ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಕವಿಗೋಷ್ಠಿ ವೇದಿಕೆಯಲ್ಲಿದ್ದ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಆರೋಗ್ಯದಲ್ಲಿ ಏರುಪೇರಾಗಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.
ವೇದಿಕೆಯಲ್ಲಿ ಕುಸಿದು ಬಿದ್ದ ಅವರನ್ನು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಚಿಕಿತ್ಸೆ ನೀಡಿದ ಬಳಿಕ ಅವರು ಆರೋಗ್ಯವಾಗಿದ್ದಾರೆ ಎಂದು ಆಪ್ತಮೂಲಗಳು ಸ್ಪಷ್ಟಪಡಿಸಿವೆ.
ಲೇಖಕ ಎಂ.ಜವರಾಜ್ ಅವರು ದಾವಣಗೆರೆ ಹರಿಹರದ ಕವಿಗೋಷ್ಠಿ ವೇದಿಕೆಯಲ್ಲಿ ಆರೋಗ್ಯದಲ್ಲಿ ಏರುಪೇರಾಗಿ ತಾವು ಅಸ್ವಸ್ಥರಾದ ಸುದ್ದಿ ತಿಳಿದು ಬೇಸರ ಮತ್ತು ಆತಂಕವಾಯ್ತು ಎಂದು ಹೇಳಿದ್ದಾರೆ.
ಸದ್ಯ ಈಗ ತಾವೇ ಆರೋಗ್ಯವಾಗಿರುವುದಾಗಿ ಮಾಧ್ಯಮಗಳ ಮೂಲಕ ತಿಳಿಸಿದ್ದೀರಿ. ಇದು ಸಂತೋಷವೇ ಸರಿ. ಆದರು ತಾವು ಮುಂದೆ ಆರೋಗ್ಯದ ಕಡೆ ಗಮನ ಹರಿಸಿ ಸಾರ್ವಜನಿಕ ಮತ್ತು ಸಾಹಿತ್ಯ ವಲಯದಲ್ಲಿ ಎಂದಿನಂತೆ ಲವಲವಿಕೆಯಿಂದ ಸಕ್ರಿಯರಾಗಬೇಕೆಂಬ ಕಾಳಜಿ ಮತ್ತು ಆಶಯ ನನ್ನದು ಎಂದು ತಿಳಿಸಿದ್ದಾರೆ.
ಬಂಡಾಯ ಸಾಹಿತ್ಯ ಸಂಘಟನೆಯ ತುಮಕೂರು ಜಿಲ್ಲಾ ಸಂಯೋಜಕ ಡಾ.ಓ.ನಾಗರಾಜ್ ಮಾತನಾಡಿ, ಬರಗೂರು ಆರೋಗ್ಯದಲ್ಲಿ ಏರುಪೇರಾಗಿದ್ದು ಆತಂಕ ಉಂಟು ಮಾಡಿತು. ಬಳಿಕ ಕಾರ್ಯಕ್ರಮ ಆಯೋಜಕರಾದ ರಾಮಚಂದ್ರಪ್ಪ ಅವರಿಗೆ ಕರೆ ಮಾಡಿದಾಗ, ಬರಗೂರು ರಾಮಚಂದ್ರಪ್ಪ ಮೊದಲಿನಂತೆ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು. ಇದರಿಂದ ಸಮಾಧಾನವಾಯಿತು ಎಂದು ನ್ಯೂಸ್ ಕಿಟ್. ಇನ್ ಗೆ ತಿಳಿಸಿದ್ದಾರೆ.