ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಶಕ್ತಿ ಪ್ರದರ್ಶನ ಮಾಡಲು ಜನವರಿ 18ರಂದು ತೆಲಂಗಾಣದ ಖಮ್ಮಮ್ ನಲ್ಲಿ ಬಿಆರ್.ಎಸ್ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಕರೆದಿರುವ ಸಾರ್ವಜನಿಕ ಸಭೆಯಲ್ಲಿ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಪ್ರಮುಖ ವಿರೋಧ ಪಕ್ಷದ ನಾಯಕರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಡೆಕನ್ ಕ್ರಾನಿಕಲ್ ವರದಿ ಮಾಡಿದೆ.
ಡಿಸೆಂಬರ್ 8 ರಂದು ಟಿಆರ್‌ಎಸ್‌ನಿಂದ ಬಿಆರ್‌ಎಸ್‌ಗೆ ಪಕ್ಷದ ಹೆಸರನ್ನು ಬದಲಾಯಿಸಲು ಚುನಾವಣಾ ಆಯೋಗ ಅನುಮೋದನೆ ನೀಡಿದ ನಂತರ ಇದು ಮೊದಲ ಸಾರ್ವಜನಿಕ ಸಭೆಯಾಗಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ಕೇರಳ ಸಿಎಂ ಪಿಣರಾಯಿ ವಿಜಯನ್, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಮತ್ತು ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಅವರನ್ನು ಸಿಎಂ ಆಹ್ವಾನಿಸಿದ್ದಾರೆ.
ಅಲ್ಲದೆ. ಜೆಡಿಎಸ್ ನಾಯಕ ಮತ್ತು ಕರ್ನಾಟಕದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೊತೆಗೆ ಕೆಲವು ಪ್ರಾದೇಶಿಕ ಪಕ್ಷದ ನಾಯಕರು, ಬಿಆರ್‌ಎಸ್ ರಾಷ್ಟ್ರೀಯ ರಾಜಕೀಯ ಗುರಿಗಳು ಮತ್ತು ಉದ್ದೇಶಗಳು ಮತ್ತು 2024 ರ ಲೋಕಸಭೆ ಚುನಾವಣೆಯಲ್ಲಿ ಆಯ್ಕೆಯಾದರೆ ತಾನು ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲು ಸಿಎಂ ಬಯಸುತ್ತಾರೆ.
ಸಾರ್ವಜನಿಕ ಸಭೆಗೆ ಐದು ಲಕ್ಷ ಜನರನ್ನು ಸೇರಿಸಿ ಬಿಆರ್‌ಎಸ್ ಮೊದಲ ಸಾರ್ವಜನಿಕ ಸಭೆಯನ್ನು ಅದ್ಧೂರಿಯಾಗಿ ಮಾಡಲು ಖಮ್ಮಂ ಜಿಲ್ಲಾ ಪಕ್ಷದ ಮುಖಂಡರಿಗೆ ಸಿಎಂ ಗುರಿ ನೀಡಿದ್ದಾರೆ ಎಂದು ಕ್ರಾನಿಕಲ್ ವರದಿಯಲ್ಲಿ ತಿಳಿಸಿದೆ.