ಗುಜರಾತ್ ಹತ್ಯಾಕಾಂಡದಲ್ಲಿ 59 ಜನ ಕರಸೇವಕರ ಹತ್ಯೆಗೆ ಪ್ರತಿಕಾರವಾಗಿ 2 ಸಾವಿರ ಮಂದಿಯನ್ನು ಹತ್ಯೆ ಮಾಡಿದ್ದೇವೆ. ಇದು ಹಿಂದೂಗಳ ಪರಾಕ್ರಮ. ಇದು ಹಿಂದೂಗಳು ಷಂಡರಲ್ಲ ಎಂಬುದನ್ನು ತೋರಿಸುತ್ತದೆ ಎಂದು ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ನಡೆದ ಬಜರಂಗ ದಳ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಹಿಂದೂ ಸಮಾಜ ಯಾವತ್ತೂ ನಪುಂಸಕ ಸಮಾಜವಲ್ಲ. ನಾವು ನಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದೇವೆ. ಗುಜರಾತ್ ಘಟನೆಯನ್ನು ಒಂದು ಬಾರಿ ನೆನಪು ಮಾಡಿಕೊಳ್ಳಿ ತಿಳಿಯುತ್ತದೆ ಎಂದು ಹೇಳಿದ್ದಾರೆ.
ಅಯೋಧ್ಯೆಯ ಮಂದಿರಕ್ಕೋಸ್ಕರ್ 58 ಜನ ಸೈನಿಕರು ಕರ ಸೇವೆಗೋಸ್ಕರ ರೈಲಿನ ಬರಬೇಕಾಯಿತು. ಆ ರೈಲನ್ನು ಸುಟ್ಟು 58 ಕರಸೇವಕರ ಹತ್ಯೆ ಮಾಡಲಾಯಿತು. ಬಳಿಕ ಗುಜರಾತ್ ಯಾವ ರೀತಿ ಉತ್ತರ ಕೊಟ್ಟಿತು ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಶರಣ್ ಪಂಪ್ ವೆಲ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಸವಾಲು ಹಾಕಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಹಿಂದೂತ್ವದ ಫ್ಯಾಕ್ಟರಿ ಮಾಡುತ್ತೇವೆ. ಅನಿವಾರ್ಯ ಅವಶ್ಯಕತೆ ಬಂದರೆ ಹೊಡೆದಾಟ ಮಾಡುತ್ತೇವೆ. ನುಗ್ಗಿ ಹೊಡೆಯುತ್ತೇವೆ ಎಂದು ಪ್ರಚೋದನಾತ್ಮಕ ಭಾಷಣೆ ಮಾಡಿದ್ದಾರೆ.