗಮನಿಸಿದರೆ ಆರ್ಥಿಕವಾಗಿ ದಿವಾಳಿಯಾಗಿರುವ ಸೂಚನೆಗಳು ಕಂಡು ಬರುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ.

ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಶೂ, ಸಮವಸ್ತ್ರ ಮತ್ತು ಪುಸ್ತಕಗಳನ್ನು ನೀಡಿಲ್ಲ. ಹೈಕೋರ್ಟ್ ಸಹ ಸರ್ಕಾರದ ನಡವಳಿಕೆಗೆ ಛೀಮಾರಿ ಹಾಕಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ತುಮಕೂರು ವಿಶ್ವವಿದ್ಯಾಲಯಕ್ಕೆ ಸೂಕ್ತ ಅನುದಾನ ನೀಡಿಲ್ಲ. ಎಸ್.ಇಪಿ ಮತ್ತು ಟಿಎಸ್.ಪಿ ಅನುದಾನದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಿಸಿರುವುದನ್ನು ಬಿಟ್ಟರೆ, ಬೇರೆ ಕಟ್ಟಡ ಇದುವರೆಗೂ ತಲೆ ಎತ್ತಿಲ್ಲ ಎಂದು ದೂರಿದರು.

ತುಮಕೂರು ರಾಯದುರ್ಗ, ತುಮಕೂರು ದಾವಣಗೆರೆ ರೈಲ್ವೆ ಯೋಜನೆ ನೆನೆಗುದಿಗೆ ಬಿದ್ದಿವೆ. ಇದಕ್ಕೆ ಹಣಕಾಸಿನ ಕೊರತೆಯೇ ಕಾರಣ. ಸರ್ಕಾರ ಈ ಸಾಲಿನ ಬಜೆಟ್ ನಲ್ಲಿ ಎಲ್ಲಾ ಯೋಜನೆಗಳಿಗೆ ಹೆಚ್ಚುವರಿ ಹಣ ಮಂಜೂರು ಮಾಡಬೇಕು. ಹಾಗೆಯೇ ಸರ್ಕಾರದ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಜನರಿಗೆ ತಿಳಿಸಬೇಕು ಎಂದು ಪರಮೇಶ್ವರ್ ಒತ್ತಾಯಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular